ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭನ್ವರ್‌ ಲಾಲ್‌ ಅಮಾನತು

ರಾಹುಲ್‌ ವಿರುದ್ಧ ಕಟುಟೀಕೆ
Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕಟುವಾಗಿ ಟೀಕಿಸಿರುವ ರಾಜಸ್ತಾನದ ಶಾಸಕ ಭನ್ವರ್‌ ಲಾಲ್‌ ಶರ್ಮಾ ಅವರನ್ನು ಪಕ್ಷದಿಂದ ಭಾನು ವಾರ ಅಮಾನತು ಮಾಡಲಾಗಿದೆ.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ  ಗುರುದಾಸ್‌ ಕಾಮತ್‌ ಅವರ ಸೂಚನೆ ಅನುಸಾರ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ’ ಎಂದು ರಾಜಸ್ತಾನ ಪ್ರದೇಶ ಕಾಂಗ್ರೆಸ್‌ ಸಮಿತಿ ವಕ್ತಾರರಾದ ಅರ್ಚನಾ ಶರ್ಮಾ ತಿಳಿಸಿದ್ದಾರೆ.

ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭನ್ವರ್‌ ಲಾಲ್‌ ಶರ್ಮಾ, ‘ಇದಕ್ಕೆ ಹೆದರುವುದಿಲ್ಲ. ರಾಹುಲ್‌ ಗಾಂಧಿ ಅವರ ಸುತ್ತ ಇರುವ ಸಲಹೆಗಾರರಿಗೆ  ಪಕ್ಷ ಸಂಘ­ಟನೆಯ ತಳ್ಳಮಟ್ಟದ ಜ್ಞಾನ ಇಲ್ಲ. ಪಕ್ಷದ ಹೀನಾಯ ಸೋಲಿಗೆ ಅವರೆಲ್ಲರೂ ಹೊಣೆಗಾರರು. ಪಕ್ಷವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೀತಿ ದುರದೃಷ್ಟಕರ’ ಎಂದಿದ್ದಾರೆ.

‘ರಾಹುಲ್‌ ಗಾಂಧಿ ಅವರಿಗೆ ನಿರ್ದಿಷ್ಟ ಗುರಿಯೇ ಇಲ್ಲ. ಅವರ ಸುತ್ತ ಇದ್ದ ಸಲಹೆಗಾರರು ರಾಜಕೀಯವಾಗಿ  ಅನನುಭವಿಗಳು’ ಎಂದು ಭನ್ವರ್‌ ಲಾಲ್‌ ಶರ್ಮಾ  ಟೀಕಿಸಿದ್ದರು.

‘ರಾಹುಲ್‌ ಗಾಂಧಿ ಕಾಂಗ್ರೆಸ್‌ ಸರ್ಕಸ್‌ ಸರ್ಕಸ್ ಕಂಪೆನಿಯ ಮುಖ್ಯ ವ್ಯವಸ್ಥಾಪಕ (ಎಂ.ಡಿ). ಸೋನಿಯಾ ಗಾಂಧಿ ಅವರು ಪುತ್ರ ವ್ಯಾಮೋಹ ಬಿಟ್ಟು ಪ್ರಜಾ­ಸತ್ತಾತ್ಮಕ ಮಾರ್ಗದಲ್ಲಿ ಪಕ್ಷವನ್ನು ಪುನರ್‌ರಚಿಸಿ, ಬಲಪಡಿ ಸಲು ಕಾರ್ಯೋನ್ಮುಖ ರಾಗಬೇಕು’ ಎಂದು ಆರನೇ ಭಾರಿಗೆ ವಿಧಾನಸಭೆಗೆ ಆಯ್ಕೆ ಆಗಿರುವ ಶರ್ಮಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT