ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟೆ: ಪ್ರಧಾನಿಗೆ ದೂರು

ಮೋದಿ ಭೇಟಿ ಮಾಡಿದ ತಮಿಳುನಾಡು ರೈತರ ನಿಯೋಗ
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸರ್ಕಾರ ಮೇಕೆ­ದಾಟು ಬಳಿ ನಿರ್ಮಿಸುತ್ತಿರುವ ಅಣೆಕಟ್ಟೆ ತಮಿಳುನಾಡು ಹಿತಾಸಕ್ತಿಗೆ ಧಕ್ಕೆ ಉಂಟು­ಮಾಡುವುದರಿಂದ ಕೂಡಲೇ ಮಧ್ಯ ಪ್ರವೇಶಿಸುವಂತೆ ಆ ರಾಜ್ಯದ ರೈತರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಆಗ್ರಹಿಸಿದೆ.

ಮೋದಿ ಅವರನ್ನು ಭೇಟಿ ಮಾಡಿದ್ದ ರೈತರ ನಿಯೋಗವು ಕಾವೇರಿಗೆ ಕರ್ನಾಟಕ ರಾಜ್ಯವು ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುತ್ತಿರುವುದರಿಂದ ತಮಿಳು­ನಾಡು ಅದರಲ್ಲೂ ನದಿ ಪಾತ್ರದ ರೈತರಿಗೆ ತೀವ್ರ ತೊಂದರೆಯಾಗಲಿದೆ ಎಂದು ವಿವರಿಸಿತು.
ಕರ್ನಾಟಕದ ಕ್ರಮದಿಂದ ನದಿ ಕೆಳಗಿನ ರಾಜ್ಯವಾಗಿರುವ ತಮಿಳುನಾಡಿ­ನಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಲಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ರಾಜ್ಯಸಭೆ ಸದಸ್ಯ ಡಿ. ರಾಜ ಆರೋಪಿಸಿದರು.

ಕಾವೇರಿ ನ್ಯಾಯ ಮಂಡಳಿ ಐತೀರ್ಪು ಜಾರಿ ಮಾಡುವಂತೆಯೂ  ನಿಯೋಗವು ಒತ್ತಾಯಿ­ಸಿತು. ಐತೀರ್ಪಿ­­ನಲ್ಲಿ ಕಾವೇರಿ ನೀರು ನಿರ್ವ­ಹಣಾ ಮಂಡಳಿ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸುವಂತೆ ಶಿಫಾರಸು ಮಾಡಿದೆ. ಕೇಂದ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದೂ ಈ ನಿಯೋಗ ಆಗ್ರಹಿಸಿತು.

ಪ್ರಧಾನಿ ಭರವಸೆ: ರೈತರ ಸಮಸ್ಯೆ­ಗಳನ್ನು ಸಹಾನುಭೂ­ತಿಯಿಂದ ಪ್ರಧಾನಿ ಕೇಳಿಸಿ­ಕೊಂಡರು. ಬೇಡಿಕೆ ಪರಿಶೀಲಿಸು­ವು­ದಾಗಿ ಭರವಸೆ ನೀಡಿದರು ಎಂದು ಡಿ. ರಾಜ ಪತ್ರಕರ್ತರಿಗೆ ತಿಳಿಸಿದರು. ಕಳೆದ ವಾರ ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ತಿರುಚಿ ಶಿವ, ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುತ್ತಿ­ರುವ ವಿಷಯ ಪ್ರಸ್ತಾ­ಪಿಸಿ, ಕೂಡಲೇ ಕರ್ನಾಟಕದ ಕ್ರಮವನ್ನು ತಡೆಯಬೇಕು ಎಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT