ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿ ಸಂಪರ್ಕದಲ್ಲೂ ತ್ವರಿತ ಶೋಧ: ಗೂಗಲ್‌ ಹೊಸ ವ್ಯವಸ್ಥೆ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್‌­ ಅಂತ­ರ್ಜಾಲ ಸಂಪರ್ಕದ ವೇಗ ಕಡಿಮೆ ಇದ್ದರೂ ತ್ವರಿತವಾಗಿ ಮಾಹಿತಿ ಶೋಧ ನಡೆಸುವುದು ಸಾಧ್ಯ­­ವಾ­ಗುವಂತಹ ಹೊಸ ವ್ಯವಸ್ಥೆ­ಯನ್ನು ಸಿದ್ಧ­ಪ­­ಡಿ­ಸಲು ‘ಗೂಗಲ್‌’ ಮುಂದಾಗಿದೆ. ಬಳಕೆದಾರರು ನಿಧಾನಗತಿಯ ಅಂತ­­­­ರ್ಜಾಲ ಸಂಪರ್ಕ ಹೊಂದಿ­ದ್ದಾ­ರೆಯೇ ಎಂಬು­ದನ್ನು ಗೂಗಲ್‌ ಸ್ವಯಂ­­­ಚಾಲಿತವಾಗಿಯೇ ಗುರುತಿ­ಸಿ  ಅಂಥ­ವರಿಗಾಗಿ ವೇಗ­ವಾಗಿ ಶೋಧ ನಡೆ­ಸು­ವಂತಹ ಆವೃತ್ತಿ­ಯನ್ನು ರವಾನಿಸುತ್ತದೆ.

ಬಳಕೆದಾರರು ಹುಡುಕುವ ಮಾಹಿ­­­­ತಿಯ ಬೈಟ್‌ಗಳನ್ನು ಕಡಿಮೆ ಮಾಡುವ ಮೂಲಕ ವೇಗವಾಗಿ, ಕಡಿಮೆ ಖರ್ಚಿನಲ್ಲಿ ಸೇವೆ ಒದಗಿ­ಸು­ವುದು ಇದರ ಉದ್ದೇಶ ಎಂದು ಗೂಗ­ಲ್‌ನ ಎಂಜಿನಿಯರ್‌ ಭರತ್‌ ಮೆದಿ­ರತ್ತಾ  ತಿಳಿಸಿದ್ದಾರೆ. 

‘ಗೂಗಲ್‌ನ ಉನ್ನತ ಗುಣ­ಮಟ್ಟದ ಶೋಧ ಫಲಿ­ತಾಂಶ­ದಲ್ಲಿ ಯಾವ ಬದ­ಲಾವ­ಣೆಯೂ ಆಗು­ವು­ದಿಲ್ಲ. ಆದರೆ ನಕ್ಷೆ­ಗಳು ಮತ್ತು ಚಿತ್ರ­ಗಳು ಅತ್ಯಂತ ಅಗತ್ಯ­ವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತವೆ’ ಎಂದು ಭರತ್‌ ಮಾಹಿತಿ ನೀಡಿದ್ದಾರೆ. ಕಡಿಮೆ ವೇಗದ ಅಂತರ್ಜಾಲ ಸಂಪರ್ಕ ಹೊಂದಿರುವವರಿಗೂ  ಮಾಹಿತಿ ಸುಲಭದಲ್ಲಿ ದೊರೆ­ಯ­ಬೇ­ಕೆಂ­­­ಬುದು ಉದ್ದೇಶ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT