ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ 20 ಸದಸ್ಯರ ನಾಮಕರಣ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ 20 ಸದಸ್ಯರನ್ನು ನಾಮಕರಣ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಲಿಕೆಗೆ ನಡೆದ ಮೊದಲ ನಾಮಕರಣ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನಾಮಕರಣವನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರದ್ದು ಮಾಡ­ಲಾಗಿತ್ತು. ಅದನ್ನು ಪ್ರಶ್ನಿಸಿ ಸದ­ಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ­ದ್ದರು. ನಾಮಕರಣ ರದ್ದತಿ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿತ್ತು. ಇತ್ತೀಚೆಗೆ ಈ ತಡೆಯಾಜ್ಞೆ ತೆರವು ಮಾಡಲಾಗಿತ್ತು. ಆದ್ದ­ರಿಂದ ಹೊಸದಾಗಿ ಸದಸ್ಯರನ್ನು ನಾಮ­ಕರಣ ಮಾಡಿ ಆಗಸ್ಟ್‌ 30ರಂದು ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಸದಸ್ಯರ ನಾಮಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ­ಕೋರ್ಟ್‌­ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್‌ ಮೇಲ್ಮನವಿ ಬಗ್ಗೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಈ ನಾಮಕರಣ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಾಮಕರಣ ಸದಸ್ಯರು: ಎಚ್‌.­ಎಸ್‌.­ಸೈಯದ್‌ ಅಮಾನುಲ್ಲಾ (ಕೆ.ಆರ್‌.­ಪುರ), ಎಚ್‌.ರಾಮಮೂರ್ತಿ (ಯಶ­ವಂತಪುರ), ಜಿ.ಎಸ್‌.­ಕೃಷ್ಣ­ಮೂರ್ತಿ (ದಾಸರಹಳ್ಳಿ), ಭಾಸ್ಕರ ರೆಡ್ಡಿ (ಮಹ­ದೇವ­­ಪುರ), ಕೆ.ವಿ.­ಪಟೇಲ್‌­ರಾಜು (ಬೊಮ್ಮನ­ಹಳ್ಳಿ), ಜಿ.ಆನಂದ­ಮೂರ್ತಿ (ಮಹಾ­ಲಕ್ಷ್ಮಿ ಬಡಾವಣೆ), ನೂರ್‌­ಜಾನ್‌ (ಪುಲಿಕೇಶಿ­ನಗರ), ಕೆ.ಮಂಜು­ನಾಥ್‌ (ಸಿ.ವಿ.­ರಾಮ­ನ್‌­ನಗರ), ಎ.ಬಿ.­ಖದೀರ್‌ ಹಾಜಿ (ಶಾಂತಿ­ನಗರ), ಎಚ್‌.­ವಿಜಯ­ಕುಮಾರ್‌ (ರಾಜಾಜಿನಗರ).

ಟಿ.ರಮೇಶ್‌ (ವಿಜಯನಗರ), ಎನ್‌.­ಅಮರೇಶ್ (ಚಿಕ್ಕಪೇಟೆ), ಜೆ.ನಟ­ರಾಜ್‌ (ಶಿವಾಜಿನಗರ), ಲಕ್ಷ್ಮೀಪತಿ (ಪದ್ಮನಾಭ­ನಗರ), ಆರ್‌.­ಶೋಭಾ (ಜಯನಗರ), ಡಿ.ರಘು ಮತ್ತು ಜೆ.ಜಾನ್‌ (ಸರ್ವಜ್ಞ­ನಗರ), ಎಲ್‌.ಲಿಂಗಯ್ಯ (ಗಾಂಧಿ­ನಗರ), ಸಂಪತ್‌ (ಬಿ.ಟಿ.ಎಂ.­ಬಡಾವಣೆ) ಹಾಗೂ ಕೆ.ಇ.ಹರೀಶ್‌ (ಮಲ್ಲೇಶ್ವರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT