ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಫೋನ್‌ ಲಾಕ್‌!

ಪೋಷಕರ ಕರೆ ಸ್ವೀಕರಿಸದಿದ್ದುದಕ್ಕೆ ತಕ್ಕ ಶಿಕ್ಷೆ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇನ್ನು ಮುಂದೆ ಅಪ್ಪ ಅಥವಾ ಅಮ್ಮ ಕರೆ ಮಾಡಿದರೆ ಮಕ್ಕಳು ಸ್ವೀಕರಿಸದೇ ಅಲಕ್ಷಿಸುವಂತಿಲ್ಲ. ಹಾಗೊಮ್ಮೆ ಕರೆ ಸ್ವೀಕರಿಸಲಿಲ್ಲ ಎಂದುಕೊಳ್ಳಿ, ಮೊಬೈಲ್‌ ಕೆಲಸ ಮಾಡಲು ಸಾಧ್ಯವಾಗದಂತೆ ಲಾಕ್‌ ಆಗಿಬಿಡುತ್ತದೆ.

ಹೇಗೆ ಎನ್ನುವಿರಾ?
‘ಇಗ್ನೋರ್‌ ನೊ ಮೋರ್‌’ (Ignore No More)ಎಂಬ ಹೊಸ ಅಪ್ಲಿಕೇಷನ್‌ ಇದನ್ನು ಸಾಧ್ಯವಾಗಿಸಲಿದೆ ಎನ್ನುತ್ತಾರೆ  ಇದರ ಸೃಷ್ಟಿಕರ್ತ ಶಾರೋನ್‌ ಸ್ಟ್ಯಾಂಡಿಫರ್ಡ್‌.

ಇಂದು ಮೊಬೈಲ್‌ ಫೋನ್‌ ಬಳಕೆಗೆ ವಯಸ್ಸಿನ ಮಿತಿ ಎಂಬುದೇ ಇಲ್ಲ. ಒಂದಲ್ಲಾ ಒಂದು ಕಾರಣಕ್ಕೆ ಎಲ್ಲರೂ ಇದರ ಬಳಕೆದಾರರೇ ಆಗಿದ್ದಾರೆ. ಹೀಗಾಗಿ  ಮಕ್ಕಳ ಕೈಯಲ್ಲೂ ಮೊಬೈಲ್‌ ಫೋನ್‌ ಆಟವಾಡುತ್ತಿವೆ.

ಒಂದರ್ಥದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಥವಾ ಅವರು ಎಲ್ಲಿ ಇದ್ದಾರೆ ಎಂದು ತಿಳಿದುಕೊಳ್ಳಲು ಪೋಷಕರಿಗೆ ಮೊಬೈಲ್‌ ಫೋನ್‌ನಿಂದ ಅನುಕೂಲ­ವೂ ಆಗುತ್ತಿದೆ. ಆದರೆ ಕೆಲವು ತುಂಟ ಮಕ್ಕಳು ಮನೆಯಿಂದ ಪೋಷಕರು ಕರೆ ಮಾಡಿದರೆ ಸ್ವೀಕರಿಸದೇ ಅಲಕ್ಷಿಸುವುದುಂಟು. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ, ಭಯಕ್ಕೆ ಒಳಗಾಗುವುದಿದೆ.

ಆದರೆ ಇನ್ನು ಮುಂದೆ ಮಕ್ಕಳು ಕರೆ ಸ್ವೀಕರಿಸದೇ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಟ್ಯಾಂಡಿಫೋರ್ಡ್‌.
ಈ ಅಪ್ಲಿಕೇಷನನ್ನು ಪೋಷಕರು ತಮ್ಮ ಮೊಬೈಲ್‌ ಮತ್ತು ಮಕ್ಕಳ ಮೊಬೈಲ್‌ ಎರಡರಲ್ಲೂ ಇನ್‌ಸ್ಟಾಲ್‌ ಮಾಡಬೇಕು. ಆಗಷ್ಟೇ ಇದು ಸಮರ್ಪಕವಾಗಿ ಕೆಲಸ ಮಾಡುತ್ತದೆ.

ಮಕ್ಕಳು ಕರೆ ಸ್ವೀಕರಿಸದೇ ಇದ್ದಾಗ  ಪೋಷಕರು ಪಾಸ್‌ವರ್ಡ್‌ ಬಳಸಿ ಮಕ್ಕಳ ಮೊಬೈಲನ್ನೇ ಲಾಕ್‌ ಮಾಡಬಹುದು. ಹೀಗೆ ಲಾಕ್‌ ಆದ ಮೊಬೈಲ್‌ ಕೆಲಸ ಮಾಡಬೇಕಾದರೆ ಮಕ್ಕಳು ಅದನ್ನು ಪೋಷಕರ ಬಳಿಗೇ ಒಯ್ದು ಅನ್‌ಲಾಕ್‌ ಮಾಡಿಸಿಕೊಳ್ಳಬೇಕು. ಇಲ್ಲವೇ ಬೇರೆ ಫೋನ್‌ ಬಳಸಿ ಪೋಷಕರಿಗೆ ಕರೆ ಮಾಡುವ ಮೂಲಕ ಮೊಬೈಲ್‌ ಅನ್‌ಲಾಕ್‌ ಮಾಡಿಸಿಕೊಳ್ಳಬೇಕಾಗುತ್ತದೆ.

ಈ ಆ್ಯಪ್‌ ಇನ್‌ಸ್ಟಾಲ್‌ ಮಾಡಲು ಪೋಷಕರು ತಮ್ಮ ಮೊಬೈಲ್‌ ಮತ್ತು ಮಕ್ಕಳ ಮೊಬೈಲ್‌ನಲ್ಲಿ ಯೂಸರ್‌್ ನೇಮ್‌ ಅಥವಾ ಇ–ಮೇಲ್‌ ಮತ್ತು ಪಾಸ್‌ವರ್ಡ್‌ ಬಳಸಿ ರಿಜಿಸ್ಟರ್‌  ಮಾಡಬೇಕು. ಆ್ಯಪ್‌ ಅನ್‌ರಿಜಿಸ್ಟರ್‌ ಮಾಡಲು ಕೂಡಾ ಅದೇ ಯೂಸರ್‌ ನೇಮ್‌ ಅಥವಾ ಇ–ಮೇಲ್‌ ಮತ್ತು ಪಾಸ್‌ವರ್ಡ್‌ ಬಳಸಲೇಬೇಕು.

ಇದರಿಂದ ಮಕ್ಕಳು ಯಾವುದೇ ಕಾರಣಕ್ಕೂ ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಆ್ಯಪ್‌ ಕೆಲಸ ಮಾಡದಂತೆ  ತಡೆಯಲು ಯತ್ನಿಸಿದರೆ ತಕ್ಷಣವೇ ಮೊಬೈಲ್‌ ತನ್ನಷ್ಟಕ್ಕೆ ಲಾಕ್‌ ಆಗಿಬಿಡುತ್ತದೆ. ಮಾತ್ರವಲ್ಲ ಪೋಷಕರಿಗೆ ಇ–ಮೇಲ್‌ ಸಂದೇಶ ರವಾನೆಯಾಗುತ್ತದೆ.
ಈಗಂತೂ ಎಲ್ಲರೂ ಮೊಬೈಲನ್ನು ವೈಯಕ್ತಿಕ ಪಾಸ್‌ವರ್ಡ್‌ ಬಳಸಿ ನಿರ್ವಹಿಸುತ್ತಾರೆ. ಹೀಗಾಗಿ ಎಲ್ಲಾ ವಯೋಮಾನದವರಿಗೆ ಈ ಆ್ಯಪ್‌ ಪ್ರಯೋಜನಕ್ಕೆ ಬರುವ ಸಾಧ್ಯತೆ ಕಮ್ಮಿ.

ಐಫೋನ್‌ ಆವೃತ್ತಿಗಾಗಿ ಈ ಆ್ಯಪ್‌ ಅನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯನ್ನೂ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT