ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಎಂಜಿ ರಸ್ತೆ ನಿಲ್ದಾಣಕ್ಕೆ ಚರ್ಚ್‌ ರಸ್ತೆಯಿಂದಲೂ ಪ್ರವೇಶ

Last Updated 20 ಅಕ್ಟೋಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ಲಾಜಾ ಚಿತ್ರಮಂದಿರ ಇದ್ದ ಜಾಗದಲ್ಲಿ ನಿರ್ಮಾಣ­ಗೊಂಡಿ­ರುವ ‘ನಮ್ಮ ಮೆಟ್ರೊ’ದ ಎಂಜಿ ರಸ್ತೆ ನಿಲ್ದಾಣದ ಎರಡನೇ ಪ್ರವೇಶ/ ನಿರ್ಗ­ಮನ ದ್ವಾರದ ಬ್ಲಾಕ್‌ ಅನ್ನು  ಸೋಮ­ವಾರ ಸಂಜೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು.
ಈ ಎರಡನೇ ಬ್ಲಾಕ್‌ನ ಉದ್ಘಾಟನೆ­ಯನ್ನು ಅನೌಪಚಾರಿಕವಾಗಿ ನೆರವೇರಿಸಲಾ­ಯಿತು. ಈಗ ಮೆಟ್ರೊ ಪ್ರಯಾಣಿಕರು ಎಂಜಿ ರಸ್ತೆಯ ಎರಡೂ ಬದಿ ಮಾತ್ರವಲ್ಲದೇ ಚರ್ಚ್‌ ರಸ್ತೆಯಿಂದಲೂ ನಿಲ್ದಾಣ ಪ್ರವೇಶಿಸ­ಬಹುದಾಗಿದೆ.

ಮೂರು ವರ್ಷಗಳ ಹಿಂದೆ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಮೆಟ್ರೊ ಸಂಚಾರ ಉದ್ಘಾಟನೆಗೊಂಡಿತ್ತು. ಎರಡನೇ ಬ್ಲಾಕ್‌ ನಿರ್ಮಾಣ ಕಾರ್ಯವು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳ­ಬೇಕಿತ್ತು. ಈಗ  ವಿಳಂಬವಾಗಿ ಬಳಕೆಗೆ ಲಭ್ಯ­ವಾಗಿದೆ. ನಿಲ್ದಾ­ಣದ ಎರಡೂ ಬ್ಲಾಕ್‌ಗಳಲ್ಲಿ ಸ್ಥಳಾ­ವ­ಕಾಶ­ವನ್ನು ವಾಣಿಜ್ಯ ಚಟುವಟಿಕೆ­ಗಳಿಗೆ ನೀಡಲು ಮೆಟ್ರೊ ರೈಲು ನಿಗಮವು ಈಗಾಗಲೇ ಟೆಂಡರ್‌ ಕರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT