ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ 13 ರೈತರ ಆತ್ಮಹತ್ಯೆ

Last Updated 19 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಔರಂಗಾಬಾದ್‌, ಮಹಾರಾಷ್ಟ್ರ  (ಪಿಟಿಐ): ಆಲಿಕಲ್ಲು ಮಳೆಯಿಂದ ಆದ ಬೆಳೆಹಾನಿಗೆ ಬೇಸತ್ತು ಮರಾಠವಾಡ ಪ್ರಾಂತ್ಯದಲ್ಲಿ ಮತ್ತಿಬ್ಬರು ರೈತರು ಆತ್ಮ­ಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಹಾನಿಗೆ ಬೇಸತ್ತು ವಾರವೊಂದ­ರಲ್ಲಿಯೇ ಇಲ್ಲಿ ಆತ್ಮಹತ್ಯೆ ಮಾಡಿಕೊಂಡ­ವರ ಸಂಖ್ಯೆ 13ಕ್ಕೆ ಏರಿದೆ.

ಪರ್ಭನಿ ಜಿಲ್ಲೆಯ ನಂದಗಾಂವ್‌್ ಬದ್ರುಕ್‌ನ 45 ವರ್ಷದ ರೈತ ನಾರಾ­ಯಣ ಕಾಳೆ ದುಢ್ನಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ₨25,000 ಸಾಲ ಮಾಡಿದ್ದರು. ಆದರೆ, ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೀಡ್‌ ಜಿಲ್ಲೆಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಾಠ­ವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ  ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆನಾಶವಾಗಿದೆ.

ಔರಂಗಾಬಾದ್‌, ಬೀಡ್‌, ಉಸ್ಮಾನಾ­­ಬಾದ್‌ ಹಾಗೂ ಹಿಂಗೋಲಿಯಲ್ಲಿ ಒಟ್ಟು 11 ರೈತರು ಆತ್ಮಹತ್ಯೆ ಮಾಡಿ­ಕೊಂಡಿದ್ದರು.

ಗರಿಷ್ಠ ಪರಿಹಾರದ ಭರವಸೆ
ಮುಂಬೈ ವರದಿ: ಆಲಿಕಲ್ಲು ಮಳೆ­ಯಿಂದ ಆಗಿರುವ ಬೆಳೆ ನಷ್ಟಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದ್ದ­ರಿಂದ ರೈತರು ಹತಾಶರಾಗಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಮನವಿ ಮಾಡಿದ್ದಾರೆ.

ಆಲಿಕಲ್ಲು ಮಳೆಯಿಂದ ಬೆಳೆ ಹಾನಿ­ಯಾಗಿದ್ದರಿಂದ ಮೂವರು ರೈತರು ಆತ್ಮ­ಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚವಾಣ್‌ ರೈತರಲ್ಲಿ ಈ ಮನವಿ ಮಾಡಿ­ಕೊಂಡಿದ್ದಾರೆ.

ರೈತರಿಗೆ ಆಗಿರುವ ಅಪಾರ ಹಾನಿಯ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸ­ಲಾಗಿದೆ ಹಾಗೂ ಐದು ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್‌ ಸಿದ್ಧಪಡಿಸಿ ಕೇಂದ್ರದ ನೆರವು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್‌ಗೆ ರೈತರ ಮೊರೆ
ಮುಂಬೈ ವರದಿ: ಇತ್ತೀಚಿನ ಆಲಿ­ಕಲ್ಲು ಮಳೆಯಿಂದಾಗಿ ಅಪಾರ ಪ್ರಮಾ­ಣದ ಬೆಳೆ ಹಾನಿ ಆಗಿರುವುದರಿಂದ 20 ಸಾವಿರ ಕೋಟಿ ರೂಪಾಯಿಗಳ ಪರಿ­ಹಾರ ನೀಡುವಂತೆ ಕೇಂದ್ರ ಮತ್ತು ಮಹಾ­ರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಇಬ್ಬರು ರೈತರು ಬಾಂಬೈ ಹೈಕೋರ್ಟ್‌ನಲ್ಲಿ ಸಾರ್ವ­ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಗೊರಖ್‌ ಆನಂದ್‌ ಘಾಡ್ಗೆ ಮತ್ತು ವಿಠಲ್ ರಾವ್‌ ಪವಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರು­ವಾರ ಮುಖ್ಯ ನ್ಯಾಯ­ಮೂರ್ತಿಗಳ ನೇತೃತ್ವದ ವಿಭಾ­ಗೀಯ ಪೀಠ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT