ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಜೋಲ್‌

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ತಮ್ಮ ಪತಿ ಅಜಯ್ ದೇವಗನ್ ನಿರ್ಮಾಣದ ಮಹಿಳಾ ಪ್ರಧಾನ ಹಿಂದಿ ಸಿನಿಮಾದಲ್ಲಿ ಕಾಜೋಲ್‌ ನಟಿಸುವುದು ಖಾತರಿಯಾಗಿದೆ. ‘ಈ ವರ್ಷ ಕಾಜೋಲ್ ಮುಖ್ಯವಾದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಬಹುಶಃ ಅಕ್ಟೋಬರ್‌ ಹೊತ್ತಿಗೆ ಚಿತ್ರೀಕರಣ ಪ್ರಾರಂಭವಾಗಲಿದೆ. ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇರುವ ರಾಮ್‌ ಮಾಧ್ವಾನಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ನಾನೇ ಅದನ್ನು ನಿರ್ಮಿಸಲಿದ್ದೇನೆ’ ಎಂದು ಅಜಯ್ ದೇವಗನ್ ಹೇಳಿದರು.

ಮಹಿಳಾ ಪ್ರಧಾನ ಸಿನಿಮಾ ಇದು ಎಂದಷ್ಟೇ ಹೇಳಿದ ಅವರು ಚಿತ್ರದ ವಸ್ತು ಯಾವುದು ಎನ್ನುವುದನ್ನು ತಿಳಿಸಲು ನಿರಾಕರಿಸಿದರು. ‘ವಿ ಆರ್‌ ಫ್ಯಾಮಿಲಿ’, ‘ತೂನ್‌ಪುರ್‌ ಕಾ ಸೂಪರ್‌ಹೀರೊ’ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಕಾಜೋಲ್‌ ಬಣ್ಣ ಹಚ್ಚಿರಲಿಲ್ಲ. ಈಗ ಅದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ತಾವು ಯಾವುದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದನ್ನೂ ಅಜಯ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT