ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌, ಉಡುಪಿಯಲ್ಲಿ ನೆಟ್ಟಕಲ್ಲಪ್ಪ ರಸ್ತೆ ಓಟ

Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ವತಿಯಿಂದ  ಪ್ರಜಾವಾಣಿ –ಡೆಕ್ಕನ್‌ ಹೆರಾಲ್ಡ್‌ ಪ್ರಾಯೋಜಕತ್ವದಲ್ಲಿ ನಡೆಯುವ 2015ರ ಸಾಲಿನ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಸ್ಪರ್ಧೆಗಳು ಬೀದರ್ ಮತ್ತು ಉಡುಪಿಯಲ್ಲಿ ನಡೆಯಲಿವೆ.

ಬೀದರ್‌ನಲ್ಲಿ ಜೂನ್‌ 7ರಂದು ಮತ್ತು ಉಡುಪಿಯಲ್ಲಿ ಜೂನ್‌ 14ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಆಸಕ್ತರು ಪಾಲ್ಗೊಳ್ಳಬಹುದು.
ಪುರುಷರು, ಮಹಿಳಾ, 16 ವರ್ಷದ ಒಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗಗಳಲ್ಲಿ ಈ ವಾರ್ಷಿಕ ಪೈಪೋಟಿ ನಡೆಯಲಿವೆ ಎಂದು ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪುರುಷರ ವಿಭಾಗದಲ್ಲಿ 12 ಕಿ.ಮೀ. ದೂರ ಮತ್ತು ಮಹಿಳಾ ವಿಭಾಗದಲ್ಲಿ 6 ಕಿ.ಮೀ. ದೂರದ ಸ್ಪರ್ಧೆ ಇರುತ್ತದೆ. ಈ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಗಳಿಸುವವರು ಕ್ರಮವಾಗಿ 5,000, 3,500, 2,500, 1,500, 650, 500 ಮತ್ತು 7ರಿಂದ 10ನೇ ಸ್ಥಾನ ಗಳಿಸುವವರು ತಲಾ 350 ನಗದು ಬಹುಮಾನ ಪಡೆಯಲಿದ್ದಾರೆ.

ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ 2.5ಕಿ.ಮೀ. ದೂರ ಓಡಬೇಕಿದ್ದು,  ಮೊದಲ ಮೂರು ಸ್ಥಾನಗಳನ್ನು ಗಳಿಸುವವರಿಗೆ ಕ್ರಮವಾಗಿ 1,500, 1,000 ಮತ್ತು 750 ನಗದು ಬಹುಮಾನ ನೀಡಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಓಟಗಾರರು ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಎಲ್ಲಾ ಜಿಲ್ಲೆಗಳ ಪ್ರತಿಭಾವಂತರಿಗೆ ಉತ್ತೇಜನ ನೀಡುವುದಕ್ಕಾಗಿ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಓಟಗಾರರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ ಇರುವುದಿಲ್ಲ.

ಆಸಕ್ತ ಓಟಗಾರರಿಗೆ ಬೀದರ್‌ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್‌ 6ರಂದು 3ಗಂಟೆಯ ನಂತರ ಮತ್ತು ಜೂನ್‌ 13ರಂದು ಮಧ್ಯಾಹ್ನ 3 ಗಂಟೆಯ ನಂತರ ಉಡುಪಿ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ  ‘ಚೆಸ್ಟ್‌ ನಂಬರ್‌’ಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧಿಸುವವರು ತಮ್ಮ ಜನ್ಮದಿನಕ್ಕೆ ಸಂಬಂಧಿಸಿದಂತೆ ತಾವು ಶಿಕ್ಷಣ ಪಡೆದ ಶಾಲಾ ಮುಖ್ಯಸ್ಥರು ದೃಢೀಕರಿಸಿದ ಪತ್ರವನ್ನು ತರಬೇಕು.

ಆಸಕ್ತರು ಪ್ರವೇಶ ಪತ್ರಗಳನ್ನು ಈ  ವಿಳಾಸಕ್ಕೆ ಕಳುಹಿಸತಕ್ಕದ್ದು.  ಅನಂತರಾಜು, ಸಂಘಟನಾ ಕಾರ್ಯದರ್ಶಿ, ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌, ಪ್ರಗತಿ, ನಂಬರ್‌ 39/137, ಫಸ್ಟ್‌, ಡಿ ಕ್ರಾಸ್‌, ಆರನೇ ಮೆಯಿನ್‌, ರೆಮ್ಕೊ ಲೇಔಟ್‌, ವಿಜಯನಗರ, ಬೆಂಗಳೂರು– 560040. (ದೂರವಾಣಿ ಸಂಖ್ಯೆ: 080– 22275656)..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT