ವಾಷಿಂಗ್ಟನ್ (ಪಿಟಿಐ): ಉದ್ದಿಮೆ ವ್ಯವಹಾರದಲ್ಲಿ ಸಂಸ್ಕೃತಿಯ ಪಾತ್ರವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲು ‘ಬಫ್ಫ ಬಫ್ಫ’ ಎಂಬ ಆಟವನ್ನು ಅಳವಡಿಸಿಕೊಂಡ ಭಾರತ ಮೂಲದ ಮಹಿಳಾ ಪ್ರೊಫೆಸರ್ ವಿನೂತನ ಶಿಕ್ಷಣ ವಿಧಾನಗಳಿಗೆ ನೀಡಲಾಗುವ ಪ್ರತಿಷ್ಠಿತ ಪೆಲ್ಟಿಯರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಜನಿ ಅವರು ನಾರ್ತ್ ಡಕೋಟ ಸ್ಟೇಟ್ ವಿವಿಯಲ್ಲಿ ಮಾರ್ಕೆಟಿಂಗ್ ವಿಷಯಬೋಧಿಸುತ್ತಿದ್ದಾರೆ.