ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಗದ್ದೆ ಜಲಾವೃತ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಪಕ್ಷಿಧಾಮದ ಬಳಿ ತುಂಗಾ­ನದಿ ಉಕ್ಕಿ ಹರಿಯುತ್ತಿದ್ದು, ನದಿಯ ನಡುಗಡ್ಡೆಯ ಕೆಳ ಸ್ತರದಲ್ಲಿ  ಸೈಬೀರಿ­ಯಾದ ವಲಸೆ ಹಕ್ಕಿಗಳು ಕಟ್ಟಿದ್ದ ಸಾವಿ­ರಾರು ಗೂಡುಗಳು ಕೊಚ್ಚಿಕೊಂಡು­ಹೋಗಿವೆ.

ಪ್ರತಿ ವರ್ಷ ಇಲ್ಲಿಗೆ ದೂರದ ಸೈಬೀರಿಯಾದಿಂದ 5 ಸಾವಿರಕ್ಕೂ ಹೆಚ್ಚು ಹಕ್ಕಿಗಳು ವಲಸೆ ಬಂದು ಸಂತಾನಾಭಿ­ವೃದ್ಧಿಯಲ್ಲಿ ತೊಡಗುತ್ತವೆ.
ಬೆಳಕ್ಕಿ, ಹಾವಕ್ಕಿ, ನೀರು ಕಾಗೆಗಳು ಇಲ್ಲಿ ಬೀಡುಬಿಟ್ಟಿದ್ದು, ನಡುಗಡೆಯ ಮೇಲೆ ಒಂದೂವರೆ ಅಡಿಯವರೆಗೆ  ನೀರು ಹರಿಯುತ್ತಿರುವ ಕಾರಣ ಗೂಡು­ಗಳು ನೀರಿನಲ್ಲಿ ತೇಲಿ ಹೋಗಿವೆ.

ನಡುಗಡ್ಡೆ ಸುತ್ತ ತಡೆಗೋಡೆ ಕಟ್ಟು­ವಂತೆ ಪಕ್ಷಿ ತಜ್ಞರು, ಪರಿಸರ ಪ್ರಿಯರ ಮನವಿಗೆ ಅರಣ್ಯ ಇಲಾಖೆ, ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿ­ಗಳು ಸ್ಪಂದಿಸದ ಕಾರಣ ಪ್ರತಿ ವರ್ಷದ ಮಳೆಗಾಲದಲ್ಲೂ ಹಕ್ಕಿಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT