ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು ಸುಡುವ ಯಂತ್ರ

Last Updated 11 ಜುಲೈ 2016, 19:30 IST
ಅಕ್ಷರ ಗಾತ್ರ

* ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚು ಮಾಡುವಲ್ಲಿ ಹಾಗೂ ಶರೀರದಲ್ಲಿ ಕೊಬ್ಬು ಸಂಗ್ರಹವಾಗಲು ಮುಖ್ಯ ಕಾರಣ ಸಕ್ಕರೆ ಮತ್ತು ಪಿಷ್ಟ. ಆದ್ದರಿಂದ ಅಗತ್ಯವಾದ ಕಡೆಗಳಲ್ಲಿ ಇವುಗಳಿಂದ ದೂರ ಇದ್ದರೆ ಒಳ್ಳೆಯದು.

* ಪ್ರತಿದಿನ ಸಾಧ್ಯವಾದಷ್ಟು ನಡೆಯುವುದನ್ನು ಅಭ್ಯಾಸ ಮಾಡಿ. ವ್ಯಾಯಾಮವೂ ಇರಲಿ. ಲಿಫ್ಟ್‌ ಬದಲು ಮೆಟ್ಟಿಲು ಉಪಯೋಗಿಸಿ.

* ಮಲಗುವ ಮುನ್ನ ಒಂದು ಗ್ಲಾಸ್ ಗ್ರೀನ್ ಟೀ ಕುಡಿಯುತ್ತಾ ಬಂದರೆ ಸೊಂಟದ ಸುತ್ತಳತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

* ಸೈಕಲ್ ತುಳಿಯುವುದು ತುಂಬಾ ಒಳ್ಳೆಯ ವ್ಯಾಯಾಮವಾಗಿದ್ದು ಇದರಿಂದ ಅನೇಕ ಪ್ರಯೋಜನ ಪಡೆಯಬಹುದು. ದಿನಾ ಅರ್ಧ ಗಂಟೆ ಸೈಕಲ್ ತುಳಿದರೆ ದೇಹದ ತೂಕ ಕಡಿಮೆಯಾಗುವುದಲ್ಲದೆ, ಸ್ನಾಯುಗಳು ಬಲವಾಗುತ್ತವೆ, ಹೃದಯದ ಸ್ವಾಸ್ಥ್ಯಕ್ಕೂ ಒಳ್ಳೆಯದು.

* ಹುಳಿ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣು ಇತ್ಯಾದಿಗಳಲ್ಲಿ ಕೊಬ್ಬು ಕರಗಿಸುವ ಶಕ್ತಿ ಇದೆ.

* ದಿನಕ್ಕೆ 8-9 ಗಂಟೆಯ ಪೂರ್ಣಪ್ರಮಾಣದ ನಿದ್ದೆ ಮಾಡಬೇಕು. ಏಕೆಂದರೆ ನಿದ್ದೆಗೆಡುವುದು ಕೂಡ ಬೊಜ್ಜಿಗೆ ದಾರಿ ಮಾಡಿಕೊಳ್ಳಬಹುದು ಎಂಬುದು ಸಾಕಷ್ಟು ಅಧ್ಯಯನಗಳಿಂದ ತಿಳಿದುಬಂದಿದೆ.

* ಗೋಧಿ ಹುಲ್ಲಿನ ರಸದ ಜ್ಯೂಸ್ ಬೊಜ್ಜು ಕರಗಲು ಒಳ್ಳೆಯ ಮದ್ದು. ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

* ಫಾಸ್ಟ್‌ಫುಡ್‌ಗಳಿಂದ ಸಾಧ್ಯವಾದಷ್ಟು ದೂರವಿರಬೇಕು.

* ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು.

* ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸುತ್ತಾ ಬಂದರೆ ಬೊಜ್ಜು ಕರಗಿಸಬಹುದು.

* ರಾತ್ರಿ ಮಲಗುವ ಮುನ್ನ ಫ್ರಿಜ್‌ನಲ್ಲಿ ಇರುವ ನೀರು ಕುಡಿಯುವುದು ಸರಿಯಲ್ಲ. ಇದರಿಂದ  ಆಹಾರ ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಕೊಬ್ಬು ಶೇಖರಣೆಗೊಳ್ಳುತ್ತದೆ. ಬಿಸಿ ನೀರನ್ನು ಕುಡಿದು ಮಲಗಿ.

* ಬೊಜ್ಜು ಕರಗಲು ಮುಖ್ಯವಾಗಿ ಮಾಡಬೇಕಿರುವ ಆಸನಗಳು ತಾಡಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ ಹಾಗೂ ಪರಿವೃತ ತ್ರಿಕೋನಾಸನ.

ಬೊಜ್ಜು: ಅಧ್ಯಯನ
* ಬೊಜ್ಜು ಬೆಳೆಯಲು ಮೊಬೈಲ್‌ ಫೋನ್‌, ಅದರಲ್ಲೂ ಮುಖ್ಯವಾಗಿ ಇಂಟರ್‌ನೆಟ್‌ ಬಳಕೆ ಕಾರಣ. ಕಡಿಮೆ ಇಂಟರ್‌ನೆಟ್‌ ಬಳಸುವ  23% ಬಳಕೆದಾರರಿಗಿಂತ, ಹೆಚ್ಚು ಇಂಟರ್‌ನೆಟ್‌ ಬಳಸುವ  43% ಯುವಜನತೆಯ ತೂಕ ಹೆಚ್ಚಳವಾಗಿದೆ.

* 37 ವರ್ಷ, 32 ವರ್ಷ ಅಪಾಯಕಾರಿ ವರ್ಷ

ಭಾರತದಲ್ಲಿ
* 73% ನಗರ ಪ್ರದೇಶದವರು ಬೊಜ್ಜಿನಿಂದ ಬಳಲುತ್ತಿದ್ದಾರೆ. ನಾಲ್ಕರಲ್ಲಿ ಮೂವರು ದಢೂತಿಗಳು.

* ಭಾರತೀಯರನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಸರಾಸರಿ 11 ಕೆ.ಜಿ. ತೂಕವನ್ನು ಕಳೆದುಕೊಳ್ಳಬೇಕಿದೆ.

* ವಿಶ್ವದಲ್ಲಿ 37% ಮಂದಿ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ.

* ಕಳೆದ ಮೂವತ್ತಮೂರು ವರ್ಷಗಳಿಂದ ಒಂದು ದೇಶವೂ ಸ್ಥೂಲಕಾಯ ನಿವಾರಣೆಯಲ್ಲಿ ಪ್ರಗತಿ ಕಂಡಿಲ್ಲ.

* ವಿಶ್ವದಲ್ಲಿ 62% ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸ್ಥೂಲಕಾಯಿಗಳಾಗಿದ್ದಾರೆ.

* 1980ರಿಂದ ಬೊಜ್ಜಿನ ಸಮಸ್ಯೆಯು ವಯಸ್ಕರಲ್ಲಿ 27.5% ಹೆಚ್ಚಿದ್ದರೆ, ಮಕ್ಕಳಲ್ಲಿ47.1%% ಹೆಚ್ಚಿದೆ.

* ಮೀನು ತಿನ್ನುವವರಾಗಿದ್ದರೆ ಸಾಲ್ಮನ್, ಬಂಗುಡೆ ಮೀನು ಮತ್ತು ಟ್ಯುನಾ ಮೀನು ಒಳ್ಳೆಯದು.

* ಅಡುಗೆಯಲ್ಲಿ ಬೆಳ್ಳುಳ್ಳಿ, ಚಕ್ಕೆ, ಲವಂಗ ಬಳಸುವುದು ಒಳ್ಳೆಯದು.

* ಹೊಟ್ಟೆ ಮತ್ತು ಸೊಂಟಕ್ಕೆ ಲವಣ ತೈಲ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಈ ಲವಣ ತೈಲ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

* ಕ್ಯಾಬೇಜ್, ಕೋಸು, ಟೊಮೆಟೊ, ಪಾಲಾಕ್ ಸೊಪ್ಪು, ಬೀನ್ಸ್ ಮತ್ತು ಹಸಿರು ಬಟಾಣಿ ಎಲ್ಲವೂ ಜೀವ ಸತ್ವದಿಂದ ತುಂಬಿವೆ ಹಾಗೂ ಕೊಬ್ಬಿನ ಅಂಶಗಳು ಸ್ವಲ್ಪವೂ ಇಲ್ಲ.

* ಬೆಳಗ್ಗಿನ ಉಪಾಹಾರದಲ್ಲಿ ಮೊಟ್ಟೆಯ ಬಿಳಿ ಭಾಗವಿದ್ದರೆ ಕೊಬ್ಬು ಕರಗಿಸುವವರಿಗೆ ಪ್ರಯೋಜನಕಾರಿಯಾಗುವುದು.

ಬೊಜ್ಜಿನಿಂದ ಬರುವ ಸಮಸ್ಯೆ
* ಮಧುಮೇಹ

* ಅಧಿಕ ರಕ್ತದೊತ್ತಡ

* ಗರ್ಭ ಧರಿಸಲು ಸಮಸ್ಯೆ/ ಗರ್ಭಪಾತ

* ಸಂಧಿವಾತ/ ನಿಮಿರುವಿಕೆ

* ಕ್ಯಾನ್ಸರ್‌

* ಅಧಿಕ ಕೊಲೆಸ್ಟ್ರಾಲ್‌

ಬೊಜ್ಜು ಕರಗಿಸುವ ತಟ್ಟೆ
ಥಾಯ್ಲೆಂಡ್‌ನ ಹೆಲ್ತ್ ಪ್ರೊಮೋಷನ್ ಫೌಂಡೇಷನ್ ಸಂಸ್ಥೆಯ ವಿಜ್ಞಾನಿಗಳು ವಿಶೇಷ ತಟ್ಟೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಈ ತಟ್ಟೆ ಆಹಾರದ ಕೊಬ್ಬನ್ನು ಹೀರಿ ಬಿಡುತ್ತದೆಯಂತೆ. ಥಾಯ್ಲೆಂಡ್ ಜನ ಎಣ್ಣೆ ಬಳಸಿದ ಆಹಾರವನ್ನೇ ಹೆಚ್ಚೆಚ್ಚು ಸೇವಿಸುವ ಕಾರಣ ರಕ್ತದ ಏರೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಜನರಲ್ಲಿ ಹೆಚ್ಚಾಗುತ್ತಿರುವುದರಿಂದ ಇನ್ನು ಕಂಡುಹಿಡಿಯಲಾಗಿದೆ.‘ಅಬ್ಸಾರ್ಬ್ ಪ್ಲೇಟ್’ ಎಂಬ ಹೆಸರಿನ ವಿಶೇಷ ತಟ್ಟೆಯಲ್ಲಿ ಆಹಾರವನ್ನು ಹಾಕಿದ ಕೂಡಲೇ 30 ಕ್ಯಾಲೊರಿಯಷ್ಟು ಕೊಬ್ಬನ್ನು ಅದು ಹೀರಿಕೊಳ್ಳುತ್ತದೆ.

ಆಹಾರದಲ್ಲಿರುವ ಎಣ್ಣೆ ಅಥವಾ ಜಿಡ್ಡಿನ ಅಂಶವನ್ನು ಹೀರಿಕೊಳ್ಳುವ ಮೂಲಕ ಆ ಜಿಡ್ಡು ಹೊಟ್ಟೆ ಸೇರದಂತೆ ನೋಡಿಕೊಳ್ಳುತ್ತದೆ. ಈ ಪ್ಲೇಟಿನಲ್ಲಿ 500 ಸಣ್ಣ-ಸಣ್ಣ ರಂಧ್ರಗಳನ್ನು ಕೊರೆಯಲಾಗಿದೆ. ಈ ತಟ್ಟೆಗೆ ಆಹಾರ ಹಾಕುತ್ತಿದ್ದಂತೆಯೇ ಅದರಿಂದ ಸುಮಾರು 7 ಎಂ.ಎಲ್. ಎಣ್ಣೆಯನ್ನು ಅಂದರೆ, 30 ಕ್ಯಾಲೊರಿಯಷ್ಟನ್ನು ಈ ರಂಧ್ರಗಳು ಹೀರಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT