ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬತ್ತಳಿಕೆಗೆ ‘ನಿರ್ಭಯ್‌’

ದೇಶೀ ನಿರ್ಮಿತ ಕ್ಷಿಪಣಿ ಯಶಸ್ವಿ ಪ್ರಯೋಗ
Last Updated 17 ಅಕ್ಟೋಬರ್ 2014, 9:51 IST
ಅಕ್ಷರ ಗಾತ್ರ

ಬಲಸೋರ್‌, ಒಡಿಶಾ (ಪಿಟಿಐ): ಭಾರತದ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ ಸೇರ್ಪಡೆಗೊಂಡಿದೆ. ದೇಶೀ ನಿರ್ಮಿತ ನ್ಯೂಕ್ಲಿಯರ್‌ ಸಬ್‌ಸೋನಿಕ್‌ ಕ್ಷಿಪಣಿ ‘ನಿರ್ಭಯ್‌’ ಶುಕ್ರವಾರ ನಿಗದಿತ ಗುರಿ ತಲುಪಿ ಯಶಸ್ವಿ ಪ್ರಯೋಗ ಕಂಡಿತು.

ಕ್ಷಿಪಣಿ ಹಾರಿಸಿದ ಸ್ಥಳದಿಂದ 700 ಕಿ.ಮೀ ದೂರದ ಚಂಡಿಪುರ ಪರೀಕ್ಷಾ ವಲಯದಲ್ಲಿ ನಿಗದಿಯಾಗಿದ್ದ ಗುರಿ ತಲುಪುವಲ್ಲಿ ‘ನಿರ್ಭಯ್‌’ ಯಶಸ್ವಿಯಾಯಿತು.

‘ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೊಬೈಲ್‌ ಲಾಂಚರ್‌ ಮೂಲಕ ಕ್ಷಿಪಣಿಯನ್ನು ಹಾರಿಸಲಾಯಿತು. 1.13 ಗಂಟೆ ಕಾಲ ಕ್ರಮಿಸಿದ ಕ್ಷಿಪಣಿ ಯಶಸ್ವಿಯಾಗಿ ಗುರಿ ತಲುಪಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯ್‌ ಕ್ಷಿಪಣಿಯು ಎರಡನೇ ಪರೀಕ್ಷಾರ್ಥ ಪ್ರಯೋಗದಲ್ಲಿ ಯಶಸ್ಸು ಕಂಡಿದೆ. ಈ ಹಿಂದೆ ಕಳೆದ ವರ್ಷ ಮಾರ್ಚ್‌ 12ರಂದು ನಡೆದಿದ್ದ ಪರೀಕ್ಷಾರ್ಥ ಪ್ರಯೋಗ ವಿಫಲವಾಗಿತ್ತು. ಆದರೆ, ಶುಕ್ರವಾರದ ಪ್ರಯೋಗ ಯಶಸ್ಸನ್ನು ಕಂಡಿದೆ.


ಈವರೆಗೆ 290 ಕಿ.ಮೀ ವರೆಗೆ ಕ್ರಮಿಸಬಲ್ಲ ದೇಶೀಯ ಕ್ಷಿಪಣಿ ‘ಬ್ರಹ್ಮೋಸ್‌’ ಮಾತ್ರ ಈವರೆಗೆ ಭಾರತದ ಬತ್ತಳಿಕೆಯಲ್ಲಿತ್ತು. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿರುವ ನಿರ್ಭಯ್‌ ಕ್ಷಿಪಣಿಯು 700ರಿಂದ 1000 ಕಿ.ಮೀ ವರೆಗೆ ಕ್ರಮಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT