ವಿಶ್ವಸಂಸ್ಥೆಯ ಪ್ರಸ್ತುತ ವರದಿಯ ಪ್ರಕಾರ, ಭೀಕರ ಕಂಪನದಿಂದ ಅಕ್ಷರಶಃ ನಲುಗಿರುವ ಗೊರ್ಖಾ ಹಾಗೂ ಸಿಂಧುಪಲ್‌ಚೌಕ್‌ನಂಥ ಜಿಲ್ಲೆಗಳಲ್ಲಿ ಶೇಕಡ 90ರಷ್ಟು ಮನೆಗಳು ಧ್ವಂಸಗೊಂಡಿವೆ.
‘ಸರ್ಕಾರಿ ಅಂಕಿ–ಅಂಶಗಳ ಪ್ರಕಾರ, ಮೇ ತಿಂಗಳ 1ರ ತನಕ 1,60,786 ಮನೆಗಳು ಧ್ವಂಸಗೊಂಡಿದ್ದು, 1,43,642 ಮನೆಗಳು ಹಾನಿಗೊಂಡಿವೆ. ಆದರೆ, 5 ಲಕ್ಷದಷ್ಟು ಮನೆಗಳು ನಾಶಗೊಂಡಿವೆ ಎಂದು ಸರ್ಕಾರ ಹೇಳುತ್ತಿದೆ’ ಎಂದು ವರದಿ ತಿಳಿಸಿದೆ.