ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಂತರ್ಜಾಲ ಮಣಿದ ಫ್ಲಿಫ್‌ಕಾರ್ಟ್‌

ಏರ್‌ಟೆಲ್‌ ಝೀರೊದಿಂದ ಹಿಂದೆ ಸರಿದ ಸಂಸ್ಥೆ
Last Updated 14 ಏಪ್ರಿಲ್ 2015, 18:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂತರ್ಜಾಲ ಚಿಲ್ಲರೆ ಮಾರಾಟದ ಪ್ರಮುಖ ಸಂಸ್ಥೆಗಳಲ್ಲೊಂದಾದ ಫ್ಲಿಪ್‌ಕಾರ್ಟ್‌, ಮುಕ್ತ ಅಂತರ್ಜಾಲಕ್ಕೆ ಸಂಬಂಧಿಸಿದ ತನ್ನ ನಿಲುವು ಬದಲಿಸಿಕೊಂಡಿದೆ.

ಅಂತರ್ಜಾಲದಲ್ಲಿ ಸರ್ವರಿಗೂ ಸಮಾನ ಅವಕಾಶದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾದ ಮತ್ತು ಸಮಾಜದ ವಿವಿಧ ವರ್ಗದವರಿಂದ ವ್ಯಕ್ತವಾದ ಆಕ್ರೋಶಕ್ಕೆ ಮಣಿದು ಏರ್‌ಟೆಲ್‌ನ ‘ಏರ್‌ಟೆಲ್‌ ಝೀರೊ’ ಯೋಜನೆ ಜತೆಗಿನ ಸಂಬಂಧವನ್ನು ಫ್ಲಿಪ್‌ಕಾರ್ಟ್‌ ಸಂಸ್ಥೆ ಕಡಿದುಕೊಂಡಿದೆ.

ವಿವಾದಕ್ಕೆ ಕಾರಣವಾದ ಏರ್‌ಟೆಲ್‌ ಕೂಡ, ಮುಕ್ತ ಅಂತರ್ಜಾಲದ ಪರವಾಗಿಯೇ ತಾನು ಇರುವುದಾಗಿ ಹೇಳಿದೆ. ಅಲ್ಲದೇ ತನ್ನ ‘ಏರ್‌ಟೆಲ್‌ ಝೀರೊ’ ಸೌಲಭ್ಯವನ್ನು ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಮುಕ್ತವಾಗಿ ಇರಿಸಲಾಗುವುದು ಎಂದು ಏರ್‌ಟೆಲ್‌ ಹೇಳಿದೆ.

‘ಏರ್‌ಟೆಲ್‌ ಝೀರೊ’ ಯೋಜನೆಯಲ್ಲಿ ಭಾಗಿಯಾಗುವ ಸಂಬಂಧ ಏರ್‌ಟೆಲ್‌ ಜೊತೆಗಿನ ಮಾತುಕತೆಯಿಂದ ಹಿಂದಕ್ಕೆ ಸರಿಯಲಾಗಿದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

‘ಏರ್‌ಟೆಲ್‌ ಝೀರೊ’ ಯೋಜನೆಗೆ ಕಳೆದ ವಾರ ಚಾಲನೆ ನೀಡಲಾಗಿದ್ದು, ಇದರ ಪ್ರಕಾರ ಕೆಲವು ಮೊಬೈಲ್‌ ಅಪ್ಲಿಕೇಶನ್‌ಗಳು (ಆ್ಯಪ್‌) ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತವೆ. ಆದರೆ ಅದರ ಶುಲ್ಕವನ್ನು ಆ್ಯಪ್‌ ಸಿದ್ಧಪಡಿಸಿದ ಸಂಸ್ಥೆಗಳೇ ಭರಿಸುತ್ತವೆ.

ಇದೇ ರೀತಿಯ ಸೇವೆಗಳನ್ನು ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮತ್ತು ಫೇಸ್‌ಬುಕ್‌ ಕೂಡ ಒದಗಿಸುತ್ತಿವೆ. ಈ ಬಗ್ಗೆ ಅಂತರ್ಜಾಲ ಬಳಕೆದಾರರು ಭಾರಿ ಟೀಕೆ ಮಾಡುತ್ತಿದ್ದಾರೆ. ಇದು ‘ಉಚಿತ’ ಅಂತರ್ಜಾಲ ಲಭ್ಯತೆಯನ್ನು ಕೆಲವೇ ಕೆಲವು ಸೇವೆಗಳಿಗೆ ಸೀಮಿತವಾಗಿಸುತ್ತದೆ. ಹೀಗಾಗಿ ಇಂತಹ ಸೌಲಭ್ಯಗಳು ಮುಕ್ತ ಅಂತರ್ಜಾಲ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಟೀಕಾಕಾರರು  ಹೇಳುತ್ತಿದ್ದಾರೆ.

ಕಾಂಗ್ರೆಸ್‌ ಎಚ್ಚರಿಕೆ
ಮುಕ್ತ ಅಂತರ್ಜಾಲದ ಪರ ನಿಂತಿರುವ ಕಾಂಗ್ರೆಸ್‌, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸಿದ್ಧಪಡಿಸುತ್ತಿರುವ ಸಮಾಲೋಚನಾ ಪತ್ರವನ್ನು ರದ್ದು ಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT