ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ಪುರುಷರ ತಂಡಕ್ಕೆ ಗೆಲುವು

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡ ಮಲೇಷ್ಯಾದ ಪೆನಾಂಗ್‌ನಲ್ಲಿ ನಡೆಯುತ್ತಿರುವ  ಪೆನಾಂಗ್‌ ಕಪ್‌ ಆಹ್ವಾನಿತ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಜಯ ದಾಖಲಿಸಿದೆ.
ಹಾಂಗ್‌ ಚಾಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ  ಸೋಮವಾರ ನಡೆದ  ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ  ಕರ್ನಾಟಕ 96–75ರಲ್ಲಿ ಚೀನಾ ತೈಪೆ ತಂಡವನ್ನು ಸೋಲಿಸಿತು.

ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಕರ್ನಾಟಕ 80–64 ರಲ್ಲಿ ಸಿಂಗಪುರ ಎದುರು ಜಯಭೇರಿ ಮೊಳಗಿಸಿತ್ತು.
ಕರ್ನಾಟಕದ ಪರ ಅರವಿಂದ್‌ 35 ಪಾಯಿಂಟ್ಸ್‌ ಕಲೆಹಾಕಿ ಮಿಂಚಿದರು. ಹೀಗಾಗಿ ರಾಜ್ಯ ತಂಡ ಮೊದಲಾರ್ಧದ ಅವಧಿ ಕೊನೆಗೊಂಡಾಗ 43–38ರ ಮುನ್ನಡೆ ಪಡೆದಿತ್ತು.

ಆ ಬಳಿಕ ಅನಿಲ್‌ ಕುಮಾರ್‌ (19), ರಾಬಿ ಥಾಮಸ್‌ (19) ಮತ್ತು ರಾಜೇಶ್‌ ಉಪ್ಪಾರ (14) ಪಾಯಿಂಟ್ಸ್‌ ಗಳಿಸಿ ಕರ್ನಾಟಕಕ್ಕೆ ಭರ್ಜರಿ ಜಯ ತಂದುಕೊಟ್ಟರು . ಮಂಗಳವಾರ ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡ ಆಸ್ಟ್ರೇಲಿಯ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT