ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಅಸ್ವಸ್ಥೆ ಮೇಲೆ ತಂದೆ ಅತ್ಯಾಚಾರ

Last Updated 21 ಆಗಸ್ಟ್ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ಓಕಳಿಪುರ ಸಮೀಪದ ಲಕ್ಷ್ಮಣ­­­ರಾವ್‌ನಗರ ನಿವಾಸಿ ಷಣ್ಮುಗ (40) ಎಂಬಾತ 13 ವರ್ಷದ ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ಷಣ್ಮುಗ, ನೇಯ್ಗೆ ಕೆಲಸ ಮಾಡು­ತ್ತಿದ್ದ. ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಆತ ಪತ್ನಿ, ಮಗಳು ಮತ್ತು ಅತ್ತೆಯ ಜತೆ ವಾಸವಾಗಿದ್ದ.

ಆತನ ಪತ್ನಿ ಮನೆಗೆಲಸಕ್ಕೆ ಹೋಗು­ತ್ತಾರೆ. ಮಾನಸಿಕ ಅಸ್ವಸ್ಥೆಯಾದ ಆತನ ಮಗಳಿಗೆ ನಡೆಯಲು ಮತ್ತು ಮಾತ­­­ನಾ­ಡಲು ಬರುವುದಿಲ್ಲ. ಹೀಗಾಗಿ ಆಕೆ ಅಜ್ಜಿಯ ಜತೆ ಮನೆ­ಯಲ್ಲೇ ಇರುತ್ತಿದ್ದಳು ಎಂದು ಶ್ರೀರಾಂ­ಪುರ ಪೊಲೀಸರು ತಿಳಿಸಿದ್ದಾರೆ.

ಸುಮಾರು 3 ತಿಂಗಳ ಹಿಂದೆ ಪತ್ನಿ ಕೆಲ­ಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಷಣ್ಮುಗ ಪಾನ­­ಮತ್ತನಾಗಿ ಮನೆಗೆ ಬಂದು ಅತ್ತೆಯ ಎದುರೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಅತ್ಯಾ­ಚಾ­ರದ ಸಂಗತಿಯನ್ನು ಯಾರಿಗೂ ತಿಳಿಸ­ದಂತೆ ಅತ್ತೆಗೆ ಬೆದ­ರಿಕೆ ಹಾಕಿ ಪರಾರಿ­ಯಾ­­­ಗಿದ್ದ. ಇದ­ರಿಂ­ದಾಗಿ ಅವರು ಆ ವಿಷಯ­­ವನ್ನು ಬಹಿ­ರಂಗ­ಪಡಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅತ್ತೆಯು ಗುರುವಾರ ತನ್ನ ಮಗಳಿಗೆ ಅತ್ಯಾಚಾರದ ಸಂಗತಿ­ಯನ್ನು ತಿಳಿಸಿ­ದ್ದಾರೆ. ನಂತರ ಅವರು ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ಎಂದು ಪೊಲೀ­ಸರು ಮಾಹಿತಿ ನೀಡಿದ್ದಾರೆ.

‘ಷಣ್ಮುಗ, 2ದಿನಗಳ ಹಿಂದೆ ಪತ್ನಿಗೆ ಕರೆ ಮಾಡಿ ಮಗಳು,ಅತ್ತೆಯ ಜತೆ ತಮಿ­­ಳುನಾಡಿಗೆ ಬರುವಂತೆ ಹೇಳಿ­ದ್ದಾನೆ. ಆತನನ್ನು ಬಂಧಿಸಲು ಸಿಬ್ಬಂದಿ­­ಯನ್ನು ತಮಿಳುನಾಡಿಗೆ ಕಳುಹಿ­ಸ­ಲಾಗಿದೆ.

ಆರೋಪಿಯ ವಿರುದ್ಧ ಅತ್ಯಾ­ಚಾರ, ಲೈಂಗಿಕ ಅಪರಾಧಗಳಿಂದ ಮಕ್ಕ­ಳನ್ನು ರಕ್ಷಿ­ಸುವ ಕಾಯ್ದೆಯಡಿ (ಪೋಕ್ಸೊ) ಪ್ರಕ­ರಣ ದಾಖಲಿ­ಸಿಕೊ­ಳ್ಳಲಾ­­ಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT