ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್‌ ವಾಪಸು ಪಡೆದುಕೊಳ್ಳಿ!

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬುದು ಹಳೆಯ ಮಾತು. ಈಗ ಅದಕ್ಕೆ ‘ಇ–ಮೇಲ್‌, ಮೆಸೇಜ್‌ ಕಳುಹಿಸಿದರೆ ಹೋಯಿತು’ ಎಂಬುದನ್ನೂ ಸೇರಿಸಬಹುದು. ಕಳುಹಿಸಿದ ಇ–ಮೇಲ್‌ ಮತ್ತು ಮೊಬೈಲ್ ಸಂದೇಶವನ್ನು ವಾಪಸು ಪಡೆಯಲು ಆಗುವುದಿಲ್ಲವಲ್ಲ.

ಯಾರಿಗೋ ಕಳುಹಿಸಬೇಕಾದ ವೈಯಕ್ತಿಕ ವಿಚಾರಗಳು ಎಚ್ಚರ ತಪ್ಪಿ ಇನ್ಯಾರಿಗೋ ರವಾನೆಯಾಗುವ ಸಾಧ್ಯತೆಯೂ ಇರುತ್ತದೆ. ಅಂಥ ಸಮಯದಲ್ಲಿ ಅದನ್ನು ಹಿಂದಿರುಗಿ ಪಡೆಯಲೂ ಸಾಧ್ಯವಿರುವುದಿಲ್ಲ. ಆದರೆ ಈಗ ಒಮ್ಮೆ ಕಳುಹಿಸಿದ ಇ–ಮೇಲ್ ಅನ್ನು ವಾಪಸ್‌ ಪಡೆಯಬಹುದು. ಸ್ವೀಕೃತಿದಾರರು ಅದನ್ನು ಬೇರೊಬ್ಬರಿಗೆ ಫಾರ್ವರ್ಡ್‌ ಮಾಡದಂತೆಯೂ ತಡೆಯಬಹುದು. ಜಿಮೇಲ್ ಇಂಥದ್ದೊಂದು ‘ಡಿಮೇಲ್‌’ ಸೌಲಭ್ಯವನ್ನು ಪ್ರಾರಂಭಿಸಿದೆ. ಗೂಗಲ್‌ ಕ್ರೋಮ್‌ನ ಎಕ್ಸ್‌ಟೆನ್ಷನ್‌ ಬ್ರೌಸರ್‌ ಇದು. ನೀವು ಕಳುಹಿಸುವ ಜಿಮೇಲ್‌ನ ಮೇಲೆ ನಿಯಂತ್ರಣ ಹೊಂದುವ ಅವಕಾಶವನ್ನು ಇದು ನೀಡುತ್ತದೆ.

    ಜಿಮೇಲ್ ಮೂಲಕ ಮಿಂಚಂಚೆ ರವಾನಿಸುವಾಗಲೇ ಒಂದು ಗಂಟೆಯಿಂದ ಒಂದು ವಾರದ ಅವಧಿಯಲ್ಲಿ ಆ ಸಂದೇಶ ತಾನಾಗಿಯೇ ಅಳಿಸಿ ಹೋಗುವಂತೆ ನಿರ್ದಿಷ್ಟ ಸಮಯವನ್ನು ಅಳವಡಿಸಬಹುದು. ಅಲ್ಲದೆ, ಸ್ವೀಕೃತಿದಾರರು ಅದನ್ನು ತೆರೆಯಲು ಸಾಧ್ಯವಾಗದಂತೆ, ಅದೇ ರೀತಿ ನಿರ್ದಿಷ್ಟ ಸಮಯದಲ್ಲಿ ಸಂದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. ಸೋಷಿಯಲ್ ಬುಕ್‌ಮಾರ್ಕಿಂಗ್‌ ಸೇವೆ ನೀಡಿದ ಡೆಲೀಷಿಯಸ್‌ ಈ ವಿನೂತನ ಸೌಲಭ್ಯವನ್ನು ಸಿದ್ಧಪಡಿಸಿದೆ.

ಪಿಡಿಎಫ್‌ನಂತಹ ಡಾಕ್ಯುಮೆಂಟ್‌ಗಳಿಗೂ ಸ್ವಯಂ–ನಾಶದ ಟೈಮರ್‌ಗಳನ್ನು ನಿಗದಿಪಡಿಸುವಂತೆ ಅಪ್ಲಿಕೇಷನ್‌ ಅನ್ನು ವಿಸ್ತರಿಸುವಲ್ಲಿ ಈ ತಂಡ ತೊಡಗಿದೆ. ಜಿಮೇಲ್‌ನಲ್ಲಿ ಕಳುಹಿಸುವ ಸಂದೇಶವನ್ನು ಅನ್‌ಡು ಮಾಡಲು 30 ಸೆಕಂಡುಗಳ ಸಮಯ ಮಾತ್ರ ಇರುತ್ತದೆ. ಆದರೆ ಡಿಮೇಲ್‌ ಮೂಲಕ ಅದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ನಾಶಪಡಿಸಬಹುದು. ಅಂದಹಾಗೆ, ಈ ಸೌಲಭ್ಯ ಜಿಮೇಲ್‌ನೊಂದಿಗೇ ಸೇರಿಕೊಂಡಿಲ್ಲ. ಡಿಮೇಲ್‌ ಸೌಲಭ್ಯವನ್ನು ಬಳಕೆದಾರರು ಇನ್‌ಸ್ಟಾಲ್ ಮಾಡಿಕೊಳ್ಳಬೇಕಷ್ಟೇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT