ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗಾಗಿ ಇಸ್ಲಾಂಗೆ ಮತಾಂತರ ಅಸಿಂಧು: ಹೈಕೋರ್ಟ್‌

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಲಹಾಬಾದ್‌ (ಪಿಟಿಐ): ಇಸ್ಲಾಂನಲ್ಲಿ ನಂಬಿಕೆ ಇಲ್ಲದಿದ್ದರೂ ಆ ಸಮು­ದಾಯದ ಯುವಕರನ್ನು ಮದುವೆಯಾಗುವ ಒಂದೇ ಉದ್ದೇಶ­ದಿಂದ ಯುವತಿಯರು ಇಸ್ಲಾಂಗೆ ಮತಾಂತರವಾದರೆ ಅಂತಹ ಮತಾಂತರ ಅಸಿಂಧು ಎಂದು ಇಲ್ಲಿನ ಹೈಕೋರ್ಟ್‌ ಮಹತ್ವದ  ಆದೇಶ ನೀಡಿದೆ.

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಐದು ಜೋಡಿಗಳು ತಮ್ಮ ದಾಂಪತ್ಯಕ್ಕೆ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ ನ್ಯಾಯಮೂರ್ತಿ ಸೂರ್ಯ ಪ್ರಕಾಶ್‌ ಕೆಸರಿವಾನಿ ಈ ಆದೇಶ ನೀಡಿದರು.

ಈ ಐದು ಜೋಡಿಗಳಲ್ಲಿ ಯುವ­ಕರು ಮುಸ್ಲಿಮರಾಗಿದ್ದು, ಯುವತಿ­ಯರು ಹಿಂದೂ ಧರ್ಮಕ್ಕೆ ಸೇರಿದ­ವರು. ಆದರೆ   ಮದುವೆಯಾಗು­ವುದ­ಕ್ಕಾಗಿ ಈ ಯುವತಿ­ಯರು ಇಸ್ಲಾಂಗೆ ಮತಾಂತರ ಹೊಂದಿ­ದ್ದಾರೆ. ಇಂತಹ ಮದುವೆ ಕುರಾನ್‌ಗೂ ವಿರುದ್ಧವಾದುದು ಎಂದೂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT