ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಗ್ರಾಮಸ್ಥರ ಪ್ರಾರ್ಥನೆ

Last Updated 18 ಸೆಪ್ಟೆಂಬರ್ 2014, 5:13 IST
ಅಕ್ಷರ ಗಾತ್ರ

ಮಾಲೂರು :  ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ತಾಲ್ಲೂಕಿನ ಲಕ್ಕೂರು ಗ್ರಾಮಸ್ಥರು ಮಂಗಳ­ವಾರ ರಾತ್ರಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೃಷಿ ಚಟುವಟಿಕೆ, ಜಾನುವಾರುಗಳಿಗೆ ನೀರು ಸಿಗದೆ ತೊಂದರೆಯಾಗಿದೆ. ಹಾಗಾಗಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು ಎಂದು ಗ್ರಾಮ­ಸ್ಥರು ಹೇಳಿದರು.

ತಾಲ್ಲೂಕಿನ 50 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್, ಸ್ಥಳೀಯ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡ­ಲಾಗುತ್ತಿದೆ.

1500 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಇಲ್ಲಿನ ಜನರು ಪ್ಲೋರೈಡ್‌ಯುಕ್ತ ನೀರು ಸೇವಿಸುತ್ತಿರುವುದರಿಂದ ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.  ರಾಗಿ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆ­ಯಾಗು­ತ್ತಿದೆ. ಆರಂಭದಲ್ಲಿ ಉತ್ತಮ ಮಳೆ ಬೀಳುವ ಮುನ್ಸೂ­ಚನೆ ಇತ್ತು ನಂತರ ಮಳೆಯಿಲ್ಲದೆ  ರಾಗಿ ಬಿತ್ತನೆ ಸಮರ್ಪಕವಾಗಿ ನಡೆದಿಲ್ಲ.

ಈಗಾ­ಗಲೇ ಬಿತ್ತನೆ ಮಾಡಿ­ರುವ ರೈತರು ಮಳೆಗಾಗಿ ಎದುರು ನೋಡು­ತ್ತಿದ್ದಾರೆ. ಬಿಸಿ­ಲಿನ ತಾಪಮಾನ ಹೆಚ್ಚಾಗಿದೆ. ಸ್ವಲ್ಪ ಚಿಗುರಿರುವ ರಾಗಿ ಪೈರು ಒಣಗುತ್ತಿದೆ. ಈ ನಿಟ್ಟಿನಲ್ಲಿ ಮಳೆ­ರಾಯ­ನನ್ನು ಹೊತ್ತು ವರಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT