ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ: ನಿಲ್ಲದ ರಾಜ್ಯಸಭೆ ಗದ್ದಲ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮತಾಂತರದ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸ­ಬೇಕೆಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಸರ್ಕಾರ ಮಣಿಯದ ಕಾರಣ ಸತತ ನಾಲ್ಕನೇ ದಿನವಾದ ಗುರುವಾರವೂ ರಾಜ್ಯಸಭೆ ಯಾವುದೇ ಕಲಾಪ ನಡೆಸಲು ವಿಫಲವಾಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನಿ ಸದನ­­ದ­ಲ್ಲಿ­­­ದ್ದರೂ, ದೇಶದಲ್ಲಿನ ಕೋಮು ಗಲಭೆ­­ಗಳ ಮೇಲೆ ಚರ್ಚಿ­ಸ­ಬೇಕಾದ ವಿಧಾನದ   ಬಗ್ಗೆ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ವಾಗ್ವಾದ ನಡೆದು, ಕಲಾಪದ ಸಮಯ­ವನ್ನು ನುಂಗಿಹಾಕಿತು.

ಸಭಾ ನಾಯಕರಾದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಾತ­ನಾಡಿ, ಮತಾಂ­ತರ ಬಗ್ಗೆ ಸರ್ಕಾರ ತಕ್ಷಣದ ಚರ್ಚೆಗೆ ಸಿದ್ಧವಿದ್ದು, ಆದರೆ ಸರ್ಕಾ­ರದ ಕಡೆಯಿಂದ ಯಾರು ಉತ್ತ­ರಿ­ಸ­ಬೇಕೆಂದು ಪ್ರತಿಪಕ್ಷಗಳ ಸದಸ್ಯರು  ಷರತ್ತು ಹಾಕು­ವಂತಿಲ್ಲ ಎಂದು ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು, ಈ ಬಗ್ಗೆ ಪ್ರಧಾನಿ ಉತ್ತರಿಸುವ ಸಾಧ್ಯ­ತೆ­ಯನ್ನು ತಳ್ಳಿಹಾಕಿ, ಗೃಹ ಸಚಿ­ವರೇ ತಮ್ಮ ಇಲಾಖೆಗೆ ಸಂಬಂಧಿಸಿದ ಈ ವಿಷಯ­ದಲ್ಲಿ ಉತ್ತರ ನೀಡಲಿದ್ದಾರೆ ಎಂದರು.

ಸಿಪಿಎಂನ ಸೀತಾರಾಂ ಯೆಚೂರಿ, ಕಾಂಗ್ರೆ­ಸ್‌ನ ಆನಂದ ಶರ್ಮಾ, ಜೆಡಿ­ಯುನ ಕೆ.ಸಿ. ತ್ಯಾಗಿ ಮತ್ತಿತರರು ಪ್ರಧಾನಿ ಉತ್ತರಕ್ಕೆ ಪಟ್ಟು ಹಿಡಿದರು. ಕಾಂಗ್ರೆಸ್‌ನ ಪಿ. ರಾಜೀವ್‌ ನಿಲುವಳಿ ಮಂಡಿಸಿದರು. ಸಂಸದೀಯ ವ್ಯವಹಾರ ರಾಜ್ಯ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು, ವಿರೋಧಿ ಸದಸ್ಯರು ಚರ್ಚೆ ಆರಂಭಿ­ಸಿ­ದರೆ ಸರ್ಕಾರ ಉತ್ತರಿಸಲಿದ್ದು, ಆದರೆ ಒತ್ತಡ ಹೇರಬಾರದೆಂದು ತಿಳಿಸಿದರು.

ಸಭಾಧ್ಯಕ್ಷರ ಪೀಠದಲ್ಲಿದ್ದ ಉಪ­ಸಭಾ­ಪತಿ ಪಿ.ಜೆ. ಕುರಿಯನ್‌ ಅವರು, ಚರ್ಚೆ ಆರಂಭಿಸಲು ಸಚಿವರು ಅಥವಾ ಪ್ರಧಾನಿ ಇರಲೇಬೇಕೆಂದು ಪ್ರತಿಪಕ್ಷಗಳು ಷರತ್ತು ವಿಧಿಸುವಂತಿಲ್ಲ ಮತ್ತು ಉತ್ತ­ರಿ­ಸಲು ಸಚಿ­ವರೇ ಸಾಕು ಹಾಗೂ ಚರ್ಚೆ ಆರಂಭಿಸಿದ ನಂತರ ಪ್ರಧಾನಿ ಹಾಜರಿಗೆ ಕೇಳಬಹುದು ಎಂದು ಸ್ಪಷ್ಟಪಡಿಸಿದರು.

ಹಿಂದೂ ಧರ್ಮಕ್ಕೆ ವಾಪಸ್‌
ಪಟ್ನಾ(ಐಎಎನ್‌ಎಸ್‌): ಬಿಹಾರದ ಗ್ರಾಮಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 12 ಜನರಲ್ಲಿ ಮೂವರು ಸಾಮಾಜಿಕ ಬಹಿ­ಷ್ಕಾರಕ್ಕೆ ಹೆದರಿ ಹಿಂದೂ ಧರ್ಮಕ್ಕೆ ವಾಪಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT