ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನೆಡೆಗೆ ಪಯಣ: ಮುಕ್ಕಾಲು ಭಾಗ ಪೂರ್ಣ

Last Updated 4 ಜುಲೈ 2014, 11:06 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಭಾರತದ ಮಂಗಳಯಾನ ನೌಕೆಯು ತನ್ನ ಯಾತ್ರೆಯ ಶೇಕಡಾ 75ರಷ್ಟು ಪಯಣವನ್ನು ಪೂರ್ಣಗೊಳಿಸಿದೆ. ನೌಕೆಯು ಸೆಪ್ಟೆಂಬರ್ 24ರಂದು ಕೆಂಪುಗ್ರಹವನ್ನು ತಲುಪಬೇಕಾಗಿದೆ.

ಮಂಗಳಯಾನ ನೌಕೆಯು ತನ್ನ ಈವರೆಗಿನ ಪಯಣದಲ್ಲಿ ಅಂದಾಜು 510 ದಶಲಕ್ಷ ಕಿ.ಮೀ. ಗಳನ್ನು ಕ್ರಮಿಸಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ ತಿಳಿಸಿದೆ.

ಇದರೊಂದಿಗೆ ಮಂಗಳಯಾನ ನೌಕೆಯ 300 ದಿನಗಳ ದೀರ್ಫ ಬಾಹ್ಯಾಕಾಶ  ಪಯಣದಲ್ಲಿ ಮುಕ್ಕಾಲು ಭಾಗ ಪಯಣ  ಪೂರ್ಣಗೊಂಡಂತಾಗಿದೆ.

ನೌಕೆಯು ಸಮರ್ಪಕ ರೀತಿಯಲ್ಲಿ ಕಾರ್ಯ ಎಸಗುತ್ತಿದೆ ಎಂದು ತನ್ನ ಮಂಗಳಯಾನ ಯೋಜನೆಯ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಇಸ್ರೋ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT