ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಕೂಡ ಎರಡು ತಿಂಗಳ ಹಿಂದಷ್ಟೇ ಭಾರತದಲ್ಲಿನ ಖಾಸಗಿ ಬ್ಯಾಂಕಿಂಗ್ ವಹಿವಾಟನ್ನು ಸ್ಥಗಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಚ್‌ಎಸ್‌ಬಿಸಿಯ ಖಾಸಗಿ ಬ್ಯಾಂಕಿಂಗ್ ವಹಿವಾಟಿನಲ್ಲಿ ಪ್ರಮುಖವಾಗಿ ‘ಸಂಪತ್ತು ನಿರ್ವಹಣೆ ಸೇವೆ’ ಸೇರಿದೆ. ಈ ವಿಭಾಗದಲ್ಲಿದ್ದ ಸುಮಾರು 70 ಮಂದಿ ನೌಕರರನ್ನು ರಿಟೇಲ್ ವಿಭಾಗದಲ್ಲಿ ವಿಲೀನಗೊಳಿಸಲಾಗಿದೆ ಎಂದು ಬ್ಯಾಂಕಿನ ವಕ್ತಾರರೊಬ್ಬರು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಹಿವಾಟು ಸ್ಥಗಿತಗೊಳಿಸುತ್ತಿರುವುದಾಗಿ ಬ್ಯಾಂಕ್ ತನ್ನ ನೌಕರರಿಗೆ ಶುಕ್ರವಾರ ಬೆಳಿಗ್ಗೆಯಷ್ಟೇ ಇ–ಮೇಲ್ ಮೂಲಕ ತಿಳಿಸಿತು.