ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ರಸಾಯನಶಾಸ್ತ್ರ ನೊಬೆಲ್‌

ತೀಕ್ಷ್ಣ ದೃಷ್ಟಿಯ ಸೂಕ್ಷ್ಮದರ್ಶಕ ಅಭಿವೃದ್ಧಿಗೆ ಸಂದ ಗೌರವ
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ (ಎಪಿ): ‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿ­ಗಳು ಈ ಬಾರಿಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾಗಿದ್ದಾರೆ.

ಅಮೆರಿಕದ ಎರಿಕ್‌ ಬೆಟ್ಜಿಗ್‌ ಮತ್ತು ವಿಲಿಯಂ ಮೊಯೆರ್ನರ್‌ ಹಾಗೂ ಜರ್ಮನಿಯ ಸ್ಟಿಫನ್‌ ಹೆಲ್‌ ಈ ಗೌರ­ವಕ್ಕೆ ಪಾತ್ರರಾದವರು.
ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮ­­­ದರ್ಶಕವು ಸಾಂಪ್ರದಾಯಿಕ ದ್ಯುತಿ­ಸೂಕ್ಷ್ಮ­ದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್‌ ಸ್ವೀಡಿಸ್‌ ಅಕಾ­ಡೆಮಿ ಹೇಳಿದೆ.

‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮ­ದರ್ಶ­ಕ­ದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯ­ವಾಗಿದೆ’ ಎಂದು ಸ್ವೀಡಿಸ್‌ ಅಕಾಡೆಮಿ ತಿಳಿಸಿದೆ.

  54 ವರ್ಷದ ಬೆಟ್ಜಿಗ್‌ ಅವರು ವರ್ಜಿನಿ­ಯಾದ ಆಶ್‌ಬರ್ನ್‌ನ ಹೊವಾರ್ಡ್‌ ಹ್ಯೂಸ್‌ ಮೆಡಿಕಲ್‌ ವೈದ್ಯ­ಕೀಯ ಸಂಸ್ಥೆ­ಯಲ್ಲಿ ಉದ್ಯೋಗಿ­.
ಮೊಯೆರ್ನರ್‌ ಅವರು ಕ್ಯಾಲಿ­ಫೋರ್ನಿಯಾದ ಸ್ಟ್ಯಾನ್‌­ಫೊರ್ಡ್‌ ವಿಶ್ವ­ವಿದ್ಯಾಲಯದಲ್ಲಿ  ಪ್ರೊಫೆ­ಸರ್‌. 51 ವರ್ಷದ ಹೆಲ್‌ ಅವರು ಜರ್ಮನಿಯ ಮ್ಯಾಕ್ಸ್‌ ಪ್ಲ್ಯಾಂಕ್‌ ಇನ್‌ಸ್ಟಿ­ಟ್ಯೂಟ್‌ ಫಾರ್‌ ಬಯೋಪಿಸಿಕಲ್‌ ಕೆಮೆ­ಸ್ಟ್ರಿಯ ನಿರ್ದೇಶಕರು. ‘ನನಗೆ ಆಶ್ಚರ್ಯವಾಗಿದೆ. ಈ ಸುದ್ದಿ  ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಹೆಲ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT