ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಶೇ 70ರಷ್ಟು ಹೆಚ್ಚಳ

Last Updated 23 ನವೆಂಬರ್ 2014, 11:27 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತದಲ್ಲಿ 2012-2013ರಲ್ಲಿ ಭಯೋತ್ಪಾದನೆ ಚಟುವಟಿಕೆ ಶೇ 70ರಷ್ಟು ಹೆಚ್ಚಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಪೀಸ್ ಸಂಸ್ಥೆ(ಐಇಪಿ) ಹೇಳಿದೆ.

ಐಇಪಿ ಬಿಡುಗಡೆ ಮಾಡಿರುವ ಜಾಗತಿಕ ಭಯೋತ್ಪಾದನೆ ಸೂಚ್ಯಂಕ-2014ರ ಪ್ರಕಾರ ಭಾರತದಲ್ಲಿ ಕಳೆದ ವರ್ಷ 404 ಮಂದಿ ಭಯೋತ್ಪಾದನೆಗೆ ಬಲಿಪಶುಗಳಾಗಿದ್ದಾರೆ. 2011-12ರಲ್ಲಿ ಈ ಸಂಖ್ಯೆ 238ರಷ್ಟಿತ್ತು ಎಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಭಯೋತ್ಪಾದನಾ ಚಟುವಟಿಕೆಗಳು ಭಾರತದಲ್ಲೇ ನಡೆದಿದ್ದು, 43 ವಿವಿಧ ಭಯೋತ್ಪಾದನಾ ಸಂಘಟನೆಗಳು ಈ ಕೃತ್ಯಗಳನ್ನು ಎಸಗಿವೆ. ಸಂಘಟನೆಗಳನ್ನು ಇಸ್ಲಾಮಿಕ್ ಭಯೋತ್ಪಾದನೆ, ಪ್ರತ್ಯೇಕತಾವಾದಿ ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಗಳು ಎಂದು ಮೂರು ವಿಭಾಗ ಮಾಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT