ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಂದ್ರ ಸಿಂಗ್‌ ದೋನಿ ವಿರುದ್ಧ ಹಾಜರಾತಿ ವಾರಂಟ್‌

Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ಅನಂತಪುರ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾ­ಲಯ ಮಂಗಳವಾರ ಹಾಜರಾತಿ ವಾರಂಟ್‌ ಹೊರಡಿಸಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಮೂರು ಸಲ ನೋಟಿಸ್‌ ನೀಡಿದ್ದರೂ, ದೋನಿ ಅವರು  ಹಾಜರಾಗದ ಕಾರಣ ಅನಂತಪುರ ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಧೀಶರು ಈ ವಾರಂಟ್ ಹೊರ­ಡಿಸಿ­ದ್ದಾರೆ. ಬಲಪಂಥೀಯ ಹಿಂದೂ ಸಂಘಟನೆ­ಯೊಂದಕ್ಕೆ ಸೇರಿದ ಶ್ಯಾಂ ಸುಂದರ್‌ ಮತ್ತು ಗೋಪಾಲ್‌ ರಾವ್‌ ಎಂಬುವ­ವರು ಈ ಸಂಬಂಧ ಅನಂತಪುರ ನ್ಯಾಯಾ­­ಲಯ­ದಲ್ಲಿ ಪ್ರಕರಣ ದಾಖಲಿಸಿದ್ದರು.

‘ಬ್ಯುಸಿನೆಸ್‌ ಟುಡೆ’ ಇಂಗ್ಲಿಷ್‌ ನಿಯತ­ಕಾಲಿಕದ ಮುಖ­ಪುಟ­­ದಲ್ಲಿ ದೋನಿ ವಿಷ್ಣು­ವಿನ ಅವತಾ­ರದಲ್ಲಿ ಕಾಣಿಸಿ­ಕೊಂ­ಡಿದ್ದು, ಕೈಯಲ್ಲಿ ಶೂ ಸೇರಿದಂತೆ  ತಾವು ಪ್ರತಿ­ನಿಧಿಸುವ ವಿವಿಧ ಕಂಪೆನಿಗಳ ಜಾಹೀ­ರಾತು ಉತ್ಪನ್ನ­ಗಳನ್ನು ಹಿಡಿ­ದಿ­ದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು.

ಇದು ಬಂಧನ ವಾರಂಟ್‌ ಅಥವಾ ಜಾಮೀನು ರಹಿತ ವಾರಂಟ್‌ ಅಲ್ಲ. ಹಾಜರಾತಿ ವಾರಂಟ್‌ ಮಾತ್ರ ಎಂದು ನಿಯತಕಾಲಿಕದ ಪರವಾಗಿ ಹಾಜರಾಗಿದ್ದ ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT