ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕಿಸ್ತಾನ ಮಾತುಕತೆ: ಸಲಹೆ

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯ­ನಿರ್ವಹಿ­ಸುತ್ತಿ­ರುವ ಭಯೋತ್ಪಾದನಾ ಜಾಲವನ್ನು ನಾಶಮಾಡಿಲ್ಲ. ಆದ್ದರಿಂದ ಭಾರತವು ಆ  ದೇಶದೊಂದಿಗೆ ಗಂಭೀರ ಮಾತುಕತೆ ನಡೆ­ಸುವಂಥ ವಾತಾವರಣ ಇಲ್ಲ.

ನರೇಂದ್ರ ಮೋದಿ ಅವರು ಪ್ರಧಾನಿ­ಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂಭ್ರಮದಲ್ಲಿ ಈ ಅಂಶವನ್ನು ಮರೆಯ­ಕೂಡದು’ ಎಂದು ಕಾಂಗ್ರೆಸ್‌್ ಶುಕ್ರವಾರ ಎಚ್ಚರಿಕೆ ನೀಡಿದೆ.

‘ಭಯೋತ್ಪಾದನಾ ಜಾಲವನ್ನು ನಾಶ­ಪಡಿ­ಸುವ ಯಾವುದೇ ಸೂಚನೆಯನ್ನು ಪಾಕಿಸ್ತಾನ ನೀಡಿಲ್ಲ. ಆಫ್ಘಾನಿಸ್ತಾನದ ಹೆರಾತ್‌ನಲ್ಲಿ ಭಾರತದ ಕಾನ್ಸಲೇಟ್‌್ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ಯಾರು ನೆರವು ನೀಡುತ್ತಿದ್ದಾರೆ ಎನ್ನು­ವುದು ನಮಗೆಲ್ಲರಿಗೂ ಗೊತ್ತಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶಕೀಲ್‌್ ಅಹಮದ್‌ ಅವರು ಇಲ್ಲಿ ತಿಳಿಸಿದರು.

ಉತ್ತರ ತೃಪ್ತಿಕರವಾಗಿಲ್ಲ: ಭಾರತದ ಇಬ್ಬರು ಪತ್ರಕರ್ತರನ್ನು ದೇಶದಿಂದ ಉಚ್ಚಾಟನೆ ಮಾಡಿದ್ದಕ್ಕೆ  ಪಾಕಿಸ್ತಾನ ಕೊಟ್ಟ ಪ್ರತಿಕ್ರಿಯೆ ಸಮಾಧಾನಕರ­ವಾಗಿಲ್ಲ ಎಂದು ಭಾರತ ಶುಕ್ರವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT