ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸಕ್ಕೆ ಮಾಸಿಕ ₹9360 ವೇತನ

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದ ಮನೆಗೆಲಸ ಮಾಡುವವರಿಗೆ ತಿಂಗಳಿಗೆ ₹ 9360 ಕನಿಷ್ಠ ವೇತನ ನಿಗದಿ ಪಡಿಸಿ ಕಾರ್ಮಿಕ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

ಇದರ ಪ್ರಕಾರ ಕನಿಷ್ಠ ವೇತನ, ಬೆಂಗಳೂರು ಸೇರಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ₹10,270, ಜಿಲ್ಲಾ ಕೇಂದ್ರಗಳಲ್ಲಿ ₹10,010 ಆಗಲಿದೆ. ತಿಂಗಳಿಗೆ 4 ದಿನ ವಾರದ ರಜೆ ನೀಡಬೇಕು ಎಂದೂ ಸೂಚಿಸಲಾಗಿದೆ.

ಕೌಶಲ ರಹಿತ ಕೆಳದರ್ಜೆ ಕಾರ್ಮಿಕರ ಕನಿಷ್ಠ ವೇತನವನ್ನು ₹10,520 ಕ್ಕೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಹೋಟೆಲ್‌, ಮನೆಕೆಲಸ, ಆಹಾರ ಸಂಸ್ಕರಣೆ, ಲಾಂಡ್ರಿ, ಲಘು ಸಿಮೆಂಟ್‌ ಉದ್ದಿಮೆ, ಎಲೆಕ್ಟ್ರಾನಿಕ್ಸ್, ಮದ್ಯ ತಯಾರಿಕೆ ಸೇರಿದಂತೆ 23 ವಿವಿಧ ಉದ್ದಿಮೆಗಳ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲಾಗಿದೆ. ಇದುವರೆಗೂ 74 ಅನುಸೂಚಿತ ಉದ್ದಿಮೆಗಳ ನೌಕರರಿಗೆ  ವೇತನ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT