ವಿಜಾಪುರ: ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವೇ ಮುಂದಿನ ವರ್ಷ ನಡೆಯಲಿರುವ (80ನೇ) ಸಮ್ಮೇಳನದ ಆತಿಥ್ಯ ವಹಿಸುವವರು ಯಾರು? ಎಂಬ ಬಗ್ಗೆ ಕುತೂಹಲ ಮೂಡಿದೆ. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಮಧ್ಯೆ ಈ ಬಗ್ಗೆ ಚರ್ಚೆ ಮುಂದುವರಿದಿದೆ. ಆತಿಥ್ಯ ವಹಿಸಲು ತುದಿಗಾಲಿನಲ್ಲಿ ನಿಂತಿರುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಂತೂ ಭಾರಿ ನಿರೀಕ್ಷೆಯಲ್ಲಿದ್ದಾರೆ.

ಸಮ್ಮೇಳನದ ಎರಡನೇ ದಿನವಾದ ಭಾನುವಾರ (ಫೆ.10) ಸಂಜೆ 7.30ಕ್ಕೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ಸಭೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯವನ್ನು ವಹಿಸಲಿರುವ ಜಿಲ್ಲೆ ನಿರ್ಧಾರವಾಗಲಿದೆ. ರಾಜ್ಯದ 30 ಜಿಲ್ಲೆಗಳ ಅಧ್ಯಕ್ಷರು, ರಾಜ್ಯ ಘಟಕದ ಅಧ್ಯಕ್ಷರು, 13 ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದು, ಚರ್ಚೆಯ ನಂತರ ಸಹಮತ ಮೂಡದಿದ್ದಲ್ಲಿ ಮತದಾನ ಅಥವಾ ಚೀಟಿ ಮೂಲಕ ಮುಂದಿನ ಸಮ್ಮೇಳನ ನಡೆಯುವ ಜಿಲ್ಲೆಯ ತೀರ್ಮಾನವಾಗಲಿದೆ.

ಈ ಹಿನ್ನೆಲೆಯಲ್ಲಿ ಸಮ್ಮೇಳನ ಆಯೋಜಿಸಲು ಆಸಕ್ತರಾಗಿರುವ ಕೆಲವು ಜಿಲ್ಲೆಗಳ ಕಸಾಪ ಅಧ್ಯಕ್ಷರು, ಸಭೆಯಲ್ಲಿ ತಮ್ಮ ಪರ ನಿಲ್ಲುವಂತೆ ಇತರೆ ಜಿಲ್ಲೆಗಳ ಅಧ್ಯಕ್ಷರ ಬೆನ್ನುಬಿದ್ದಿದ್ದಾರೆ. ಇಷ್ಟೇ ಅಲ್ಲ, ಸಾಹಿತ್ಯ ವಲಯದ ಗಣ್ಯರಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮುಂದಿನ ವರ್ಷದ ಸಮ್ಮೇಳನ ತಮ್ಮ ಜಿಲ್ಲೆಯಲ್ಲಿ ನಡೆಯಬೇಕು ಎಂದು ಕೊಡಗು, ಬಳ್ಳಾರಿ, ಮಂಡ್ಯ ಜಿಲ್ಲೆಗಳ ಕಸಾಪ ಅಧ್ಯಕ್ಷರು ಈಗಾಗಲೇ ಒತ್ತಾಯಿಸಿದ್ದಾರೆ. ಅದರಲ್ಲೂ ಮುಂದಿನ ಸಮ್ಮೇಳನ ಬಳ್ಳಾರಿ ಜಿಲ್ಲೆಯಲ್ಲೇ ನಡೆಯಬೇಕು ಎಂದು ಅಲ್ಲಿನ ಕಸಾಪ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ, ಉಸ್ತುವಾರಿ ಸಚಿವರು, ಸಾಹಿತ್ಯ ಕ್ಷೇತ್ರದ ಪ್ರಮುಖರಿಂದ ಇತರ ಕಸಾಪ ಅಧ್ಯಕ್ಷರ ಸಹಕಾರಕ್ಕಾಗಿ ಎರಡು ಬಾರಿ ಮನವಿ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಗೆ 80ನೇ ಸಾಹಿತ್ಯ ಸಮ್ಮೇಳನ ಆತಿಥ್ಯ ನೀಡುವ ಬಗ್ಗೆ ಹೆಚ್ಚಿನ ಕಸಾಪ ಅಧ್ಯಕ್ಷರಲ್ಲಿ ಒಲವು ಇದೆ ಎಂದು ಹೇಳಲಾಗಿದೆ. ಈ ಮಧ್ಯೆ ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆಯೂ ಕೆಲವರ ಆಸಕ್ತಿ ಇದೆ ಎನ್ನಲಾಗಿದೆ. ಕೊಡಗು ಜಿಲ್ಲೆಯಲ್ಲಿ 1932ರಲ್ಲಿ ಮತ್ತು 1981ರಲ್ಲಿ ಸಮ್ಮೇಳನ ನಡೆದಿದೆ. ಮುಂದಿನ ವರ್ಷ ಅಲ್ಲಿ ಸಮ್ಮೇಳನ ನಡೆಸುವುದರಿಂದ ಆ ಜಿಲ್ಲೆಗೆ 27ನೇ ವರ್ಷಗಳಲ್ಲಿ ಎರಡನೇ ಬಾರಿಗೆ ಸಮ್ಮೇಳನದ ಆತಿಥ್ಯ ನೀಡಿದಂತಾಗುತ್ತದೆ. ಆದರೆ ಬಳ್ಳಾರಿಯಲ್ಲಿ 1926, 1938, 1947 ( ಹರಪನಹಳ್ಳಿಯಲ್ಲಿ, ಈಗ ದಾವಣಗೆರೆ ಜಿಲ್ಲೆಯಲ್ಲಿದೆ) ಮತ್ತು 1958ರಲ್ಲಿ ಸಮ್ಮೇಳನ ನಡೆದಿದೆ.

ಮುಂದಿನ ವರ್ಷ ಮತ್ತೆ ಸಮ್ಮೇಳನ ನಡೆಸುವ ಅವಕಾಶ ನೀಡಿದರೆ 55 ವರ್ಷಗಳ ಬಳಿಕ ಬಳ್ಳಾರಿಗೆ ಸಮ್ಮೇಳನ ಆಯೋಜಿಸುವ ಅವಕಾಶ ಸಿಕ್ಕಂತಾಗುತ್ತದೆ' ಎನ್ನುವ ವಾದ ಸಿರಿಗೇರಿ ಯರಿಸ್ವಾಮಿ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.