ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿಗೇ ಸೆಡ್ಡುಹೊಡೆಯುವಂತೆ ಫುಟ್ಬಾಲ್ ಆಡಿದ ರಾಮದೇವ್ ಬಾಬಾ!

Last Updated 26 ಜುಲೈ 2016, 8:38 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಬಚಾವೋ, ಬೇಟಿ ಪಡಾವೋ ಮೊದಲಾದ ಯೋಜನೆಗಳ ಪ್ರಚಾರಾರ್ಥವಾಗಿ ಭಾನುವಾರ ಸೆಲೆಬ್ರಿಟಿ ಫುಟ್ಬಾಲ್ ಪಂದ್ಯವೊಂದನ್ನು ಏರ್ಪಡಿಸಲಾಗಿತ್ತು. ಬಾಲಿವುಡ್ ತಾರೆಯರು ಮತ್ತು ಸಂಸತ್ ಸದಸ್ಯರ ನಡುವೆ ನಡೆದ ಈ ಪುಟ್ಬಾಲ್ ಪಂದ್ಯದಲ್ಲಿ ಯೋಗ ಗುರು ಬಾಬಾ ರಾಮದೇವ್ ಪ್ರಧಾನ ಆಕರ್ಷಣೆಯಾಗಿದ್ದರು.

ಅಭಿಷೇಕ್ ಬಚ್ಚನ್ ಬಾಲಿವುಡ್ ನಟರ ತಂಡವನ್ನು ಪ್ರತಿನಿಧೀಕರಿಸಿದರೆ, ಸಂಸತ್ ಸದಸ್ಯರ ತಂಡಕ್ಕೆ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಮುಂದಾಳತ್ವ ವಹಿಸಿದ್ದರು.

ದೆಹಲಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಹ ಆಟಗಾರರು ಜೆರ್ಸಿ ತೊಟ್ಟು ಕಣಕ್ಕಿಳಿದರೆ, ಬಾಬಾ ರಾಮದೇವ್ ಮಾತ್ರ ಕಾವಿಯುಟ್ಟೇ ಆಟವಾಡಿದರು. ಎಲ್ಲ ಆಟಗಾರರ ನಡುವೆ ಸಖತ್ ಎನರ್ಜೆಟಿಕ್ ಆಗಿ ಆಟವಾಡುತ್ತಿದ್ದ ಬಾಬಾ ಅವರೇ ಪಂದ್ಯದ ಕೇಂದ್ರ ಬಿಂದು!.

ಈ ಪಂದ್ಯದಲ್ಲಿ ಬಾಲಿವುಡ್ ನಟರ ತಂಡ 10 ಗೋಲುಗಳನ್ನು ಬಾರಿಸಿ ವಿಜಯಿಯಾಯಿತು, ಇತ್ತ ಸಂಸತ್ ಸದಸ್ಯರಿಗೆ ಬಾಲಿವುಡ್ ತಾರೆಯರ ಮುಂದೆ ಒಂದೇ ಒಂದು ಗೋಲು ಬಾರಿಸಲು ಸಾಧ್ಯವಾಗಲೇ ಇಲ್ಲ. ಬಾಲಿವುಡ್ ತಂಡದ ಪರವಾಗಿ ರಣ್‍ಬೀರ್ ಕಪೂರ್ 5 ಗೋಲುಗಳನ್ನು ಬಾರಿಸಿದ್ದು, ಡಿನೋ ಮೋರಿಯಾ 2 ಗೋಲು ಬಾರಿಸಿದ್ದರು,

ಇಲ್ಲಿದೆ ವಿಡಿಯೊ

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT