ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳ ದಿಬ್ಬದಲ್ಲಿ ಮೂಡಿದ ಚುನಾವಣಾ ಜಾಗೃತಿ...

Last Updated 18 ಏಪ್ರಿಲ್ 2014, 10:15 IST
ಅಕ್ಷರ ಗಾತ್ರ

ಮಂಗಳೂರು: ಪಡುವಣ ಬಾನಂಗ ಳದಲ್ಲಿ ಚಿನ್ನದ ಬಣ್ಣದಲ್ಲಿ ಕಂಗೊಳಿ ಸುತ್ತಿದ್ದ ನೇಸರ ಮೋಡದ ಎಡೆಯಲ್ಲಿ ಮರೆಯಾಗಲು ಹವಣಿಸುತ್ತಿದ್ದಂತೆ ಗಡ ಗಡ ಸದ್ದು ಮಾಡುತ್ತಾ ಹೆಲಿಕಾಪ್ಟರ್‌ ಒಂದು ಹಾರಾಡುತ್ತಾ ಬಂತು. ಒಂದಷ್ಟು ಕರಪತ್ರಗಳನ್ನು ತೂರಿ 4 ಬಾರಿ ಅತ್ತಿಂದಿತ್ತ ಹಾರಾಡಿತು....

ಕಡಲ ತಡಿಯಲ್ಲಿ ಸಂಧ್ಯಾಕಾಲದಲ್ಲಿ ವಿಹರಿಸಲು ಬಂದವರೆಲ್ಲ ಅರೆಕ್ಷಣ ಮೇಲೆ ನೋಡಿದರು. ಹೋ ಎಂದು ಕೂಗಿದ ಕೆಲ ಮಂದಿ ಮತ್ತೆ ಅತ್ತಿಂದಿತ್ತ ಸುಳಿದಾಡಿದರು. ಮತ್ತೆ ಅದೇ ಸ್ಥಳದಲ್ಲಿ ಬೀದಿ ನಾಟಕದ ಮೂಲಕ ಪ್ರಜಾಪ್ರಭು ತ್ವದ ಮಹತ್ವದ ಬಗೆಗಿನ ಜಾಗೃತಿ...
ಇದು ಜಿಲ್ಲಾಡಳಿತ ಪಣಂಬೂರು ಸಮುದ್ರ ತೀರದಲ್ಲಿ ಭಾನುವಾರ ಇಳಿಹಗಲು ಹಮ್ಮಿಕೊಂಡಿದ್ದ ಮತದಾರ ಜಾಗೃತಿ ಕಾರ್ಯಕ್ರಮದಲ್ಲಿ ಕಂಡು ಬಂದ ಕ್ಷಣ...

ಜಿಲ್ಲೆಯಲ್ಲಿ ಮತದಾನದ ಶೇಕಡಾ ವಾರು ಪ್ರಮಾಣವನ್ನು ಗಣನೀಯ ವಾಗಿ ಹೆಚ್ಚಿಸಬೇಕು ಎಂಬ ಉದ್ದೇಶ ದಿಂದ ವಾರದ ರಜೆಯ ದಿನ ಸಂಜೆ ಎಲ್ಲರೂ ಸೇರುವ ಹೊತ್ತು ನಾವೂ ಮತದಾನದ ಜಾಗೃತಿಯ ಸಂದೇಶ ಹೊತ್ತು ಕ್ಷಣ ಹೊತ್ತು ಅವರಲ್ಲಿ ಅರಿವು ಮೂಡಿಸೋಣ ಎಂಬ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ, ‘ಸ್ವೀಪ್‌’ ಮುಖ್ಯಸ್ಥೆ ತುಳಸಿ ಮದ್ದಿನೇನಿ, ಎಸ್‌ಪಿ ಶರಣಪ್ಪ, ಪಾಲಿಕೆ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಎಸ್‌., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವ ಪ್ರಕಾಶ್‌ ಮೊದಲಾದವರು ಸಮುದ್ರ ತೀರಕ್ಕೆ ಬಂದಿದ್ದವರ ಗಮನ ಸೆಳೆದರು.

ಮತದಾನ ಜಾಗೃತಿಗಾಗಿ 750 ಮೀಟರ್‌ ಓಟದ ಸ್ಪರ್ಧೆ ಏರ್ಪಡಿಸ ಲಾಗಿತ್ತು. ಎಲ್ಲ ಅಧಿಕಾರಿಗಳು ಸ್ವತಃ ಓಡಿ ಅಲ್ಲಿದ್ದವರನ್ನು ಹುರಿದುಂಬಿ ಸಿದರು. ಸ್ಪರ್ಧೆ ಗೆದ್ದವರಿಗೆ ಬಹುಮಾನ ಗಳನ್ನೂ ನೀಡಲಾಯಿತು. ಸ್ಪರ್ಧೆಯ ವಿವರಗಳನ್ನು, ಕಾರ್ಯಕ್ರ ಮದ ವಿವರಗಳನ್ನು ಕುದುರೆಗಾಡಿ ಯಲ್ಲಿ  ಇಟ್ಟಿದ್ದ ಧ್ವನಿವರ್ಧಕದ ಮೂಲಕ ನೀಡಲಾಗುತ್ತಿತ್ತು.

ಸಂಸತ್‌ನ ಮರಳ ಶಿಲ್ಪದ ಮೂಲಕ ಅದರ ಮಹತ್ವ ಸಾರುವ ಶಿಲ್ಪ ಒಂದೆಡೆ ಜನರ ಮನ ಸೆಳೆಯುತ್ತಿದ್ದರೆ ಮತ್ತೊಂದೆಡೆ ಯಾವ ಅಭ್ಯರ್ಥಿಗೆ ಮತ ನೀಡೋಣ ಎಂದು ಯೋಚನೆ ಮಾಡುತ್ತಿರುವ ವ್ಯಕ್ತಿಯ ಶಿಲ್ಪವೂ ಅರೆ ಕ್ಷಣ ಗಮನ ಸೆಳೆಯಿತು. ಬೀದಿ ನಾಟಕ ಕಲಾ ಜಾಥಾ ತಂಡದ ವರು ಜಾಗೃತ ಮತದಾರ ಪ್ರಜಾ ಪ್ರಭುತ್ವದ ನೇತಾರ, ಬನ್ನಿ ಬನ್ನಿ ಮತ ನೀಡಬನ್ನಿ, ನಿಮ್ಮ ಮತವನ್ನು ಚಲಾವಣೆಗೆ ತನ್ನಿ ಎಂಬ ಘೋಷಣೆ ಗಳೊಂದಿಗೆ ಬೀದಿ ನಾಟಕ ಪ್ರಸ್ತುತ ಪಡಿಸಿದರು.

ಆ ವೇಳೆಗೆ ಬಾನಂಗಳದಲ್ಲಿ ಹಾರಾಡಿದ ಹೆಲಿಕಾಪ್ಟರ್‌ ಮತದಾನ ಜಾಗೃತಿಯ ಕರಪತ್ರಗಳನ್ನು ತೂರುತ್ತಾ 4 ಬಾರಿ ಹಾರಾಡಿತು. ಆದರೆ ಕರಪತ್ರಗಳು ಗಾಳಿಯಲ್ಲೇ ಹಾರಾಡುತ್ತಾ ಕಡಲ ಬದಿಯಲ್ಲಿ ಬೀಳದೆ ಮರೆಯಾದವು. ಚುನಾವಣಾ ಖರ್ಚು ವೆಚ್ಚದ ನೋಡಲ್‌ ಅಧಿಕಾರಿ ಅಜಿತ್ ಕುಮಾರ್‌ ಹೆಗ್ಡೆ ಶಾನಾಡಿ ಮಾತನಾಡಿ, ಕಳೆದ ಬಾರಿ ಮತದಾನ ಮಾಡದೆ ಇದ್ದವರ ಪಟ್ಟಿ ತಯಾರಿಸಿ ಅಂತವರ ಮನೆಗೆ ತೆರಳಿ ಸಮೀಕ್ಷೆ ನಡೆಸಿದ ಜಿಲ್ಲಾಡಳಿತಕ್ಕೆ ಕುತೂಹಲಕಾರಿ ಅಂಶಗಳು ತಿಳಿದುಬಂದಿದೆ.

ತುರ್ತು ಕಾರ್ಯನಿಮಿತ್ತ ಕೆಲವರು ಮತದಾನ ಮಾಡದೆ ಇದ್ದರೆ ಮತ್ತೆ ಕೆಲವರಿಗೆ ಸಮಯದ ಅಭಾವ ಇತ್ತು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕೆಲವರಿಗೆ ಆರೋಗ್ಯ, ವಾಹನದ ಸಮಸ್ಯೆ ಮತ್ತು ಜಾಗೃತಿಯ ಕೊರತೆ ಯೂ ಆ ವೇಳೆ ಕಂಡು ಬಂದಿದೆ. ಇಂತಹ ಕಾರಣಗಳನ್ನು ಮುಂದೊಡ್ಡದೆ ಅರ್ಧ ಗಂಟೆಯನ್ನು ಮೀಸಲಿಟ್ಟು ಮತ ಚಲಾಯಿಸುವಂತೆ ಮನವಿ ಮಾಡಿ ದ್ದೇವೆ ಎಂದು ತಿಳಿಸಿದರು.
ಸಂಜೆಯ ವೇಳೆಯನ್ನು ಕಳೆಯ ಬಂದ ಕೆಲವರಿಗೆ ಕಡಲ ತಡಿ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವರಲ್ಲಿ ಜಾಗೃತಿಯನ್ನೂ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT