ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್‌ ನಿವಾಸದಲ್ಲಿ ಹಕ್ಕಿಗಳ ಚಿಲಿಪಿಲಿ

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿರ್ಗಮಿತ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ವಿಳಾಸ ಸೋಮವಾರದಿಂದ ಬದಲಾಗಲಿದೆ. 

ದಶಕಗಳ ಕಾಲ  ವಾಸವಾಗಿದ್ದ ಇಲ್ಲಿಯ 7, ರೇಸ್‌ಕೋರ್ಸ್‌ ರಸ್ತೆಯ ಪ್ರಧಾನಿ ಅಧಿಕೃತ ನಿವಾಸಕ್ಕೆ   ಸೋಮವಾರ ವಿದಾಯ ಹೇಳಲಿರುವ ಅವರು, ಮೋತಿಲಾಲ್‌ ನೆಹರೂ ಪ್ಲೇಸ್‌ನ 3ನೇ ನಂಬರ್‌ ಬಂಗಲೆಗೆ ವಾಸ್ತವ್ಯ ಬದಲಿಸಲಿದ್ದಾರೆ.

ಸಿಂಗ್‌ ಕುಟುಂಬ ತಂಗಲಿರುವ ಹೊಸ ಬಂಗಲೆ ಸುತ್ತಮುತ್ತ ಕಣ್ಣು ಹಾಯಿಸಿದಷ್ಟೂ ಹಸಿರಾದ ಮರಗಳು ಮತ್ತು ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಬರುತ್ತದೆ. 

ಬಂಗಲೆ ಆವರಣದಲ್ಲಿರುವ ವಿವಿಧ ಜಾತಿ, ಪ್ರಭೇದದ ಸುಮಾರು 40ಕ್ಕೂ ಹೆಚ್ಚು ದೈತ್ಯಾಕಾರದ ಹಳೆಯ ಮರಗಳು ನೂರಾರು ಬಗೆಯ ಪಕ್ಷಿಗಳಿಗೆ ಆಶ್ರಯ ನೀಡಿವೆ.  200ಕ್ಕೂ ಹೆಚ್ಚು ಬಾವಲಿಗಳಿಗೆ ಈ ಮರಗಳು ಆಶ್ರಯ ತಾಣವಾಗಿವೆ. ಬಾವಲಿಗಳ ಹೊರತಾಗಿ ಮೈನಾ, ಕೋಗಿಲೆ, ಗಿಳಿಗಳ ಹಿಂಡು, ಬುಲ್‌ಬುಲ್‌, ಗೂಬೆಗಳು ಇಲ್ಲಿ ಹೇರಳವಾಗಿವೆ. ತಾವರೆ ಕೊಳ ಮತ್ತು ಹಸಿರು ಹುಲ್ಲಿನ ಹಾಸು ಬಂಗಲೆಗೆ ಮೆರಗು ನೀಡಿವೆ. ಪರಿಸರಕ್ಕೆ ಧಕ್ಕೆಯಾಗದಂತೆ ಬಂಗಲೆ  ನವೀಕರಣ ಮಾಡಲಾಗಿದೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಕೂಡ ಇದೇ ಬಂಗಲೆಯಲ್ಲಿ ವಾಸವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT