ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಶಾಸಕರ ಪುತ್ರಿಯ ಭಾವಚಿತ್ರ ದುರ್ಬಳಕೆ

ಚೆನ್ನೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ
Last Updated 20 ಜುಲೈ 2014, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕ ಬೇಳೂರು ಗೋಪಾಲಕೃಷ್ಣ ಅವರ ಪುತ್ರಿ ಮೇಘಾ ವಂದನಾ ಅವರ  ಭಾವಚಿತ್ರಗಳನ್ನು ದುರ್ಬಳಕೆ ಮಾಡಿ ಕೊಂಡು ಸಾಮಾಜಿಕ ಜಾಲ ತಾಣ­ಗಳಲ್ಲಿ ನಕಲಿ ಖಾತೆ ಸೃಷ್ಟಿಸಿದ ಆರೋ­ಪದ ಮೇಲೆ ಪ್ರತಿಮಾ ಎಂಬುವರನ್ನು ಆರ್‌.ಟಿ.ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

‘ಸ್ನೇಹಿತೆಯಾದ ಪ್ರತಿಮಾ ನನ್ನ ಭಾವಚಿತ್ರಗಳನ್ನು ದುರುಪ­ಯೋಗ­ಪಡಿಸಿಕೊಂಡು ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಮತ್ತು ವಿ–ಚಾಟ್‌ನಲ್ಲಿ ನಕಲಿ ಖಾತೆ ತೆರೆದಿದ್ದಾಳೆ. ಆ ಖಾತೆಗಳ ಮೂಲಕ ಸ್ನೇಹಿತರಿಗೆ ನನ್ನ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಗೌರವಕ್ಕೆ ಧಕ್ಕೆ ತಂದಿದ್ದಾಳೆ’ ಎಂದು ಆರೋಪಿಸಿ ಮೇಘಾ ಅವರು ಜು.17ರಂದು ಪೊಲೀಸರಿಗೆ ದೂರು ನೀಡಿದ್ದರು.

ಚೆನ್ನೈ ಮೂಲದ ಪ್ರತಿಮಾ, ಮೇಘಾ ಅವರ ಅಸಲಿ ಫೇಸ್‌ಬುಕ್‌ ಖಾತೆಯಿಂದ ಭಾವಚಿತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಈ ದುಷ್ಕೃತ್ಯ ಎಸಗಿದ್ದಾಳೆ. ಆಕೆ, ವಾಟ್ಸ್‌ಆ್ಯಪ್‌ ಮತ್ತು ವಿ–ಚಾಟ್‌ ಮೂಲಕ ಮೇಘಾ ಹೆಸರಿನಲ್ಲಿ ಅವರ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಳು ಹಾಗೂ ಚಾಟ್‌ ಮಾಡಿದ್ದಳು.

ಈ ಬಗ್ಗೆ ಕೆಲ ದಿನಗಳ ಹಿಂದೆ ಮೇಘಾ ಅವರಿಗೆ ಕರೆ ಮಾಡಿದ ಸ್ನೇಹಿತರು, ಅಶ್ಲೀಲ ಸಂದೇಶಗಳು ಬರುತ್ತಿರುವ ಸಂಗತಿ ಯನ್ನು ಗಮನಕ್ಕೆ ತಂದಿದ್ದಾರೆ. ನಂತರ ಮೇಘಾ, ಆ ಸಂದೇಶಗಳು ಯಾವ ಮೊಬೈಲ್‌ ಸಂಖ್ಯೆಯಿಂದ ಬರುತ್ತಿವೆ ಎಂದು ಸ್ನೇಹಿತರಿಂದ ಮಾಹಿತಿ ಪಡೆದು ಪರಿಶೀಲಿಸಿದಾಗ ಪ್ರತಿಮಾಳೇ ಈ ಕೃತ್ಯ ಎಸಗುತ್ತಿರುವುದೆಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಮಾ ಮತ್ತು ಮೇಘಾ, ಈ ಹಿಂದೆ ತಮಿಳುನಾಡಿನ ಪ್ರೌಢ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪ್ರತಿಮಾ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ನಗರಕ್ಕೆ
‘ಸಿಬ್ಬಂದಿ, ಪ್ರತಿಮಾಳನ್ನು ಚೆನ್ನೈ­ನಲ್ಲಿ ಭಾನುವಾರ ವಶಕ್ಕೆ ತೆಗೆದು­ಕೊಂಡಿದ್ದಾರೆ. ಸೋಮವಾರ (ಜು.21) ಬೆಳಿಗ್ಗೆ ಆಕೆಯನ್ನು ನಗರಕ್ಕೆ ಕರೆದುಕೊಂಡು ಬರಲಾ­ಗುತ್ತದೆ. ಆಕೆಯ ವಿದ್ಯಾಭ್ಯಾಸ, ಕುಟುಂಬ ಹಿನ್ನೆಲೆಯ ಬಗ್ಗೆ ವಿಚಾರಣೆ ಬಳಿಕವಷ್ಟೇ ಮಾಹಿತಿ ಸಿಗಲಿದೆ’
–ಸಂದೀಪ್‌ ಪಾಟೀಲ್‌, ಉತ್ತರ ವಿಭಾಗದ ಡಿಸಿಪಿ

ಯುವಕರೊಂದಿಗೆ ಚೆಲ್ಲಾಟ
‘ಪ್ರತಿಮಾ ನನ್ನ ಹೆಸರಿನಲ್ಲಿ ಹಲವು ಯುವಕರಿಗೆ ಅಶ್ಲೀಲ ಸಂದೇಶ ಕಳುಹಿಸಿ, ಚೆಲ್ಲಾಟ­ವಾಡಿ­ದ್ದಾಳೆ. ಆಕೆಯಿಂದ ವಂಚನೆ­ಗೊಳ­ಗಾಗಿರುವ ಯುವಕರು, ನನಗೆ ತೊಂದರೆ ಮಾಡಬಹುದೆಂಬ ಆತಂಕದಿಂದ ಪೊಲೀಸರಿಗೆ ದೂರು ನೀಡಿದೆ. ಆಕೆಯ ದುಷ್ಕೃತ್ಯದಿಂದ ಸಾರ್ವಜನಿ ಕವಾಗಿ ಓಡಾಡುವುದೇ ಕಷ್ಟವಾಗಿದೆ’
–ಮೇಘಾ ವಂದನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT