ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಹಣ ದತ್ತಿಗೆ

ಸರಳ ವಿವಾಹ
Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸರಳ ವಿವಾಹಕ್ಕೆ ಎರಡೂ ಕಡೆಯವರೂ ಒಪ್ಪಬೇಕು. ಇಲ್ಲವಾದರೆ ನಮ್ಮ ಹಾಗೆ ಏನಾದರೊಂದು ದಾರಿ ಹುಡುಕಬೇಕು.

ನನ್ನ ಮಗನ ಮದುವೆ ಗೊತ್ತಾಗಿ ಹೆಣ್ಣಿನ ಕಡೆಯವರು ಮಾತುಕತೆಗೆ ಬಂದರು. ಒಂದು ಲಿಸ್ಟ್  ಕೊಟ್ಟರು ಬಿಡಿಸಿ ನೋಡಿದರೆ ವಧು–ವರನಿಗೆ ಹಾಕುವ ಒಡವೆಗಳು ಎಂದಿತ್ತು. ತಕ್ಷಣ ಮಡಿಸಿ ಅವರ ಕೈಗೆ ಕೊಟ್ಟು ಹೇಳಿದೆ. ‘ನಿಮ್ಮ ಮಗಳಿಗೆ ಬೇಕಾದರೆ ಒಡವೆ  ಹಾಕಿ ಆದರೆ ನನ್ನ ಮಗನಿಗೆ ಒಡವೆ, ವರದಕ್ಷಿಣೆ ಏನೂ ಬೇಡ.

ಮದುವೆಗೆ ಹೊಸ ಬಟ್ಟೆ ಅವನೇ ಖರೀದಿಸುತ್ತಾನೆ, ಮದುವೆ ಸರಳವಾಗಿ ದೇವಸ್ಥಾನದಲ್ಲಿ ಮಾಡಿಕೊಡಿ’ ಎಂದೆವು ಅವರು ನಮ್ಮ ಸಂಸಾರದಲ್ಲಿ ಇದೇ ಮೊದಲ ಮದುವೆ. ಹಾಗಾಗಿ ಛತ್ರದಲ್ಲಿ ಚೆನ್ನಾಗಿ ಮಾಡಿಕೊಡಬೇಕೆಂಬಾಸೆ ಇದೆ ಎಂದರು. ಇನ್ನೊಬ್ಬರ ಮನಸ್ಸನ್ನು ನೋಯಿಸಲು ಇಷ್ಟಪಡದ ನಮ್ಮ ಯಜಮಾನರು ಹಾಗೇ ಆಗಲಿ ಆದರೆ ಆಡಂಬರದ ಛತ್ರ ಬೇಡ ಎಂದರು. ಕೆಲವು ನಿಬಂಧನೆಗಳನ್ನು ಹಾಕಿದೆವು.

ಮುಂಬಾಗಿಲಿನಲ್ಲಿ ವಧು–ವರರ ಹೆಸರುಗಳು ಇರಲಿ, ಆದರೆ ಅದು ಸರಳವಾಗಿರಲಿ, ಲಗ್ನ ಮಂಟಪಕ್ಕೂ ಹೂವಿನ ಅತಿಯಾದ ಅಲಂಕಾರ ಬೇಡ. ಆರತಕ್ಷತೆ ಬೇಡ ಎಂದೆವು. ಅವರು ನಮ್ಮ ಕಡೆಯವರಿಗೆ ಬೇಕು ಎಂದರು. ಅದಕ್ಕಾಗಿ ನಾವೇ ಲಗ್ನಪತ್ರಿಕೆ ಪ್ರತ್ಯೇಕ ಮುದ್ರಿಸಿ ಆರತಕ್ಷತೆ ಕೈಬಿಟ್ಟೆವು. ಮತ್ತು ಉಡುಗೊರೆಗಳನ್ನು ಕೊಡಬೇಡಿರೆಂದು ಹಾಕಿಸಿದೆವು. ನಮಗೆ ವಿಡಿಯೊ, ಫೋಟೊ ಆಲ್ಬಂ ಯಾವುದೂ ಬೇಡ ಎಂದೆವು. ನಿಮಗೆ ಬೇಡದಿದ್ದರೆ ನಮಗೆ ಬೇಕು ಎಂದರು. ಹಾಗಾದರೆ ಒಂದೇ ಕಾಪಿ ಮಾಡಿಸಿಕೊಳ್ಳಿ, ನಮಗೆ ಅದ್ಯಾವುದೂ ಬೇಡ ಎಂದೆವು.

ಇದನ್ನೆಲ್ಲಾ ಕೇಳಿದ ನಮ್ಮ ಬಂಧುಗಳು ತುಂಬ ಆಕ್ಷೇಪಣೆ ಮಾಡಿದ್ದರಿಂದ ನನ್ನ ಮತ್ತು ನನ್ನ ಮಗಳ ಸೀರೆಗಳಿಗಾಗಿ ಏಳುಸಾವಿರ ತೆಗೆದುಕೊಂಡೆವು. ಬಿಡದಿ ಮನೆಯಲ್ಲಿ ದೇವರ ಫೋಟೊ ಬಿಟ್ಟು ಏನನ್ನು ನಿಮ್ಮ ಮಗಳಿಗೆ ಕೊಡಬೇಡಿ ಎಂದೆವು.

ಇನ್ನು ನನ್ನ ಮಗಳ ಮದುವೆ. ಪ್ಲಾಸ್ಟಿಕ್‌ ಅನ್ನು ಆದಷ್ಟು ಕಮ್ಮಿ ಉಪಯೋಗಿಸಬೇಕೆಂದು ಗೋಣಿತಾಟಿನಲ್ಲಿ ನಮ್ಮದೇ ವಿನ್ಯಾಸದಲ್ಲೂ ತಾಂಬೂಲಕ್ಕೆ ಚೀಲ ತಯಾರಿಸಿದೆವು ಮದುವೆಯಲ್ಲಿ ಊಟಕ್ಕೆ ಪ್ಲಾಸ್ಟಿಕ್‌ ಲೋಟಗಳಿಗೆ ಬದಲಾಗಿ ಕಾಗದದ ಲೋಟಗಳನ್ನು ತರಬೇಕೆಂದು ತಾಕೀತು ಮಾಡಿದೆವು ನಮ್ಮ ಕಡೆಯ ಲಗ್ನಪತ್ರಿಕೆ ಪ್ರತ್ಯೇಕ ಅಚ್ಚುಹಾಕಿಸಿ ಉಡುಗೊರೆ ಹೂ ಗುಚ್ಛಗಳನ್ನು ಕೊಡಬಾರದೆಂದು ವಿನಂತಿಸಿಕೊಂಡೆವು.

ಗಂಡಿನ ಕಡೆಯವರ ಸಮಾಧಾನಕ್ಕೆ ಎಷ್ಟು ಬೇಕೋ ಅಷ್ಟು ಹೂವಿನ ಅಲಂಕಾರ ವಿಡಿಯೊ, ಫೋಟೊಗಳಿಗೆ ಏರ್ಪಾಟು ಮಾಡಿ ಸಿ.ಡಿ. ಫೋಟೊಗಳನ್ನು ಅವರಿಗೆ ಮಾತ್ರ ಕೊಟ್ಟೆವು.
ಈ ಎರಡೂ ಮದುವೆಗಳಲ್ಲಿ ಬಂದವರಿಗೆ ಯಾವ ಉಡುಗೊರೆಗಳನ್ನು ಕೊಡಲಿಲ್ಲ. ಉಡುಗೊರೆ ಕೊಡಬೇಡಿ ಎಂದು ಅಚ್ಚು ಹಾಕಿಸಿದರೂ ಎಷ್ಟೋ ಜನ ಕೊಟ್ಟರು. ಆ ಹಣವನ್ನು ಒಂದು ದತ್ತಿಗೆ ದಾನವಾಗಿ ಕೊಟ್ಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT