ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್: ಮತ್ತೆ ಜನಮತ ಗಣನೆಗೆ ಹೆಚ್ಚಿದ ಒತ್ತಡ

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಲಂಡನ್/ಬರ್ಲಿನ್‌ (ಪಿಟಿಐ, ಎಎಫ್‌ಪಿ): ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕೇ ಎಂಬ ಬಗ್ಗೆ ಇನ್ನೊಂದು ಬಾರಿ ಜನಮತ ಗಣನೆ ನಡೆಸಬೇಕು ಎನ್ನುವ ಆನ್‌ಲೈನ್‌ ಮನವಿಗೆ 30 ಲಕ್ಷಕ್ಕೂ ಹೆಚ್ಚು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಮನವಿಯನ್ನು ಯುನೈಟೆಡ್‌ ಕಿಂಗ್‌ಡಮ್‌ (ಯು.ಕೆ) ಸಂಸತ್ತಿನ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಯಾವುದೇ ಮನವಿಯ ಬಗ್ಗೆ ಯು.ಕೆ. ಸಂಸತ್ತು ಚರ್ಚೆ ನಡೆಸಬೇಕು ಎಂದಾದರೆ, ಆ ಮನವಿಗೆ ಕನಿಷ್ಠ ಲಕ್ಷ ಜನ ಸಹಿ ಮಾಡಬೇಕು. ಈ ಮನವಿ ಬಗ್ಗೆ ಸಂಸತ್ತಿನ ಮನವಿಗಳ ಸ್ಥಾಯಿ ಸಮಿತಿ ಚರ್ಚೆ ನಡೆಸಲಿದೆ ಎಂದು ಕನ್ಸರ್ವೇಟಿವ್‌ ಪಕ್ಷದ ಸಂಸದ ಬೆನ್‌ ಹಾವ್ಲೆಟ್‌ ಖಚಿತಪಡಿಸಿದ್ದಾರೆ.

ಈ ನಡುವೆ, ಒಕ್ಕೂಟದಿಂದ ಬ್ರಿಟನ್ ಹೊರ ನಡೆಯಬೇಕು ಎಂದು ಮತ ಚಲಾಯಿಸಿದ್ದ ಹಲವರು, ತಮ್ಮ ನಿಲುವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನು ತಮ್ಮ ಟ್ವಿಟರ್ ಖಾತೆ ಮೂಲಕ (#Regrexit ಹ್ಯಾಷ್‌ಟ್ಯಾಗ್‌ ಬಳಸಿ) ಹೇಳಿಕೊಂಡಿದ್ದಾರೆ. ಒಕ್ಕೂಟದಿಂದ ಬೇರೆಯಾಗಬೇಕು ಎಂದು ಮತ ನೀಡಿದ್ದ ಮಹಿಳೆಯೊಬ್ಬರು, ‘ಇನ್ನೊಮ್ಮೆ ಜನಮತ ಗಣನೆ ನಡೆದರೆ, ಒಕ್ಕೂಟದ ಜತೆ ಇರುವುದರ ಪರವಾಗಿ ಮತ ಚಲಾಯಿಸುವೆ’ ಎಂದು ಲಂಡನ್ ಈವನಿಂಗ್‌ ಸ್ಟ್ಯಾಂಡರ್ಡ್‌ ಪತ್ರಿಕೆಗೆ ತಿಳಿಸಿದ್ದಾರೆ.

‘ಒಕ್ಕೂಟದಲ್ಲಿ ಮುಂದುವರಿಯುವ ಬಗ್ಗೆ ನಡೆಯುವ ಜನಮತ ಗಣನೆಯಲ್ಲಿ ಮತದಾನ ಶೇಕಡ 75ಕ್ಕಿಂತ ಕಡಿಮೆಯಾಗಿ, ಶೇಕಡ 60ಕ್ಕಿಂತ ಕಡಿಮೆ ಜನ ಹೊರಬರಬೇಕು ಅಥವಾ ಜೊತೆಗಿರಬೇಕು ಎಂದು ಹೇಳಿದರೆ, ಮತ್ತೊಮ್ಮೆ ಜನಮತ ಗಣನೆ ನಡೆಸಬೇಕು’ ಎಂದು ಈ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿಯನ್ನು ಮತದಾನಕ್ಕೂ ಮೊದಲೇ ಸಿದ್ಧಪಡಿಸಲಾಗಿತ್ತು. ಈಗ ಮನವಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿದೆ. ಶುಕ್ರವಾರ ಪ್ರತಿ ಗಂಟೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಇದಕ್ಕೆ ಸಹಿ ಮಾಡುತ್ತಿದ್ದ ಕಾರಣ, ಯು.ಕೆ. ಸಂಸತ್ತಿನ ವೆಬ್‌ಸೈಟ್‌ ಕೆಲಕಾಲ ಸ್ಥಗಿತಗೊಂಡಿತ್ತು.

ಪುನರ್‌ ಪರಿಶೀಲಿಸಲು ಜರ್ಮನಿ ಒತ್ತಾಯ: ಐರೋಪ್ಯ ಒಕ್ಕೂಟದಿಂದ ಹೊರ ನಡೆಯುವ ತೀರ್ಮಾನವನ್ನು ಪುನರ್‌ ಪರಿಶೀಲಿಸಲು ಬ್ರಿಟನ್ನಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಜರ್ಮನಿ ಹೇಳಿದೆ. ಆದರೆ, ‘ಹೊರ ನಡೆಯುವ ಪ್ರಕ್ರಿಯೆಯನ್ನು ಈ ವಾರ ನಡೆಯುವ ಶೃಂಗಸಭೆಯಲ್ಲೇ ಆರಂಭಿಸಿ’ ಎಂದು ಯುರೋಪ್‌ ಸಂಸತ್ತಿನ ಮುಖ್ಯಸ್ಥ ಮಾರ್ಟಿನ್ ಶುಲ್ಜ್ ಬ್ರಿಟನ್ನಿಗೆ ತಾಕೀತು ಮಾಡಿದ್ದಾರೆ.

‘ಬ್ರೆಕ್ಸಿಟ್‌’ ಪರ ನಿಂತ ಬಡವರು
ಪ್ಯಾರಿಸ್ (ಎಎಫ್‌ಪಿ): ಹೊಸ ಕಾಲದ ಆರ್ಥಿಕ ಪ್ರಯೋಜನಗಳನ್ನು ದಕ್ಕಿಸಿಕೊಳ್ಳಲು ಆಗದ ಬ್ರಿಟನ್ನಿನ ಬಡ ವರ್ಗದವರು, ಹೆಚ್ಚಿನ ಶಿಕ್ಷಣ ಪಡೆಯದವರು ‘ಬ್ರೆಕ್ಸಿಟ್’ ಪರ ಮತ ಚಲಾಯಿಸಿದರು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ಅತಿ ಹೆಚ್ಚು ತೊಂದರೆಗೆ ಒಳಗಾದವರು, ಆರ್ಥಿಕವಾಗಿ ಅತ್ಯಂತ ಅಭದ್ರತೆ ಎದುರಿಸುತ್ತಿರುವವರು ಐರೋಪ್ಯ ಒಕ್ಕೂಟದಿಂದ ಯುನೈಟೆಡ್ ಕಿಂಗ್‌ಡಮ್‌ (ಯು.ಕೆ) ಹೊರನಡೆಯಬೇಕು ಎಂದು ಮತ ಚಲಾಯಿಸಿದರು ಎಂಬ ವಿಶ್ಲೇಷಣೆಗಳು ‘ಬ್ರೆಕ್ಸಿಟ್’ ತೀರ್ಪಿನ ನಂತರ ಕೇಳಿಬಂದಿವೆ.

‘ಎಲ್ಲೆಡೆ ಮತ ಚಲಾವಣೆ ಒಂದೇ ಮಾದರಿಯಲ್ಲಿ ನಡೆದಿದೆ’ ಎನ್ನುತ್ತಾರೆ ಅಮೆರಿಕದ ಮೂಲದ ಬ್ರೂಕಿಂಗ್ಸ್‌ ಇನ್‌ಸ್ಟಿಟ್ಯೂಷನ್ನಿನ ಹಿರಿಯ ಸಂಶೋಧಕ ವಿಲಿಯಂ ಗಾಲ್‌ಸ್ಟನ್.

ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶಗಳ ಜನ, ಈ ಹಿಂದೆ ಕೈಗಾರಿಕಾ ಕೇಂದ್ರಗಳಾಗಿದ್ದ ಊರಿನವರು, ನಗರಗಳ ಸುತ್ತ ಇರುವ ಬಡ ಪ್ರದೇಶಗಳ ಜನ, ವಿಶ್ವವಿದ್ಯಾಲಯಗಳ ಶಿಕ್ಷಣ ಕಂಡಿಲ್ಲದವರು ಮತ್ತು ಹೆಚ್ಚು ವಯಸ್ಸಾದವರು ‘ಒಕ್ಕೂಟದಿಂದ ಹೊರನಡೆಯಬೇಕು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT