ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಚಿನ್ನದ ಟ್ರೋಫಿ

17ನೇ ಎಫ್‌ಐಎಪಿ ಛಾಯಾಚಿತ್ರಗಳ ದ್ವೈವಾರ್ಷಿಕ ವಿಶ್ವ ಕಪ್
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಫಿ (ಎಫ್‌ಐ-ಎಪಿ) ನಗರದಲ್ಲಿ ಆಯೋಜಿಸಿದ್ದ ‘17ನೇ ಎಫ್‌ಐಎಪಿ ನೇಚರ್‌ ಬೈಎನಿ-ಯಲ್‌ ವರ್ಲ್ಡ್‌ ಕಪ್‌’ನ  (ಪ್ರಕೃತಿ ಕುರಿತ ಛಾಯಾಚಿತ್ರಗಳ ದ್ವೈವಾರ್ಷಿಕ ವಿಶ್ವ ಕಪ್) ಪ್ರಿಂಟ್‌ ವಿಭಾಗದಲ್ಲಿ ಇಟಲಿ ವಿಶ್ವಕಪ್‌ ಪಡೆದರೆ, ಭಾರತ ಚಿನ್ನ, ಸ್ಪೇನ್‌ ಬೆಳ್ಳಿ ಮತ್ತು ಸ್ಲೋವೊ-ಕಿಯಾ ಕಂಚಿನ ಟ್ರೋಫಿಗಳನ್ನು ಪಡೆದಿವೆ.

ಪ್ರಿಂಟ್‌ ವಿಭಾಗದಲ್ಲಿ ವೈಯಕ್ತಿಕ-ವಾಗಿ ಭಾರತದ ಜಯದೇವ ಬಸಪ್ಪ ಹಾಗೂ ಫಿಲಿಪ್‌ ರೋಸ್‌  ಕಂಚಿನ ಪದಕವನ್ನು ಗಳಿಸಿದ್ದಾರೆ.

‘ಪ್ರೊಜೆಕ್ಟೆಡ್‌ ಇಮೇಜ್‌’ಗಳ ಸ್ಪರ್ಧೆಯಲ್ಲಿ ಇಟಲಿ ಚಿನ್ನ, ಫ್ರಾನ್ಸ್‌ ಬೆಳ್ಳಿ ಮತ್ತು ಭಾರತವು ಕಂಚಿನ ಟ್ರೋಫಿಗಳನ್ನು ಪಡೆದಿವೆ. ವೈಯಕ್ತಿಕ ಸ್ಪರ್ಧೆಯಲ್ಲಿ ಎಸ್‌.ಕೆ. ಮಂಜುನಾಥ್‌ ಅವರು ಕಂಚಿನ ಪದಕ ಪಡೆದಿದ್ದಾರೆ. ತೀರ್ಪುಗಾರರು ವಿಜೇತರ ಹೆಸರನ್ನು ಶುಕ್ರವಾರ ಇಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT