ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಬಹಿರಂಗಕ್ಕೆ ‘ಸುಪ್ರೀಂ’ ಸೂಚನೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಬಿಐ ನಿರ್ದೇ­ಶಕ ರಂಜಿತ್‌ ಸಿನ್ಹಾ ಅವರು ೨ಜಿ ಹಗರಣದ ಆರೋಪಿ­ಗಳನ್ನು ರಕ್ಷಿಸಿ­ದ್ದಾರೆ ಎಂಬ ಆರೋಪದ ಮೂಲ­ವನ್ನು ಬಹಿರಂಗ­ಪಡಿ­ಸು­ವಂತೆ ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ಸುಪ್ರೀಂ­ಕೋರ್ಟ್‌ ಸೋಮವಾರ ಸೂಚಿಸಿದೆ.

‘ಸಿನ್ಹಾ ನಿವಾಸದ ಸಂದರ್ಶ­ಕರ ಪಟ್ಟಿ ಹಾಗೂ ಸಿಬಿಐ ದಾಖಲೆ­ಗಳನ್ನು ನಿಮಗೆ ಕೊಟ್ಟವರ ಹೆಸರನ್ನು ತಿಳಿಸಿ’ ಎಂದೂ ನ್ಯಾ. ಎಚ್‌.ಎಲ್‌. ದತ್ತು ಅವರಿದ್ದ ಪೀಠ ಭೂಷಣ್‌ ಅವರಿಗೆ ಆದೇಶಿಸಿದೆ.

‘ಮುಂದಿನ ವಿಚಾರಣೆಯ ವೇಳೆ ಭೂಷಣ್‌ ಅವರು ಮುಚ್ಚಿದ ಲಕೋಟೆ­­ಯಲ್ಲಿ ಈ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು. ಮಾಹಿತಿ ಮೂಲವನ್ನು ತಿಳಿದ ಬಳಿಕ ಆರೋಪ ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಪರಿಶೀಲಿಸಲಾ­ಗು­ತ್ತದೆ. ಭೂಷಣ್‌  ಸಲ್ಲಿಸಿರುವ ಪ್ರಮಾ­ಣ­ಪತ್ರ ಸುಪ್ರೀಂ­ಕೋರ್ಟ್‌ ನಿಯ­­ಮಕ್ಕೆ ಅನುಗುಣ­ವಾಗಿಲ್ಲ.  ಎಲ್ಲಿಂದ ಈ ದಾಖ­ಲೆ­­ಗಳನ್ನು ಪಡೆದುಕೊಳ್ಳಲಾಗಿದೆ ಎನ್ನುವ ಮಾಹಿ­ತಿ­ಯನ್ನೂ ಭೂಷಣ್‌ ಬಹಿ­ರಂಗ­ಪಡಿಸಬೇಕು’ ಎಂದು ಪೀಠ ಹೇಳಿದೆ.

‘ಯಾರೋ ಮೂರನೆಯವರು ಈ ಪ್ರಕರಣದ ವಿಚಾರಣೆ­ಯನ್ನು ನಿಯಂತ್ರಿ­ಸುತ್ತಿದ್ದಾರೆ. ಸುಪ್ರೀಂಕೋರ್ಟ್‌ ಮುಂದೆ ಪ್ರಶಾಂತ್‌ ಭೂಷಣ್‌ ಅವರು ಸಿಬಿಐ ನಿರ್ದೇ­ಶಕರ ಸಂದ­ರ್ಶ­ಕರ ಪಟ್ಟಿಯ ಮೂಲ ದಾಖಲೆ­ಯನ್ನು ಸಲ್ಲಿಸಲಿ­ದ್ದಾರೆ ಎಂದು ಮಾಧ್ಯಮ­ದಲ್ಲಿ ವರದಿ ಬಂದಿ­ದ್ದಾ­ದರೂ ಹೇಗೆ’ ಎಂದು ಸಿನ್ಹಾ ಪರ  ಹಾಜರಿದ್ದ ವಕೀಲ ವಿಕಾಸ್‌ ಸಿಂಗ್‌ ಪ್ರಶ್ನಿಸಿದರು. ‘ಈ ಎಲ್ಲ ವಿವಾದಗಳ ಹಿಂದೆ ಕಾರ್ಪೊರೇಟ್‌ ಸಂಸ್ಥೆ­ಯೊಂದರ ಕಿತಾ­ಪತಿ ಇದೆ. ೨ಜಿ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿದೆ’ ಎಂದೂ ವಾದಿಸಿದರು. ನ್ಯಾಯಪೀಠ ಮುಂದಿನ ವಿಚಾರಣೆ­ಯನ್ನು ಈ ತಿಂಗಳ ೨೨ಕ್ಕೆ ನಿಗದಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT