ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದುಭಾಷಿ ಸಾಕ್ಷಿ

ರಷ್ಯಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ರಷ್ಯಾದ ಪ್ರವಾಸಿ ಮಹಿಳೆ ಮೇಲೆ ಸರ್ಕಾರಿ ವೈದ್ಯರು ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಕ್ಕೆ ಮಹಿಳಾ ದುಭಾಷಿ­ಯೊಬ್ಬರು ಮುಖ್ಯ ಸಾಕ್ಷಿಯಾಗಿದ್ದಾರೆ ಎಂದು ರಷ್ಯಾ ಕಾನ್ಸುಲೇಟ್‌ ಪರ ವಕೀಲ ವಿಕ್ರಮ್‌ ವರ್ಮಾ ತಿಳಿಸಿದ್ದಾರೆ.

ಗೋವಾದ ಬಾಗಾ ಬೀಚ್‌ನಲ್ಲಿ ಗುಂಪೊಂದರಿಂದ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೆ ಒಳಗಾಗಿದ್ದ ರಷ್ಯಾದ ಮಹಿಳೆಯನ್ನು ತಪಾಸಣೆಗಾಗಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್‌) ಕಳುಹಿ­ಸ­ಲಾಗಿತ್ತು. ಆಕೆಗೆ ನೆರವಾಗಲು ರಷ್ಯಾದವರೇ ಆದ ಮಹಿಳಾ ದುಭಾಷಿ­ಯೊಬ್ಬರೂ ಜತೆಗಿ­ದ್ದರು.

ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಪುರುಷ ವೈದ್ಯ­ರೊ­ಬ್ಬರು ಪ್ರವಾಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದಕ್ಕೆ ಮಹಿಳಾ ದುಭಾಷಿ ಮುಖ್ಯ ಸಾಕ್ಷಿಯಾ­ಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮಹಿಳೆಯ ಕತ್ತಿನ ಬಳಿ ಗಾಯಗಳಾಗಿದ್ದರಿಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸ­ಬೇಕಾಯಿತು ಎಂದು ಜಿಎಂಸಿಎಚ್‌ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮಹಿಳೆ ಅತ್ಯಾಚಾರದ ದೂರು ನೀಡಿರದಿದ್ದರೂ ಆಕೆಯ ಗುಪ್ತಾಂಗದ ತಪಾಸಣೆ ನಡೆಸಬೇಕು ಎಂದು ವೈದ್ಯರು ಒತ್ತಾಯ ಮಾಡಿದ್ದರು ಎಂದು ವರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT