ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಚವಾಣ್‌ ರಾಜೀನಾಮೆ

ರಾಷ್ಟ್ರಪತಿ ಆಳ್ವಿಕೆ ಹೇರಿಕೆ?
Last Updated 27 ಸೆಪ್ಟೆಂಬರ್ 2014, 4:35 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ  ಕಾಂಗ್ರೆಸ್‌–ಎನ್‌ಸಿಪಿ ನಡುವಣ ಹದಿ­ನೈದು ವರ್ಷಗಳ ಮೈತ್ರಿ ಮುರಿದು ಬಿದ್ದ ಬೆನ್ನಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚವಾಣ್‌ ಅವರು ಶುಕ್ರವಾರ ಸಂಜೆ ರಾಜ­ಭವನಕ್ಕೆ ತೆರಳಿ ರಾಜ್ಯಪಾಲ ಸಿ.ವಿದ್ಯಾ­ಸಾಗರ್‌ ರಾವ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಚವಾಣ್‌ ಅವರಿಗೆ ಹಂಗಾಮಿ ಮುಖ್ಯ-ಮಂತ್ರಿಯಾಗಿ ಮುಂದುವರಿ-ಯು-ವುದಕ್ಕೆ ಸೂಚಿ­ಸಲಾ­ಗಿದೆಯೇ ಅಥವಾ ರಾಜ್ಯದಲ್ಲಿ ರಾಷ್ಟ್ರ­ಪತಿ ಆಳ್ವಿಕೆ ಹೇರಲಾಗು-ತ್ತದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಪಶ್ಚಿಮ ಮಹಾರಾಷ್ಟ್ರದ ಕರಾಡ್‌ ಕ್ಷೇತ್ರದಿಂದ ಚವಾಣ್‌ ಶನಿವಾರ ನಾಮ-ಪತ್ರ ಸಲ್ಲಿಸುವರು. ‘ಚವಾಣ್‌ ಎನ್‌ಸಿಪಿಯನ್ನು ಕಡೆಗಣಿ-ಸು­ತ್ತಿದ್ದಾರೆ ಹಾಗೂ ಸ್ಥಾನ ಹೊಂದಾ-ಣಿಕೆಗೆ ಸಂಬಂಧಿಸಿದ ಮಾತು­ಕತೆಗೆ ಆಸಕ್ತಿ ತೋರಿಸುತ್ತಿಲ್ಲ. ಆದ ಕಾರಣ ನಾವು ಕಾಂಗ್ರೆಸ್‌ ಸಖ್ಯ ಕಡಿದುಕೊಳ್ಳುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನೀಲ್‌ ತಟ್ಕರೆ  ಗುರುವಾರ ಹೇಳಿದ್ದರು.

೨8೮ ಸದಸ್ಯ ಬಲದ ವಿಧನಾಸಭೆ ಚುನಾ­ವಣೆಗೆ ಎರಡೂ ಪಕ್ಷಗಳು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎನ್ನುವುದು ಎನ್‌ಸಿಪಿ ಒತ್ತಾಯ­ವಾಗಿತ್ತು. ಒಂದು ವೇಳೆ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಎರಡೂ ಪಕ್ಷಗಳು ಸಮಾನ ಅವಧಿಗೆ ಹಂಚಿಕೊಳ್ಳಬೇಕು ಎಂದೂ ಅದು ಬೇಡಿಕೆ ಮುಂದಿಟ್ಟಿತ್ತು. ಆದರೆ ಕಾಂಗ್ರೆಸ್‌ ಈ ಬೇಡಿಕೆಗೆ ಸೊಪ್ಪು ಹಾಕ-ದಿದ್ದುದು ಎನ್‌ಸಿಪಿ ಅಸಮಾಧಾನಕ್ಕೆ ಕಾರಣವಾಗಿದೆ.

ಪರಸ್ಪರ ಆರೋಪ: ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದಿದ್ದೇ ತಡ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಬಿಜೆಪಿಯನ್ನು ‘ಮಹಾ­ರಾಷ್ಟ್ರದ ಶತ್ರು’ ಎಂದು ಸೇನಾ ಆರೋಪಿ­ಸಿದರೆ, ‘ಎನ್‌ಸಿಪಿ ಬಿಜೆಪಿಗೆ ಹತ್ತಿರವಾ­ಗುತ್ತಿದೆ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಪಕ್ಷದ ಮುಖ-ವಾಣಿ ‘ಸಾಮ್ನಾ’-ದಲ್ಲಿ ಬರೆದ ಸಂಪಾ-ದಕೀಯದಲ್ಲಿ ‘ಮರಾಠಿ ಪರ’ ಕಾರ್ಯ-ಸೂಚಿಗೆ ಮರಳುವ ಸೂಚನೆ-ಯನ್ನು ಸೇನಾ ನೀಡಿದೆ. ಚುನಾವಣೆ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಸೇನಾ ಸಜ್ಜಾಗುತ್ತಿದೆ. ಅಮಿತ್‌ ಷಾ ಅವರನ್ನು ಲೇವಡಿ ಮಾಡುವ ಮರಾಠಿ  ಬಿತ್ತಿಪತ್ರ­ಗಳನ್ನು ಮುಂಬೈ ಮತ್ತು ಮಹಾ-ರಾಷ್ಟ್ರದ ವಿವಿಧೆಡೆ ಅಂಟಿಸಲಾಗಿದೆ. ‘ನಾವು ಆದಿಲ್‌ ಷಾ, ನಿಜಾಮ್‌ ಷಾ ಅವರಂಥ  ದಾಳಿಕೋರರನ್ನೇ ನೋಡಿ-ದ್ದೇವೆ. ಇನ್ನು ಈ ಷಾ ಯಾವ ಲೆಕ್ಕ’ ಎಂಬ ಒಕ್ಕಣೆ ಈ ಬಿತ್ತಿಪತ್ರಗಳಲ್ಲಿ ಕಾಣಿಸುತ್ತಿದೆ.

ಕಾಂಗ್ರೆಸ್‌ ಆರೋಪ:   ಬಿಜೆಪಿಗೆ ಹತ್ತಿರವಾಗಲು ಎನ್‌ಸಿಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
‘ಈ ಬೆಳವಣಿಗೆ ನಮಗೆ ಅಚ್ಚರಿ ತಂದಿಲ್ಲ. ಒಂದೆರಡು ತಿಂಗಳಿ­ನಿಂದಲೇ ನಮಗೆ ಈ ಸೂಚನೆ ಸಿಕ್ಕಿತ್ತು. ನಾವು ಇಂತಹ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೆವು. ಎಲ್ಲ ಸ್ಥಾನಗಳಿಗೂ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡಿದ್ದೇವೆ’ ಎಂದು  ಎಐಸಿಸಿ ಮಾಧ್ಯಮ ವಿಭಾಗದ  ಅಧ್ಯಕ್ಷ ಅಜಯ್‌್ ಮಾಕನ್‌್ ಸುದ್ದಿಗಾರರ ಬಳಿ ಹೇಳಿದರು.

ಎನ್‌ಸಿಪಿ ವಿರುದ್ಧದ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ನಾವು ಎನ್‌ಸಿಪಿ ಜತೆ ಚುನಾ-ವಣೆಯ ನಂತರವೂ ಮೈತ್ರಿ ಮಾಡಿ-ಕೊಳ್ಳು-ವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.

‘ಎನ್‌ಸಿಪಿ ಜತೆ ಮೈತ್ರಿ ಪ್ರಶ್ನೆಯೇ ಬರುವುದಿಲ್ಲ. ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದೇವೆ. ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಅಸ್ತಿತ್ವ ಇರುವುದಿಲ್ಲ’ ಎಂದು ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ರಾಜೀವ್‌ ಪ್ರತಾಪ್‌ ರೂಡಿ ಹೇಳಿದ್ದಾರೆ.

ಎಸ್‌ಪಿ ಜತೆ ಸಖ್ಯ: ಕಾಂಗ್ರೆಸ್‌ ಪಕ್ಷವು ಸಮಾಜವಾದಿ ಪಕ್ಷ ಹಾಗೂ ಇನ್ನಿತರ ಕೆಲವು ದಲಿತ ಸಂಘಟನೆಗಳ ಜತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿ­ಬರುತ್ತಿದೆ. ಆದರೆ ಎಐಸಿಸಿ ಮೂಲ­ಗಳ ಪ್ರಕಾರ ಪಕ್ಷವು ಎಲ್ಲ ೨೮೮ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT