ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದಲ್ಲಿ ಮತಾಂತರ: ಬಂಧನ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ರತ್‌ಲಾಮ್‌ (ಮಧ್ಯಪ್ರದೇಶ), (ಪಿಟಿಐ): ಉದ್ಯೋಗ ಹಾಗೂ ಉಚಿತ ವೈದ್ಯ­ಕೀಯ ಚಿಕಿತ್ಸೆಯ ಆಮಿಷವೊಡ್ಡಿ  ಬುಡ­ಕಟ್ಟು ಸಮು­ದಾಯದವರನ್ನು ಕ್ರೈಸ್ತ­­ಧರ್ಮಕ್ಕೆ ಮತಾಂತರ ಮಾಡಿದ ಆರೋಪದಲ್ಲಿ ಪೊಲೀಸರು ವ್ಯಕ್ತಿ­ಯೊಬ್ಬ­ನನ್ನು ವಶಕ್ಕೆ ತೆಗೆದು­ಕೊಂಡು ಪ್ರಕರಣ ದಾಖಲಿಸಿ­ಕೊಂಡಿ­ದ್ದಾರೆ.

ರತ್‌ಲಾಮ್‌  ಕ್ರೈಸ್ತ ಮಂಡಳಿ ಕಾರ್ಯ­ದರ್ಶಿ ಜೋಸ್‌ ಮ್ಯಾಥ್ಯೂ ಹಾಗೂ ಇನ್ನಿತರರ ವಿರುದ್ಧ ಎರಡು ದಿನಗಳ ಹಿಂದೆ ಪ್ರಕರಣ ದಾಖಲಿ­ಸಲಾ­ಗಿದೆ. ಮ್ಯಾಥ್ಯೂ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಠಾಣಾ­ಧಿ­ಕಾರಿ ರಾಜೇಶ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.
ಬೆಂಬಲ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಉತ್ತರ­ಪ್ರದೇಶ ರಾಜ್ಯಪಾಲ ರಾಮ್‌ ನಾಯ್ಕ್‌ ಮುಂದಿ­ಟ್ಟಿರುವ ಬೇಡಿಕೆಯನ್ನು ಸೇನಾ ಸಮರ್ಥಿಸಿದೆ.

ಮತಗಳಿಕೆ ರಾಜಕೀಯ: ಬಿಜೆಪಿ ಜಯಗಳಿಸಿ­ರುವು­ದಕ್ಕೆ ಚಿಂತೆಗೀ­ಡಾಗಿ­ರುವ ರಾಜಕೀಯ ಶಕ್ತಿಗಳು ಮತಾಂತರ ವಿಷಯವನ್ನು ಮತ ಗಳಿಕೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಚಿವ  ನಿತಿನ್‌್ ಗಡ್ಕರಿ ಆರೋಪಿಸಿದ್ದಾರೆ.

ಪಿಎಂಕೆ ತರಾಟೆ: ಮರುಮತಾಂತರ ವಿಷಯ­ವಾಗಿ ಹಿಂದೂಪರ ಸಂಘಟನೆ­ಗಳನ್ನು ತರಾಟೆಗೆ ತೆಗೆದುಕೊಂಡಿರುವ ಎನ್‌ಡಿಎ ಅಂಗಪಕ್ಷ ಪಿಎಂಕೆ, ‘ದೇಶದ ಆರ್ಥಿಕ ಅಭಿವೃದ್ಧಿಗೆ ಕೆಲಸ ಮಾಡು­ವು­ದ­ಕ್ಕಾಗಿ ಜನ ಬಿಜೆಪಿಯನ್ನು ಗೆಲ್ಲಿಸಿ­ದ್ದಾ­ರೆಯೇ ಹೊರತೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಕ್ಕಲ್ಲ’ ಎಂದಿದೆ.

ತಪ್ಪೇನಿಲ್ಲ: ಸೇನಾ
ಮುಂಬೈ : ಮರು ಮತಾಂತರ­ದಲ್ಲಿ ಯಾವ ತಪ್ಪೂ ಇಲ್ಲ ಎಂದಿರುವ ಶಿವಸೇನಾ, ಹಿಂದು­ಗಳು ಇಸ್ಲಾಂ ಧರ್ಮಕ್ಕೆ ಮತಾಂತರ­ವಾ­ದಾಗ ಸುಮ್ಮನಿದ್ದವರನ್ನು ತರಾಟೆಗೆ ತೆಗೆದು­ಕೊಂಡಿದೆ. ‘ನಿನ್ನೆಯವರೆಗೂ ಹಿಂದು­ಗಳು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇವ­ರನ್ನೆಲ್ಲ ಆಮಿಷವೊಡ್ಡಿ ಅಥವಾ ಬಲ­ವಂತ­ದಿಂದ ಮತಾಂತರ ಮಾಡ­ಲಾಗಿದೆ ಎಂದು ಯಾರೂ ಹೇಳಿಲ್ಲ. ಆದರೆ ಈಗ ಹುಸಿ ಜಾತ್ಯ­ತೀ­ತ­ವಾ­ದಿಗಳು ಈ ಮತಾಂತರ ಸರಿಯಲ್ಲ ಎನ್ನುತ್ತಿದ್ದಾರೆ’ ಎಂದು ಸೇನಾ ‘ಸಾಮ್ನಾ’ದ ಸಂಪಾದಕೀಯದಲ್ಲಿ  ಟೀಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT