ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣ ಮತ್ತು ಭೂಷಣ

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ದಿನಾಚರಣೆಯಂದು ಎರಡು ಬಗೆಯ ಗಾಂಧಿವಾದಿಗಳು ಮನ ಸ್ಸಿಗೆ ಬಂದರು. ಒಂದು– ವಿಚಾರ, ವಸ್ತ್ರಗಳ ಪ್ರಚಾರದಲ್ಲಿ ತೊಡಗಿರುವವರು. ಇನ್ನೊಂದು– ಜನಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಮೊದಲನೆಯ ವರ್ಗದವರ ಭಾಷಣಗಳು ಪತ್ರಿಕೆಗಳಲ್ಲಿ ಬರುತ್ತವೆ. ಅವರಿಗೆ ಸಭೆ, ಚರ್ಚೆಗಳೇ ಹೆಚ್ಚು ಪ್ರಿಯ. ಎರಡನೆಯ ವರ್ಗದವರೂ ಮಾತನಾಡಬಲ್ಲರು; ಮಾಧ್ಯಮಗಳು ಅವರಿಗೂ ಜಾಗ ಕೊಟ್ಟಿವೆ. ಸಮುದಾಯಕ್ಕೆ ನೇರ ಉಪಯುಕ್ತ ದೃಷ್ಟಿಯಿಂದ, ವಿರಳ ಸಂಖ್ಯೆಯಲ್ಲಿದ್ದರೂ ಎರಡನೆಯ ಗುಂಪಿನವರೇ ಮೇಲು.

ಗಾಂಧೀಜಿ ಹೋರಾಟ, ರಚನಾತ್ಮಕ ಕೆಲಸ ಜತೆಜತೆಗೇ ಸಾಗಬೇಕೆಂದಿದ್ದರು. ಆದರೆ ಕೆಲವರು ಖಾದಿ, ಭಜನೆ, ಭಾಷಣಗಳನ್ನಷ್ಟೆ ಕೆಲಸ ಅಂದುಕೊಂಡರು. ಆದರೆ ಬೆರಳೆಣಿಕೆಯ ಕೆಲವರು ಸಮಾಜದ, ಸರ್ಕಾರದ, ಓರೆಕೋರೆಗಳನ್ನು ಟೀಕಿಸುತ್ತ ಪ್ರತಿಭಟನೆಗಳಲ್ಲಿ ನಿಜಕ್ಕೂ ಭಾಗವಹಿಸಿದರು.

ಇತ್ತೀಚಿನ ಉದಾಹರಣೆಯೆಂದರೆ ಬೆಂಗಳೂರು ಮಹಾನಗರದ ಕಸದಿಂದ ಮಂಡೂರಿಗಾದ ದುರ್ದೆಸೆ ಮುಖ್ಯಮಂತ್ರಿಗಳಿಗೆ ಮನವರಿಕೆ ಯಾಗ ಬೇಕಾದರೆ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿಯವರು ಹಟ ಹಿಡಿದು ಕೂರಬೇಕಾಯಿತು. ದೇಶ ಇಂತಹವರಿಗೆ ಕೃತಜ್ಞವಾಗಿರಬೇಕು. ಬರೀ ಭಾಷಣ ಶೂರರಿಗಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT