ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಮೂವರಿಗೆ ನವರೋಜಿ ಪ್ರಶಸ್ತಿ

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಮೊದಲ ಬಾರಿಗೆ ಆರಂಭಿ­ಸಿರುವ ದಾದಾಭಾಯಿ ನವರೋಜಿ ಪ್ರಶಸ್ತಿ ಪುರಸ್ಕೃತ ಮೂವರ ಪಟ್ಟಿಯನ್ನು ಬ್ರಿಟನ್‌ ಸರ್ಕಾರ ಪ್ರಕಟಿಸಿದೆ.

ಭಾರತದ ಉದ್ಯಮಿ ನವರೋಜಿ ಹೆಸರಿನಲ್ಲಿ  ಬ್ರಿಟನ್‌ ಸರ್ಕಾರ ಪ್ರಶಸ್ತಿ ಆರಂಭಿಸಿದ್ದು, ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸಂಬಂಧವನ್ನು ಬಲಪಡಿಸಲು ಶ್ರಮಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ವಾಣಿಜ್ಯ ವಿಭಾಗದಲ್ಲಿ ಭಾರತ – ಬ್ರಿಟನ್‌ ವಾಣಿಜ್ಯ ಕೌನ್ಸಿಲ್‌ನ ಅಧ್ಯಕ್ಷ ಪೆಟ್ರೀಷಿಯಾ ಹೆವಿಟ್‌, ಶಿಕ್ಷಣ ವಿಭಾಗದಲ್ಲಿ ಡೇಮ್‌ ಆಶಾ ಖೇಮ್ಕಾ ಹಾಗೂ ಸಂಸ್ಕೃತಿ ವಿಭಾಗದಲ್ಲಿ ನಟ ಮಾಧವ ಶರ್ಮಾ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹೊಸ ವರ್ಷದ ಅಂಗವಾಗಿ ಗೌರವಿಸಲು ಈ ವರ್ಷದ ಆರಂಭದಲ್ಲಿ ಸಿದ್ಧಪಡಿಸಿದ್ದ ಗೌರವಾನ್ವಿತರ ಪಟ್ಟಿಯಲ್ಲೂ ಖೆಮ್ಕಾ ಸ್ಥಾನ ಪಡೆದಿದ್ದರು. ಅವರಿಗೆ ಪ್ರಶಸ್ತಿ ದೊರೆತಿರುವುದು ಬ್ರಿಟನ್‌ನಲ್ಲಿ ಭಾರ­ತೀಯರಿಗೆ ಸಿಕ್ಕ ಮನ್ನಣೆ ಎಂದು ಬಣ್ಣಿಸಲಾಗಿದೆ.

ಸಾರ್ವಜನಿಕರಿಂದ ಬರುವ ನಾಮ­ನಿರ್ದೇಶನ­ಆಧರಿಸಿ ಸಚಿವರ ತಂಡ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಸಾರ್ವಜನಿ­ಕರಿಂದ ಒಟ್ಟು 80 ಅರ್ಜಿಗಳು ಬಂದಿದ್ದವು. ಪ್ರಾದೇಶಿಕ ಪ್ರವಾಸಿ ಭಾರ­ತೀಯ ದಿನದ ಅಂಗವಾಗಿ ಶುಕ್ರವಾರ  ಸಮಾರಂಭ ದಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಬ್ರಿಟನ್‌ ಉಪ ಪ್ರಧಾನಿ ನಿಕ್‌ ಕ್ಲೆಗ್ ಭವ್ಯ ಸ್ವಾಗತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT