ತರಲೆ ಕ್ಯಾತನಹಳ್ಳಿ ಪ್ರೀಮಿಯರ್ ಲೀಗ್ನ ಮಿಕ್ಸೆಡ್ ಕ್ರಿಕೆಟ್ ಟೂರ್ನಿನಲ್ಲಿ ತರ್ಲೆ ಪಡ್ಡೆ ಲೀಗ್ ಮಸಾಲೆ ದೋಸೆ ಮ್ಯೋಚ್ನಲ್ಲಿ ಸೋತು ಸುಣ್ಣವಾಗಿ ಸುಂದ್ರಿ ಬೋಂಡದ ಅಂಗಡಿ ಮುಂದೆ ವಡೆ ಕಡೀತಾ ಆತ್ಮಾವಲೋಕನ ಸಭೆ ನಡುಸ್ತಿತ್ತು. ಫ್ರಾಂಚೈಸ್ ಓನರ್ ಕಿತಾಪತಿ ಕೋದಂಡ ಇಡೀ ಟೀಂ ಅನ್ನು ಹಿಗ್ಗಾ ಮುಗ್ಗಾ ಉಗಿದು ಉಪ್ಪಿನಕಾಯಿ ಹಾಕ್ತಿದ್ದ.
`ಯಾಕ್ರಲೇ! ಇಂಗು ತಿಂದ ಮಂಗಗಳ ತರ ಬಂದು ಕೂತಿದೀರ?' ಸುಂದ್ರಿ ಕಿಚಾಯಿಸುದ್ಲು

`ಮೋಸ ಎಲ್ಲಾ ಮೋಸದಾಟ..' ಕಿರುಚಿದ ಕೋದಂಡ
`ಈಗೇನು ತುಂಡು ಹೈಕ್ಳು ಲೀಗ್ ಮೇಲೆ ಸೋತು ಬಂದ್ರಿ ತಾನೇ?'
ಎಲ್ಲಾ ಮುಖ ಮುಖ ನೋಡಿಕೊಂಡು ತಲೆ ತಗ್ಗಿಸುದ್ರು
`ಥೂ! ನಿಮ್ಮ ಜನ್ಮಕ್ಕಿಷ್ಟು, ನಾಚಿಕೆ ಆಗಲ್ವಾ ನಿಮಗೆ? ಹೋಗಿ ಹೋಗಿ ನನ್ನಂಥ ಹುಡುಗೀರ ಮುಂದೆ ಸೋತು ಶರಣಾಗಿ ಬಂದಿದೀರಲ್ಲ' ಸುಂದ್ರಿ ಶೇಪೆತ್ತಿದಳು.
`ಮ್ಯೋಚ್ ಫಿಕ್ಸು, ಸ್ಪಾಟ್ ಫಿಕ್ಸು ಮಾಡುದ್ರೆ ಸೋಲ್ದೆ ಇನ್ನೇನು?'

`ನಂಗವೆಲ್ಲಾ ಗೊತ್ತಿಲ್ಲ, ಗೆದ್ದೇ ಗೆಲ್ತೀವಿ ಅಂತ ಮೀಸೆ ತಿರುವಿಕೊಂಡು ಹೋಗಿದ್ರಲ್ಲ, ನನ್ ಬಾಜಿ ದುಡ್ಡು ಮಡಗಿ ಮಾತಾಡು. ಬಾರೋ ಮೇರ ಮುರುಗ, ಬಾರೋ ನನ್ನ ಸಿಂಗ, ರಂಗನ ಮುಂದೆ ಸಿಂಗನು ಎಂದೂ ಇಂಗು ತಿಂದ ಮಂಗ, ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ...' ಸುಂದ್ರಿ ನಕ್ಕಳು.

`ಸ್ಪಾಟ್ ಫಿಕ್ಸ್ ಆಗಿರೋ ಮ್ಯೋಚ್ಗೆ ಯಾವಾನು ದುಡ್ಡು ಕೊಡ್ತಾನೆ?' ಕೋದಂಡ ತಕರಾರು ತೆಗೆದ
`ಸ್ಪಾಟು ಫಿಕ್ಸು ಅಂತ ಎಂಗೆ ಹೇಳ್ತೀಯ? ನಿನ್ ಹತ್ರ ಏನು ಸಾಕ್ಷಿ ಇದೆ? ಈ ಭಂಡದಾಟ ನನ್ ಹತ್ರ ನಡೆಯಲ್ಲ, ಸುಮ್ನೆ ನನ್ ದುಡ್ ಉದುರಿಸಿಬಿಡು. ಸುಂದ್ರಿ ಹಟ ಹಿಡುದ್ಲು.'

`ನಮ್ ಓಪನಿಂಗ್ ಬ್ಯಾಟ್ಸ್ಮನ್ ಓಂಕಾರ ಅಕೌಂಟೇ ಓಪನ್ ಮಾಡದೆ ಸೊನ್ನೆಗೆ ಔಟಾದ್ನಲ್ಲ, ನೋಡು ಹ್ಯಾಗೆ ದ್ರಾಬೆ ತರ ಕೂತಿದಾನೆ'

`ನಾನೇನು ಬೇಕು ಅಂತ ಔಟ್ ಆಗಲಿಲ್ಲ, ಆ ಅಲಮೇಲು ವೇಲ್ನ ಫುಲ್ಲೆನ್ತ್ನಲ್ಲಿ ಹಾರಿಸಿ ಬೋಲ್ ಮಾಡುದ್ಲು. ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿ ಬೇಲ್ಸ್ ಹಾರಿ ಹೋಯ್ತು' ಸಮಜಾಯಿಷಿ ಕೊಟ್ಟ ಓಂಕಾರ.

`ಈ ವಿಶ್ವ ವಿಕೆಟಿಂದ ಆಚೆ ಹೋಗೋ ಬಾಲನ್ನ ಅಟ್ಟಾಡಿಸಿಕೊಂಡು ಹೋಗಿ ಹೊಡೆದು ಕ್ಯಾಚ್ ಕೊಟ್ಟಿದ್ದು ಫಿಕ್ಸಿಂಗ್ ಅಲ್ಲವಾ?'

`ಹಾಗೆಲ್ಲಾ ಏನಿಲ್ಲ, ಗಲ್ಲಿಲಿ ಸುಕನ್ಯಾ ನಿಂತಿದ್ಲು. ಅವಳನ್ನ ಅವಾಗವಾಗ ಗಲ್ಲಿಲಿ ಮೀಟ್ ಮಾಡೇ ರೂಡಿ. ಬಾಲ್ ಆಚೆ ಹೋಗ್ತಿದ್ದಂತೆ ನಂಗೇ ಗೊತ್ತಿಲ್ದೆ ಆ ಕಡೆ ಓಡಿ ಬಿಟ್ಟೆ ಅಷ್ಟೇ..'

`ಈ ಆಲ್ರೌಂಡರ್ ಆನಂದ, ಎಲ್ಬಿಡಬ್ಲ್ಯು ಅಂತ ದೊಡ್ಡ ಸೊನ್ನೆ ಸುತ್ತಿ ಬಂದದ್ದು ಏಕೆ? ಇದು ಫಿಕ್ಸ್ ಅಲ್ಲವಾ?'
`ನೆವರ್! ಸಾಧ್ಯನೇ ಇಲ್ಲ, ಚಿಯರ್ ಗರ್ಲ್ಸ್ಗಳ ನುಣುಪಾದ ಕಾಲು ಕಣ್ಗೆ ಬಿದ್ಬಿಡ್ತು. ಬಾಲು ಬಂದು ಕಾಲಿಗೆ ಬಡೀತು, ಅದಕ್ಕೇ ಅಂಪೈರ್ ಕೈ ಎತ್ತಿ ಬಿಡೋದಾ?'

`ಅದು ಹಾಳಾಗೋಗ್ಲಿ, ಆ ಶ್ರಿಶಾಂತ್ ತರ ನಮ್ ಶ್ರಿಕಾಂತ ಸೊಂಟಕ್ಕೆ ಟವಲ್ ಕಟ್ಟಿಕೊಂಡು ಪದೇ ಪದೇ ಅದನ್ನ ಉದ್ದ ತುಂಡ ಮಾಡ್ತಿತ್ತಿಲ್ಲವಾ? ಟವಲ್ ಮುಟ್ಟೋದು, ರನ್ ಕೊಡೋದು, ಒಂದೇ ಓವರ್ನಲ್ಲಿ 36 ರನ್ ಕೊಟ್ಟ..'
`ಸದ್ಯ ಇನ್ನೆರೆಡು ನೋ ಬಾಲ್, ಮೂರು ವೈಡ್ ಕೊಟ್ಟಿದ್ರೆ 65 ಆಗ್ತಿತ್ತು' ಸುಂದ್ರಿ ನಕ್ಕಳು.

`ಅಯ್ಯೋ! ಅದು ಮ್ಯೋಚ್ ಫಿಕ್ಸಲ್ಲ, ನನ್ ಪ್ಯಾಂಟ್ ಸರಿಯಾಗಿ ಫಿಕ್ಸ್ ಆಗುತ್ತಿಲ್ಲ, ಬೆಲ್ಟ್ ಬಕಲ್ ಕಿತ್ತು ಹೋಗಿತ್ತು. ಹಾಗೆ ಟವಲ್ ಕಟ್ಕಳ್ದೆ ಹೋಗಿದ್ರೆ ಪಿಚ್ ಮೇಲೆ ಹುಡುಗೀರ ಮುಂದೆ ನನ್ ಮಾನ ಮರ್ಯಾದೆ ಹರಾಜು ಆಗಿ ಹೋಗ್ತಿತ್ತು' ಅವಲತ್ತುಕೊಂಡ ಶ್ರಿಕಾಂತ.

`ನಿಂದು ಬಿಡು, ಆ ಫ್ರೀಶಾಂತಿ ಸೀರೆ ಸೆರಗನ್ನ ಪದೇ ಪದೇ ಸೊಂಟಕ್ಕೆ ಸಿಕ್ಕಿಸಿಕೊಳ್ಳೋದು, ಬಾಲ್ ಎಸೆಯೋದು. ನೀವೆಲ್ಲಾ ಬಡ್ಡಿ ಮಕ್ಳು ಒಬ್ರ ಹಿಂದೆ ಒಬ್ರು ಔಟಾಗಿ ಅವಳಿಗೆ ಪುಗಸಟ್ಟೆ ಹ್ಯಾಟ್ರಿಕ್ ಕೊಟ್ಟು ಬಿಟ್ರಲ್ಲೋ?'
`ಓಹೋ! ಇದು ಸ್ಪಾಟ್ ಫಿಕ್ಸಿಂಗ್ ಅಲ್ಲ ಸ್ಪಾಟ್ ಸಿಕ್ಸಿಂಗ್!' ಸುಂದ್ರಿ ಕುಹಕವಾಡಿದಳು.
`ಲೇ ಮಾಲಿಂಗ, ನೀನು ಸ್ವಿಂಗ್ ಹಾಕ್ತಿದ್ದೋನು, ಸುಕನ್ಯಂಗೆ ಫುಲ್ಟಾಸ್ ಹಾಕಿದ್ದೇಕೆ?'
`ಅವಳೇ ಒಂದು ಸ್ಪ್ರಿಂಗ್ ತರ! ಕ್ಯಾಚ್ ಕೊಡ್ತಾಳೇನೋ ಅಂತ ಹಾಕ್ದೆ'
`ಲೇಯ್! ನೀನು ಕ್ಯಾಚ್ ಬಿಟ್ಟು ರನ್ನರ್ ಎಂಡಲ್ಲಿದ್ದ ಪಂಕಜನ್ನ ಹಿಡ್ಕೊಂಡ್ಯಲ್ಲ! ಇದನ್ನ ಏನಂತೀಯ?' ಕಲ್ಲೇಶಿನ ತರಾಟೆಗೆ ತಗಂಡ ಕೋದಂಡ.

`ಅದು ರಂಭಾ ಬಾಲ್ನ ಪ್ಯಾಂಟಿಗೆ ಉಜ್ಜಿ ಉಜ್ಜಿ ಶೇಪ್ ಚೇಂಜ್ ಮಾಡಿದ್ಲು. ಬಾಲ್ ಹೈಟ್ಗೆ ಹೋಯ್ತಲ್ಲ, ಬಾಲ್ ಹಿಡಿಯಕ್ಕೋದೆ. ಪಂಕಜಾ ರನ್ ಓಡ್ತಾ ಅಡ್ಡ ಬಂದು ಬಿಟ್ಳು. ನಾನೇನು ಮಾಡಕ್ಕಾಗುತ್ತೆ'.

`ಕಳ್ಳಂಗೊಂದು ಪಿಳ್ಳೆನೆವ ಅಂತ ಏನೋ ಹೇಳ್ತೀರಿ. ನೀನು ಬ್ಯಾಟ್ಸ್ಮನ್ ಸ್ಕ್ರೀಸ್ ಆಚೆ ಹೋದ್ರೂ ಸ್ಟಂಪ್ ಔಟ್ ಯಾಕೆ ಮಾಡಲಿಲ್ಲ?' ಕೋದಂಡ ಕೀಪರ್ ಕೃಷ್ಣಾಚಾರಿ ಮೇಲೆ ಗುರ್ ಅಂದ.

`ನೋಡೋ, ಹುಡುಗೀರು ಗೆರೆ ದಾಟಿದ್ರೆ ಓಡಿಹೋಗ್ತಾರೆ ಅಂತ ಗ್ಯಾರಂಟಿ. ನಂಗೆ ಓಡಿ ಹೋಗೋರಿಗೆ ಹೆಲ್ಪ್ ಮಾಡಿ ರೂಢಿ. ಅದೇ ಗುಂಗಲ್ಲಿ ಬಾಲ್ ಹಿಡಿಯೋದು ಮರೆತು ಬೈಸ್ ಹೊಂಟೋಯ್ತು..'

`ಕಳ್ನನ್ಮಕ್ಳು ನೀವು. ಲೇಯ್ ದೀಕ್ಷಿತ ಕ್ವಿಕ್ಫಿಕ್ಸ್ ಮೆತ್ತಿದೋರ ತರ ಸ್ಪಾಟಲ್ಲೇ ಅಲ್ಲಾಡದಂಗೆ ನಿಂತ್ಕೊಂಡು ಕಾಲು ಸಂದೀಲಿ ಬಾಲ್ ಬಿಟ್ಟು ಬಿಟ್ಟು ರನ್ ಕೊಟ್ಯಲ್ಲ, ಇದು ಸರೀನಾ? ಸಂದೀಲಿ ರನ್ ಬಿಡಕ್ಕೆ ಇಷ್ಟು ಅಂತ ಸ್ಪಾಟ್ ಫಿಕ್ಸ್ ಆಗಿದೆ ತಾನೇ?'

`ಬಾಯಿಗೆ ಬಂದ ಹಾಗೆಲ್ಲಾ ಮಾತಾಡಬೇಡ, ದೇವೇಗೌಡರ ತರ ಒಂದು ಪಂಚೆ ಇದ್ದಿದ್ರೆ ಪಂಚೆನೇ ಬಾಲ್ ಹಿಡೀತಿತ್ತು. ಗೇಟ್ ಹಾಕಿದ್ರೂ ಕಾವೇರಿ ನೀರು ಹರಿಯೋ ಹಾಗೆ ಪ್ಯಾಂಟ್ ಹಾಕ್ಕಂಡ್ರೆ ಕಾಲ್ ಸಂದೀಲಿ ಬಾಲ್ ತೂರಿ ಹೋಗೋದು ಕ್ವೈಟ್ ನ್ಯಾಚುರಲ್' ದೀಕ್ಷಿತ ಸಮರ್ಥಿಸಿಕೊಂಡ.

` ಈ ಲಕ್ಷ್ಮೀಶ ಸ್ಪಿನ್ ಮಾಡ್ತೀನಿ ಅಂತ ಆ ವನಿತಂಗೆ ಶಾರ್ಟ್ ಪಿಚ್ ಬಾಲು ಹಾಕಿದ್ದೂ ಹಾಕಿದ್ದೇ! ಅವಳು ಸಿಕ್ಸರ್ ಮೇಲೆ ಸಿಕ್ಸರ್ ಎತ್ತಿದ್ದೂ ಎತ್ತಿದ್ದೇ!'

`ನಾನೇನೋ ಮಾಡ್ಲಿ? ಅ ವನಿತಾನೇ ಬಾಲಿಗಿಂತ ಹೆಚ್ಚು ಸ್ಪಿನ್ ಆಗಿ ವನೀತಾಳೆ. ಹೇಗೆ ಎಸುದ್ರೂ ಕನೆಕ್ಟ್ ಮಾಡಿಕೊಂಡು ರೂಢಿ ಅವಳಿಗೆ. ಸ್ಪಾಟ್ ಫಿಕ್ಸಿಂಗೂ ಇಲ್ಲ, ಮಿಕ್ಸಿಂಗೂ ಇಲ್ಲ.

ಸೀರೆ, ಚೂಡಿ, ವೇಲ್ ಹಾಕ್ಕಂಡಿದ್ದೋರು ಏನೋ ಹಾರಿಸಿ, ಬೀಳಿಸಿ ಬುಕ್ಕಿಗಳಿಗೆ ಸಿಗ್ನಲ್ ಕೊಟ್ಟಿರ್ತಾರೆ. ಬರೀ ಶಾರ್ಟ್ಸ್ ಹಾಕ್ಕಂಡಿದ್ದ ಶ್ಯಾಮಲಿ ಹೇಗೆ ಸಿಗ್ನಲ್ ಕೊಟ್ಟಿರ್ತಾಳೆ? ಟವಲ್, ಕರ್ಚೀಪು ಏನೂ ಸಿಗಿಸಿಕೊಂಡಿತ್ತಿಲ್ಲವಲ್ಲ!'
`ಅವಳು ರನ್ ಕೊಡಕ್ಕೆ ಕೂದಲು ಬಿಚ್ತಿದ್ಲು, ವಿಕೆಟ್ ತೆಗೆಯಕ್ಕೆ ಕೂದಲು ಗಂಟು ಹಾಕ್ತಿದ್ಲು. ವಿಕೆಟ್ ಮೇಲೆ ಹಾಕ್ತೀನಿ ಅಂದ್ರೆ ಶೀಲಾ ಕಿ ಜವಾನಿ ಸ್ಟೆಪ್ಸ್ ಹಾಕ್ಕಂಡು ಬರೋಳು, ಆಚೆ ಎಸೀತೀನಿ ಅನ್ನೋಕೆ ಚಿಕ್ನಿ ಚಮೇಲಿ ಸ್ಟೆಪ್ಸ್ ಹಾಕೋಳು' ಪರ್ಮೇಶಿ ವಿವರಿಸಿದ.

`ಅದನ್ನ ನೋಡ್ಕಂಡಾ ನೀನು ಹಿಟ್ ವಿಕೆಟ್ ಆಗಿದ್ದು?' ಕೋದಂಡ ಪರ್ಮೇಶಿ ಕಡೆ ಗುರುಗುಟ್ಟಿದ.
`ನನ್ ಹೆಂಡ್ತಿ ಸೈಡ್ ಸ್ಕ್ರೀನ್ ಮುಂದೇನೇ ಕೂತಿದ್ಲು, ನಾನು ಔಟಾಗಿದ್ದಕ್ಕೆ ಮನೇಲಿ ಸೌಟ್ ಫಿಕ್ಸಿಂಗ್ ಕಾದಿದೆ, ಇಲ್ಲಿ ನಿಂದು ಬೇರೆ ಕಾಟ'

`ಇಷ್ಟೆಲ್ಲಾ ಆಗಿದ್ದು ಆ ಐನಾತಿ ಬಡ್ಡಿ ಮಗ ನಂಜುಂಡನಿಂದ, ಕ್ಯಾಪ್ಟನ್ ಆಗಿ ಲಾಸ್ಟ್ ಮೂಮೆಂಟಲ್ಲಿ ಹುಶಾರಿಲ್ಲ ಅಂತ ಕದ್ದು ಹೋಗಿದಾನೆ. ಇದಂತೂ ಪಕ್ಕಾ ಮ್ಯೋಚ್ ಫಿಕ್ಸ್! ಆ ನನ್ಮಗ ಕೈಗೆ ಸಿಗಲಿ, ಸರಿಯಾಗಿ ಗ್ರಹಚಾರ ಬಿಡುಸ್ತೀನಿ ಎಂದು ಅವಡುಗಚ್ಚುತ್ತಿರುವಂತೆಯೇ ಸುಂದ್ರಿ ಗಲ್ಲಾ ಟೇಬಲ್ ಸಂದಿಯಿಂದ ಆಕೃತಿಯೊಂದು ಈಚೆ ಸರಿದು ತಡಿಕೆ ಹಾರಿ ಓಡಿ ಹೋಯ್ತು. ಏಯ್ ನಂಜುಂಡ ಕಣ್ರೋ' ಎಲ್ಲಾ ಅಚ್ಚರಿಯಿಂದ ಕೂಗಿದರು.

`ಹೆಂಗೆ? ನಂಜುಂಡನ್ನ ಮ್ಯೋಚ್ ಆಡದ ಹಾಗೆ ಫಿಕ್ಸ್ ಮಾಡಿದ್ದೋಳು ನಾನೇ? ತೆಗಿ ಬೆಟ್ಟಿಂಗ್ ದುಡ್ಡು' ಸುಂದ್ರಿ ಕಿಸಕಿಸ ನಕ್ಕಳು.

`ನೀನು ಬುಕಿ ಅಲ್ಲ, ದೊಡ್ ಹಕ್ಕಿ, ನಮ್ಮನ್ನೇ ಏಮಾರಿಸಿ ಬಿಟ್ಯಲ್ಲ ಕೋದಂಡ ಪೆಚ್ಚಾಗಿ ಬೆಟ್ ದುಡ್ಡು ತೆಗೆದು ಸುಂದ್ರಿ ಮುಂದೆ ಒಗೆದ. ಉಳ್ಳವರು ಬಾಜಿ ಕಟ್ಟುವರು, ಕೈ ಕಾಲಿ, ನಾನೇನ ಕಟ್ಟಲೋ ತಂದೆ' ಹಲುಬಿದ ಕೋದಂಡ.
`ಸ್ಟೇಡಿಯಂ ಮುಂದೆ ಕೂತ್ಕಂಡು ಬಜ್ಜಿ ಪಾರ್ಸೆಲ್ ಕಟ್ಟು' ತಗೋ ಇದನ್ನ ಸುಂದ್ರಿ ತನ್ನ ಸೊಂಟದಲ್ಲಿ ನೇತಾಡಿಸಿಕೊಂಡಿದ್ದ ಟವಲ್ ತೆಗೆದು ಕೊಟ್ಳು.

`ಇದ್ಯಾಕೆ? ನಾನು ಯಾರ ಹತ್ರ ಫಿಕ್ಸ್ ಆಗಲಿ?'
`ಇದು ಫಿಕ್ಸ್ ಆಗಕ್ಕಲ್ಲ, ಹೀಗೇ ಊರೋರೆಲ್ಲಾ ಉಗಿದಾಗ ಮುಖ ಒರೆಸ್ಕೊಳೋಕೆ, ಬೆಟ್ ಕಟ್ಟಿ ಕೆಟ್ ಮೇಲೆ ದೇವಸ್ಥಾನದ ಮುಂದೆ ಅಮ್ಮೋ ತಾಯಿ ಅಂತ ಹಾಸ್ಕಂಡು ಕೂತ್ಕಳಕ್ಕೆ!' ಎಲ್ಲಾ ಕಿಸಕ್ಕನೆ ನಕ್ಕರು.
-ತುರುವೇಕೆರೆ ಪ್ರಸಾದ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.