ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ ಇನ್ನೊಬ್ಬರ ಇಷ್ಟಾನಿಷ್ಟ ಅವಲಂಬಿಸಿಲ್ಲ

ಪ್ರಿಯಾಂಕಾ ವಾಧ್ರಾಗೆ ಗೃಹ ಇಲಾಖೆ ತಿರುಗೇಟು
Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನ ನಿಲ್ದಾ­ಣ­ಗಳಲ್ಲಿನ ಸಾಮಾನ್ಯ ಭದ್ರತಾ ತಪಾ­ಸಣೆ­ಯಿಂದ  ತಮ್ಮ ಕುಟುಂ­ಬಕ್ಕೆ ನೀಡಿದ ವಿನಾಯಿತಿ­ ಹಿಂತೆಗೆದು­ಕೊಳ್ಳು­ವಂತೆ ಪ್ರಿಯಾಂಕಾ ವಾಧ್ರಾ ಅವರು ಎಸ್‌ಪಿ­ಜಿಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು, ‘ಭದ್ರತೆ­ಯು ಇನ್ನೊಬ್ಬರ ಮೂಗಿನ ನೇರಕ್ಕೆ ಇರುವುದಿಲ್ಲ. ಇದಕ್ಕೆ ರಾಜಕೀಯ ಬಣ್ಣ ಬಳಿದು ಲಾಭ ಮಾಡಿಕೊಳ್ಳಲು ಯತ್ನಿಸಬಾರದು’ ಎಂದಿದ್ದಾರೆ.

ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಭದ್ರತಾ ಸಂಸ್ಥೆಗಳಿಗೆ ಬಿಟ್ಟ ವಿಷಯ’ ಎಂದು ಪ್ರತಿಕ್ರಿಯಿಸಿದರು. ತಮ್ಮ ಪತಿ ರಾಬರ್ಟ್‌ ವಾಧ್ರಾ ಅವ­ರಿಗೆ ನೀಡಿರುವ ವಿಶೇಷ ಭದ್ರತಾ ಸೌಲ­ಭ್ಯ­ಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರ ಪರಿ­ಶೀಲಿಸುತ್ತಿರುವುದಾಗಿ ಮಾಧ್ಯಮ­­ಗಳಲ್ಲಿ ಬಂದ ವರದಿಗಳ ಬೆನ್ನಲ್ಲಿಯೇ ಎಸ್‌ಪಿಜಿ ಮುಖ್ಯಸ್ಥ ದುರ್ಗಾ ಪ್ರಸಾದ್‌ ಅವರಿಗೆ  ಪತ್ರ ಬರೆದು ಪ್ರಿಯಾಂಕಾ ಈ ಕೋರಿಕೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT