ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

Last Updated 22 ಜುಲೈ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು/ರಾಮನಗರ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಮೇಲೆ ನೆರೆ­ಮನೆಯ 16 ವರ್ಷದ ಬಾಲಕ ಅತ್ಯಾಚಾರ ಎಸಗಿ­ರುವ ಘಟನೆ ತಲಘಟ್ಟಪುರ ಸಮೀಪದ ತಟ್ಟಿಗುಪ್ಪೆ ಗ್ರಾಮದಲ್ಲಿ ನಡೆದಿದೆ.

‘ಜುಲೈ 17ರಂದು ಬಿಸ್ಕತ್‌ ಕೊಡುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದ ಬಾಲಕ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಈ ವಿಷಯ ಪೋಷ­ಕರ ಗಮನಕ್ಕೆ ಬಂದಿರಲಿಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದ ಬಳ­ಲು­ತ್ತಿದ್ದ ಬಾಲಕಿಯನ್ನು ಜುಲೈ 20ರಂದು ಕೋರಮಂಗಲದ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾ­ಚಾರ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ರಾಮ­ನಗರ ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿ ಅನುಪಮ್ ಅಗರ್‌ವಾಲ್ ತಿಳಿಸಿದರು.
‘ಬಾಲಕಿಯ ಗುಪ್ತಾಂಗ ಮತ್ತು ಕಾಲಿನ ಮೇಲೆ ಕಚ್ಚಿದ ಗಾಯದ ಗುರುತು­ಗಳಿವೆ. ಅತ್ಯಾಚಾರ ನಡೆ­ದಿ­ರು­­ವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಈ ಸಂಗತಿ ತಿಳಿದು ಆತಂಕಗೊಂಡ ಪೋಷಕರು, ಜುಲೈ 21ರಂದು ತಲಘಟ್ಟ­ಪುರ ಠಾಣೆಗೆ ದೂರು ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟಿದ್ದ ಆರೋಪಿ­, ಪೋಲಿ ಹುಡುಗರ ಜತೆ ಬೀದಿ ಸುತ್ತುತ್ತಾನೆ. ಘಟನಾ ದಿನ ಆತ ಮನೆ ಬಳಿ ಬಂದಾಗ ಬಾಲಕಿ ಒಬ್ಬಳೇ ಆಟ­ಆಡುತ್ತಿರುವುದನ್ನು ಕಂಡಿದ್ದಾನೆ. ನಂತರ ಹತ್ತಿರ ಹೋಗಿ ಬಿಸ್ಕತ್‌ ಕೊಡು­ವುದಾಗಿ ತನ್ನ ಮನೆಗೆ ಕರೆ­ದೊಯ್ದು ಅತ್ಯಾ­ಚಾರ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯ ಪೋಷಕರು ಕೂಲಿ ಕೆಲಸ ಮಾಡು­ತ್ತಾರೆ.  ಆಟವಾಡುತ್ತಿದ್ದ ಮಗಳು ಏಕಾಏಕಿ ನಾಪತ್ತೆ­ಯಾಗಿ­ದ್ದ­ರಿಂದ ಅನುಮಾನ­ಗೊಂಡ ತಾಯಿ, ಅಕ್ಕ–ಪಕ್ಕದ ಮನೆ­ಗಳ­ಲ್ಲೆಲ್ಲ ಹುಡುಕಾಟ ಆರಂಭಿಸಿ­ದ್ದರು. ಆಗ ಆರೋ­ಪಿಯ ಮನೆ­ಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಆಕೆ ಪತ್ತೆ­ಯಾಗಿ­ದ್ದಳು. ಆದರೆ, ಬಾಲಕ ಸ್ಥಳದಿಂದ ಪರಾರಿ­ಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ತಾಯಿ, ಮಗಳ ಕೆನ್ನೆಗೇ ಹೊಡೆದು ಮನೆಗೆ ಕರೆ­ದೊ­ಯ್ದಿ­­ದ್ದರು. ಆದರೆ, ಅತ್ಯಾಚಾರ ನಡೆದಿರುವ ಸಂಗತಿ ಗೊತ್ತಾದ ಬಳಿಕ ಅವರು ಈ ಬಗ್ಗೆ ಮಗಳ ಬಳಿ ವಿಚಾರಿ­ಸಿ­­ದ್ದಾರೆ. ಆಗ ಬಾಲಕಿ ನಡೆದ ಘಟನೆಯನ್ನು ವಿವ­ರಿ­ಸಿ­­­ದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿ­ದ್ದಾರೆ.

‘ಪ್ರಕರಣ ಬೆಳಕಿಗೆ ಬಂದ ನಂತರ ಘಟನೆ ಸಂಬಂಧ ಆರೋಪಿ ಬಾಲಕನ ಪೋಷಕರು ಮತ್ತು ಗ್ರಾಮದ ಮುಖಂ­ಡರು ಸಂಧಾನದ ಮಾತುಕತೆ ನಡೆಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿ­ದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಬಾಲಕಿಯ ಪೋಷಕರ ಒಪ್ಪಿಗೆ ಪಡೆದು ಆರೋಪಿ ವಿರುದ್ಧ ಅತ್ಯಾಚಾರ (ಐಪಿಸಿ 376) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2012 (ಪೋಸ್ಕೊ) ಅಡಿ ಪ್ರಕರಣ ದಾಖಲಿಸಿ­ದ್ದಾರೆ.

ಆತನ ಪತ್ತೆಗೆ ಸಿಪಿಐ ಸಂಪತ್‌ ಕುಮಾರ್‌ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT