ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಬಿಡುಗಡೆ: ನಿರ್ದೇಶನ ಕೋರಿ ಅರ್ಜಿ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮದುರೆ (ಪಿಟಿಐ): ಅಪರಾಧಿಗಳ ವಿನಿಮಯ ಒಪ್ಪಂದದ ಅನ್ವಯ ಶ್ರೀಲಂಕಾದ ಜೈಲಿನಲ್ಲಿರುವ ತಮಿಳುನಾಡಿನ ಐವರು ಮೀನುಗಾರರ ಬಿಡುಗಡೆಗೆ ಸಂಬಂಧಿ­ಸಿದಂತೆ ಕೊಲಂಬೊ­­­­­­ದ­ಲ್ಲಿರುವ ಭಾರತದ ರಾಯ­ಭಾರ ಕಚೇರಿಗೆ ಸೂಕ್ತ ನಿರ್ದೇ­ಶನ ನೀಡ­ಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಪೀಠಕ್ಕೆ ಸೋಮವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ.

ವಕೀಲ ಎಸ್‌.ಎಂ. ಅನಂತ ಮುರುಗನ್‌ ಈ ಅರ್ಜಿ ಸಲ್ಲಿಸಿದ್ದಾರೆ. ಸಮುದ್ರ ಗಡಿ ಮತ್ತು ಕೈದಿಗಳ (ವಿಚಾ­ರಣೆ ಎದುರಿಸುತ್ತಿರುವ ಮತ್ತು ಶಿಕ್ಷೆಗೆ ಗುರಿ­ಯಾ­ಗಿರುವ) ವಿನಿಮಯ ಒಪ್ಪಂದ ಸೇರಿದಂತೆ ಭಾರತ ಮತ್ತು ಶ್ರೀಲಂಕಾ ಮಧ್ಯೆ ಏರ್ಪಟ್ಟಿರುವ ಒಂಬತ್ತು ಒಪ್ಪಂದ­ಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ. ಏತನ್ಮಧ್ಯೆ, ಮೀನುಗಾರರ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೀನುಗಾರ­ನೊಬ್ಬನ ಪತ್ನಿ ಸಲ್ಲಿಸಿರುವ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೇಣು­ಗೋಪಾಲ್‌ ಅವರು ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT