ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನೌಕೆ: ಪೂರ್ವಭಾವಿ ಪರೀಕ್ಷೆ ಯಶಸ್ವಿ

Last Updated 22 ಸೆಪ್ಟೆಂಬರ್ 2014, 10:52 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಮಂಗಳ ನೌಕೆಯ ಪಥ ಸರಿಪಡಿಸುವಿಕೆ ಮತ್ತು ಮುಖ್ಯ ದ್ರವ ಎಂಜಿನ್ನಿನ ದಹನಶೀ­ಲತೆಯ ಪರೀಕ್ಷೆ ಸೋಮವಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು  ಇಸ್ರೊ ಹೇಳಿದೆ.

ಮಂಗಳ ನೌಕೆ ಕಕ್ಷೆ ಪ್ರವೇಶಿಸುವುದಕ್ಕೆ ಪೂರ್ವಭಾವಿ­ಯಾಗಿ ಈ ಪರೀಕ್ಷೆ ನಡೆಸಬೇಕಿತ್ತು. ವಿಜ್ಞಾನಿಗಳು ಇದನ್ನು ಅಗ್ನಿಪರೀಕ್ಷೆ ಎಂದೇ ಕರೆದಿದ್ದರು.

‘ನೌಕೆಯ ಪಥವನ್ನು ನಾಲ್ಕನೇ ಬಾರಿಗೆ ಸರಿಪಡಿಸಲು ಈ ಪರೀಕ್ಷೆ ನಡೆಸಬೇಕಿತ್ತು. ಸುಮಾರು 4 ಸೆಕೆಂಡು­ಗಳ ಕಾಲ ದ್ರವ ಎಂಜಿನ್‌ ಉರಿಸುವ ಈ ಪರೀಕ್ಷೆ ಯಶಸ್ವಿಯಾಗಿದೆ' ಎಂದು ಇಸ್ರೊ ಸ್ಪಷ್ಟಪಡಿಸಿದೆ.

300 ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸ­ಲಾಗಿರುವ ಎಂಜಿನ್‌ ಮತ್ತೆ ಸರಿಯಾಗಿ ಉರಿಯ­ಲಿ­ದೆಯೇ ಎಂಬುದೇ ಕುತೂಹಲದ ವಿಷಯವಾಗಿತ್ತು.

ಸೆ.24 ರಂದು ನೌಕೆ ಮಂಗಳನ ಕಕ್ಷೆ ಸೇರಲಿದೆ. ಸದ್ಯ ಪ್ರತಿ ಸೆಕೆಂಡ್‌ಗೆ 22.1 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನೌಕೆ ವೇಗ ಪ್ರತಿ ಸೆಕೆಂಡ್‌ಗೆ 4.4  ಕಿ.ಮೀಗೆ ತಗ್ಗಲಿದೆ. ಈ ವೇಗವನ್ನು ತಗ್ಗಿಸಲು ಎಂಜಿನ್‌ ಅನ್ನು 24 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉರಿಸಬೇಕಾಗುತ್ತದೆ ಎಂದೂ ಇಸ್ರೊ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT