ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಜೆಡಿಯುಗೆ ಆರ್‌ಜೆಡಿ ಬೆಂಬಲ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ, ಐಎಎನ್‌ಎಸ್‌): ಬಿಹಾ­ರದ ಹೊಸ ಮುಖ್ಯಮಂತ್ರಿ ಜೀತನ ರಾಮ್‌ ಮಾಂಝಿ ನೇತೃತ್ವದ ಜೆಡಿಯು ಸರ್ಕಾರಕ್ಕೆ ವಿರೋಧಿ ಆರ್‌ಜೆಡಿ ಗುರು­ವಾರ ಬೆಂಬಲ ಘೋಷಿಸಿದೆ. ಈ ತೀರ್ಮಾನವನ್ನು ಆರ್‌ಜೆಡಿ ಶಾಸ­ಕಾಂಗ ಪಕ್ಷದ ನಾಯಕ ಅಬ್ದುಲ್‌ ಬಾರಿ ಸಿದ್ದಿಕಿ ಸುದ್ದಿಗಾರರಿಗೆ ತಿಳಿಸಿದರು.

ಶುಕ್ರವಾರ ನಡೆಯುವ ವಿಶ್ವಾಸಮತ ಯಾಚನೆಗೆ ಮುನ್ನ ಆರ್‌ಜೆಡಿ ಬೆಂಬಲ ಪ್ರಕಟಿಸಿರುವುದು ಜೆಡಿಯು ಸರ್ಕಾ­­ರಕ್ಕೆ ಬಲ ಸಿಕ್ಕಂತಾಗಿದೆ.
ಯಾವಾಗಲೂ ಸಾಮಾಜಿಕ ನ್ಯಾಯದ ಪರವಿರುವ ಆರ್‌ಜೆಡಿ,   ಮಹಾದಲಿತ ಸಮು­­ದಾಯಕ್ಕೆ ಸೇರಿದ ಮಾಂಝಿ ಅವ­ರಿಗೆ ಎಲ್ಲ ಸಹಕಾರ ನೀಡಲಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರತಿನಿಧಿ­ಸುತ್ತಿ­ರುವ ಕೋಮುವಾದಿ ಶಕ್ತಿಗಳನ್ನು ಮಣಿ­ಸಲು ಜೆಡಿಯುಗೆ ಬೆಂಬಲ ನೀಡ­ಲಾಗು­ತ್ತಿದೆ ಎಂದು ಸಿದ್ದಿಕಿ ಹೇಳಿದರು.

  ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಈಗ 237 ಸದಸ್ಯ­ರಿದ್ದಾರೆ. ಜೆಡಿಯು 117, ಬಿಜೆಪಿ 88, ಆರ್‌ಜೆಡಿ 21, ಕಾಂಗ್ರೆಸ್‌ 4, ಸಿಪಿಐ 1 ಹಾಗೂ ಇಬ್ಬರು ಪಕ್ಷೇತರ ಶಾಸಕರು ಇದ್ದಾರೆ. ಇವರಲ್ಲದೆ, ಆರ್‌ಜೆಡಿಯ 3, ಬಿಜೆಪಿಯ 2 ಹಾಗೂ ಜೆಡಿಯುನ ಒಬ್ಬ ಶಾಸಕರು ಪಕ್ಷಾಂತರದ ಕಾರಣಕ್ಕಾಗಿ ರಾಜೀ­ನಾಮೆ ಸಲ್ಲಿಸಿದ್ದಾರೆ.

ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಸಹ ಜೆಡಿಯು ಸರ್ಕಾರಕ್ಕೆ ಬೆಂಬಲ ಪ್ರಕಟಿ­ಸಿದೆ. ಈ ಹಿಂದೆಯೇ ಸಿಪಿಐ ಮತ್ತು  ಪಕ್ಷೇತರ ಸದಸ್ಯರು ಜೆಡಿಯುಗೆ ಬೆಂಬಲ ನೀಡಿದ್ದಾರೆ.

ಲಾಲು ಹೇಳಿಕೆ (ನವದೆಹಲಿ ವರದಿ):  ಬಿಹಾರದಲ್ಲಿ ಅಧಿ­ಕಾರ ಕಬಳಿಸುವ ಬಿಜೆಪಿ ಸಂಚಿಗೆ ತಡೆ­­ಯೊಡ್ಡಲು ಜೆಡಿಯು ಸರ್ಕಾರಕ್ಕೆ ಬೇಷರತ್‌ ಬೆಂಬಲ ನೀಡಿರು­ವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಗುರುವಾರ ಇಲ್ಲಿ ತಿಳಿಸಿದರು. ಆದರೆ ರಾಜಕೀಯ ವಿರೋಧಿ ನಿತೀಶ್‌ ಕುಮಾರ್‌ ಅವರ ಜೆಡಿಯು ಪಕ್ಷ­ದೊಂ­ದಿಗೆ ಮುಂದೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಉತ್ತರಿಸಲು ಲಾಲು ನಿರಾಕರಿಸಿದರು.

ಜೀತನ ರಾಮ್‌ ಮಾಂಝಿ ನೇತೃತ್ವ ಸರ್ಕಾರದ ಕಾರ್ಯ­ನಿರ್ವಹಣೆಯನ್ನು ಎಚ್ಚರಿಕೆಯಿಂದ ವೀಕ್ಷಿ­ಸ­ಲಾಗುವುದೆಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಲಾಲು ಅವರು ಲೋಕಸಭೆ ಚುನಾವಣೆಯಲ್ಲಿ ಕೋಮು­­ವಾದದ ಪ್ರಭಾವ ಮಧ್ಯೆಯೂ ಬಿಹಾರ­ದಲ್ಲಿ ಆರ್‌ಜೆಡಿ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿ­ಕೂಟ ತೋರಿದ ಸಾಧನೆ ಕುರಿತು ಚರ್ಚಿಸಿದರು. ರಾಜಕೀಯ ಧ್ರುವೀಕರಣ ನಡುವೆಯೂ ಬಿಜೆಪಿ ವಿರುದ್ಧ ಶಕ್ತಿಮೀರಿ ಹೋರಾಡುವ ಭರವಸೆ ನೀಡಿದರು.

ನಿತೀಶ್‌, ಲಾಲು ಇನ್ನು ನೆರೆಹೊರೆಯವರು!

ಬಿಹಾರ ರಾಜಕೀಯದಲ್ಲಿ ಮೊದಲಿಗೆ ಸಹೋ­ದರರಂತಿದ್ದು ನಂತರ ಬದ್ಧ ವೈರಿ­ಗಳಾದ ನಿತೀಶ್‌ ಕುಮಾರ್‌ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಇನ್ನು ಮುಂದೆ ನೆರೆಹೊರೆಯವ­ರಾಗ­ಲಿ­ದ್ದಾರೆ.

ಅಧಿ­ಕಾರ ತ್ಯಜಿಸಿದ ನಿತೀಶ್‌ ಅವ­ರಿಗೆ 7 ಸರ್ಕ್ಯು­ಲರ್‌ ರಸ್ತೆಯಲ್ಲಿ ಬಂಗಲೆ ಗೊತ್ತು ಮಾಡಲಾಗಿದೆ. ಆದರೆ ಭದ್ರತೆ ಕಾರಣದಿಂದ ಈ ಕಟ್ಟಡದಲ್ಲಿ ಕೆಲವು ನಿರ್ಮಾಣ ಕಾಮಗಾರಿ ಇರುವು­ದ­ರಿಂದ ತಾತ್ಕಾಲಿಕವಾಗಿ 2 ಸ್ಟ್ರ್ಯಾಂಡ್‌ ರಸ್ತೆ ಬಂಗಲೆ­­ಯನ್ನು  ಒದಗಿಸಲಾಗಿದೆ.

ಲಾಲು ತಮ್ಮ ಪತ್ನಿ ಮಾಜಿ ಮುಖ್ಯ­ಮಂತ್ರಿ ರಾಬ್ಡಿ ದೇವಿ ಅವ­ರಿಗೆ 10 ಸರ್ಕ್ಯು­ಲರ್‌ ರಸ್ತೆಯಲ್ಲಿ ಒದಗಿ­ಸಿ­­ದ ಮನೆ­ಯೊಂ­ದ­ರಲ್ಲಿ ವಾಸವಿದ್ದಾರೆ. ನಿತೀಶ್‌ ಶೀಘ್ರ ಕಳೆದ ಒಂಬತ್ತು ವರ್ಷದಿಂದ ವಾಸವಿದ್ದ ಅನ್ನೆ ಮಾರ್ಗ­ದ ಮುಖ್ಯ­ಮಂತ್ರಿ ನಿವಾ­ಸ­ದಿಂದ ಹೊಸ ಮನೆಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT