ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ತುಮಕೂರು, ಬೆಳಗಾವಿ ಶುಭಾರಂಭ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ತುಮಕೂರು ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಮತ್ತು ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ  ಮೊದಲ ಪಂದ್ಯದಲ್ಲಿ ಗುರುವಾರ ಉಡುಪಿ ತಂಡವನ್ನು 59– 37ರಲ್ಲಿ ಸೋಲಿಸಿ ಶುಭಾರಂಭ ಮಾಡಿತು.

ತುಮಕೂರು ತಂಡದ ಆಕಾಶ್ (25 ಪಾಯಿಂಟ್‌) ಹಾಗೂ ರಘು (14 ಪಾ.) ಗೆಲುವಿನ ರೂವಾರಿ ಯೆನಿಸಿಕೊಂಡರು. ಉಡುಪಿ ತಂಡದ ಪೃಥ್ವಿ (18 ಪಾ.) ಗಮನ ಸೆಳೆದರು.

ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ತಂಡ ಹಾಸನದ ಎದುರು 40–12ರಿಂದ ಲೀಲಾಜಾಲವಾಗಿ ಗೆದ್ದಿತು.
ಇತರ ಪಂದ್ಯಗಳಲ್ಲಿ ಧಾರವಾಡ 47–11ರಲ್ಲಿ ರಾಯಚೂರು ಮೇಲೂ,  ದಾವಣಗೆರೆ 26–11ರಲ್ಲಿ ಹಾವೇರಿ ಎದುರು ಜಯ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT