ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿದಾರರ ಗುರುತು ಕೇಳಿದ 'ಸುಪ್ರೀಂ'

ಸಿಬಿಐ ತನಿಖೆ ಹಗರಣ ಆರೋಪ
Last Updated 15 ಸೆಪ್ಟೆಂಬರ್ 2014, 11:11 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಸಿಬಿಐ ನಿರ್ದೇಶಕ ರಣಜಿತ್‌ ಸಿನ್ಹಾ ಅವರು 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವವರ ಗುರುತು ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ಆರೋಪ ಹೊರಿಸಿರುವ ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಶನ್‌ (ಸಿಪಿಐಎಲ್) ಸಂಸ್ಥೆಯಿಂದ ಮಾಹಿತಿದಾರರ ಗುರುತು ಬಯಸಿರುವ ನ್ಯಾಯಾಲಯ, ‘ಪ್ರಕರಣದಲ್ಲಿ ಮಾಹಿತಿ ನೀಡಿದವರು ಯಾರೆಂಬುದು ಖಚಿತವಾಗಬೇಕಿದೆ’ ಎಂದು ಹೇಳಿ, ಪ್ರಕರಣವನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿದೆ.

2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಹೆಸರಿಸ­ಲಾದ ಕಂಪೆನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಕಳೆದ 15 ತಿಂಗಳಲ್ಲಿ ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ ಎಂದು ಸಿಪಿಐಎಲ್ ಸಂಸ್ಥೆ ಆರೋಪಿಸಿತ್ತು.

ಸಿಬಿಐ ನಿರ್ದೇಶಕರ ಅಧಿಕೃತ ನಿವಾಸದ ಸಂದರ್ಶಕರ ಪುಸ್ತಕದಲ್ಲಿ ಈ ಸ್ಫೋಟಕ ಮಾಹಿತಿಗಳಿವೆ ಎಂದು ಸಿಪಿಐಎಲ್‌ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT